Site icon Vistara News

ಸ್ಕಿಪ್ಪಿಂಗ್‌ ರೋಪ್‌ ಉರುಳಾಗಿ ಹತ್ತು ವರ್ಷದ ಬಾಲಕ ಸಾವು

skipping rope

ನವ ದೆಹಲಿ: ಸ್ಕಿಪ್ಪಿಂಗ್‌ ಆಡುತ್ತಿದ್ದ ಹತ್ತು ವರ್ಷದ ಬಾಲಕನಿಗೆ ಆಟಿಕೆಯೇ ಉರುಳಾಗಿ ಜೀವ ತೆಗೆದ ಘೋರ ಘಟನೆ ದೆಹಲಿಯ ಕರ್ತಾರ್‌ ನಗರ್‌ ಪ್ರದೇಶದಲ್ಲಿ ನಡೆದಿದೆ.

ಹತ್ತು ವರ್ಷದ ಈ ಪೋರ ಮುಸ್ಸಂಜೆಯ ಹೊತ್ತಿಗೆ ಮನೆಯಲ್ಲಿ ಸ್ಕಿಪ್ಪಿಂಗ್‌ ಆಡುತ್ತಿದ್ದ. ಆತನ ತಾಯಿ ಮೇಲಿನ ಮಹಡಿಯಲ್ಲಿದ್ದರು. ವಿದ್ಯುತ್‌ ಸಂಸ್ಥೆಯೊಂದರಲ್ಲಿ ಮ್ಯಾನೇಜರ್‌ ಆಗಿರುವ ಆತನ ತಂದೆ ಇನ್ನೂ ಮನೆಗೆ ಬಂದಿರಲಿಲ್ಲ. ಈ ಹೊತ್ತಿನಲ್ಲಿ ದುರದೃಷ್ಟವಶಾತ್‌ ಕೈಯಲ್ಲಿದ್ದ ಹಗ್ಗ ಆತನ ಕೊರಳಿಗೆ ಸುತ್ತಿಕೊಂಡಿತು. ತಕ್ಷಣವೇ ಉಸಿರುಕಟ್ಟಿತು ಎಂದ ಘಟನೆಯ ವಿವರ ನೀಡಿರುವ ಪೊಲೀಸರು ತಿಳಿಸಿದ್ದಾರೆ.

ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ಆಸ್ಪತ್ರೆಯವರು ನೀಡಿದ ಮಾಹಿತಿಯಿಂದಾಗಿ ಪೊಲೀಸರಿಗೆ ಈ ಘಟನೆಯ ಬಗ್ಗೆ ತಿಳಿದಿದೆ. ಯಾವುದಾದರೂ ಟಿವಿ, ವೀಡಿಯೋದಲ್ಲಿ ನೋಡಿದ್ದ ಸ್ಟಂಟ್‌ ಮಾಡಲು ಮಗು ಯತ್ನಿಸಿತೇ ಎಂಬುದನ್ನು ತಿಳಿಯಲು ಯತ್ನಿಸುತ್ತಿರುವುದಾಗಿ ಹೇಳಿರುವ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ. ಮೂಲಗಳ ಪ್ರಕಾರ ಮಗು ಸ್ಟಂಟ್‌ ವಿಡಿಯೋಗಳನ್ನು ಹೆಚ್ಚಾಗಿ ನೋಡುತ್ತಿತಂತೆ.

ಇದನ್ನೂ ಓದಿ | ಕುಟುಂಬದವರು ಹೊಲದ ಕೆಲಸ ಮುಗಿಸಿ ಬರುವ ವೇಳೆಗೆ ತಾಯಿ, ಇಬ್ಬರು ಮಕ್ಕಳು ಶವವಾಗಿದ್ದರು !

Exit mobile version