ಮುಂಬಯಿ: ಮಹಿಳೆಯ ಮೃತದೇಹವಿದ್ದ ಪ್ಲಾಸ್ಟಿಕ್ ಬ್ಯಾಗ್ (Decomposed Body Of Woman) ಮುಂಬಯಿಯ ಲಾಲ್ಬಾಗ್ ಏರಿಯಾದಲ್ಲಿ ಪತ್ತೆಯಾಗಿದ್ದು, ಕಾಲಾಚೌಕಿ ಠಾಣೆ ಪೊಲೀಸರು ಮೃತ ಮಹಿಳೆಯ 22ವರ್ಷದ ಪುತ್ರಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಶವವನ್ನು ಪೋಸ್ಟ್ಮಾರ್ಟಮ್ಗೆ ಕಳಿಸಲಾಗಿದೆ. ಹೀಗೆ ಪ್ಲಾಸ್ಟಿಕ್ ಬ್ಯಾಗ್ನಲ್ಲಿ, ಶವದ ರೂಪದಲ್ಲಿ ಪತ್ತೆಯಾದ ಮಹಿಳೆಯ ಹೆಸರು ವೀಣಾ ಪ್ರಕಾಶ್ ಎಂದಾಗಿದ್ದು, 53 ವರ್ಷ. ಮಹಿಳೆಯ ಕಾಲು, ಕೈಗಳನ್ನು ಕತ್ತರಿಸಿ, ಪ್ಲಾಸ್ಟಿಕ್ ಬ್ಯಾಗ್ನಲ್ಲಿ ತುಂಬಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: Cow Attack | ಬೀದಿ ದನ ಇರಿದು ಮಹಿಳೆ ಸಾವು; ಮೃತದೇಹವಿಟ್ಟು ಕುಟುಂಬಸ್ಥರ ಪ್ರತಿಭಟನೆ
ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದ ಗೂಡ್ಸ್ ರೈಲು ಪ್ಲಾಟ್ಫಾರ್ಮ್ನಲ್ಲಿ ಒಂದು ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್ನಲ್ಲಿ ಯುವತಿಯ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ಲಾಟ್ಫಾರ್ಮ್ ನಂ.1ರಲ್ಲಿ ಇದ್ದ ಆ ಡ್ರಮ್ನಲ್ಲಿ ಬಟ್ಟೆಗಳೇ ತುಂಬಿದ್ದವು. ಆದರೆ ಅಲ್ಲಿಂದ ಕೆಟ್ಟ ವಾಸನೆ ಬರುತ್ತಿತ್ತು. ಅಲ್ಲಿ ಕಸಗುಡಿಸುತ್ತಿದ್ದಾಕೆ ಈ ಬಗ್ಗೆ ರೈಲ್ವೆ ಪೊಲೀಸರಿಗೆ ಹೇಳಿದಾಗ ಅವರು ಹೋಗಿ ಪರಿಶೀಲನೆ ನಡೆಸಿದ್ದರು. ಆಗ ಶವ ಪತ್ತೆಯಾಗಿತ್ತು. ಅದಕ್ಕೂ ಮುನ್ನ ಬಂಗಾರಪೇಟೆ-ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ರೈಲಿನ ಸೀಟ್ವೊಂದರ ಅಡಿಯಲ್ಲಿ ಇದ್ದ ಹಳದಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು.