Site icon Vistara News

Man Stabs Woman | ಪ್ರೇಮ ನಿವೇದನೆ ತಿರಸ್ಕರಿಸಿದಳು ಎಂದು ಯುವತಿಗೆ 6 ಬಾರಿ ಚಾಕು ಇರಿದ ದುಷ್ಟ

Man Stabs Woman In Delhi

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದಿನೇದಿನೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಶ್ರದ್ಧಾ ವಾಳ್ಕರ್‌ ಭೀಕರ ಹತ್ಯೆಯಾಯಿತು. ಕೆಲ ದಿನಗಳ ಹಿಂದಷ್ಟೇ ಕಾರಿನ ಅಡಿಗೆ ಸಿಲುಕಿದ 20 ವರ್ಷದ ಯುವತಿಯನ್ನು ಚಾಲಕನು 12 ಕಿಲೋ ಮೀಟರ್‌ ಎಳೆದ ಪ್ರಕರಣ ದೇಶಾದ್ಯಂತ ಸುದ್ದಿಯಾಗಿದೆ. ಇದರ ಬೆನ್ನಲ್ಲೇ, ಪ್ರೇಮ ನಿವೇದನೆಯನ್ನು ತಿರಸ್ಕರಿಸಿದಳು ಎಂಬ ಕಾರಣಕ್ಕಾಗಿ ಯುವಕನೊಬ್ಬ ಯುವತಿಗೆ (Man Stabs Woman) ಆರು ಬಾರಿ ಚಾಕು ಇರಿದಿದ್ದಾನೆ.

ದೆಹಲಿಯ ಆದರ್ಶ ನಗರದಲ್ಲಿ ಜನವರಿ 2ರಂದು ಘಟನೆ ನಡೆದಿದೆ. ಸುಖವಿಂದರ್‌ ಸಿಂಗ್‌ (22) ಎಂಬಾತನು ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಜತೆ ಸ್ನೇಹ ಸಂಪಾದಿಸಿದ್ದಾನೆ. ಇದಾದ ಬಳಿಕ ಜನವರಿ 2ರಂದು ಮಧ್ಯಾಹ್ನ ಇಬ್ಬರೂ ಭೇಟಿಯಾಗಿದ್ದಾರೆ. ಇದೇ ವೇಳೆ ಸುಖವಿಂದರ್‌ ಸಿಂಗ್‌ ಪ್ರೇಮ ನಿವೇದನೆ ಮಾಡಿದ್ದಾನೆ. ಆದರೆ, ಇದಕ್ಕೆ ಯುವತಿಯು ಒಪ್ಪದ ಕಾರಣ ಆರು ಬಾರಿ ಚಾಕು ಇರಿದಿದ್ದಾನೆ. ಈ ಕುರಿತ ವಿಡಿಯೊ ಈಗ ವೈರಲ್‌ ಆಗಿದೆ.

ಪದೇಪದೆ ಯುವತಿಗೆ ಚಾಕುವಿನಿಂದ ಇರಿದ ಸುಖವಿಂದರ್‌ ಸಿಂಗ್‌, ಪರಾರಿಯಾಗಿದ್ದಾನೆ. ಇದಾದ ಬಳಿಕ ಪೊಲೀಸರು ಆತನನ್ನು ಅಂಬಾಲದಲ್ಲಿ ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಗಾಯಗೊಂಡಿದ್ದ ಯುವತಿಯನ್ನು ಜಹಾಂಗೀರ್‌ಪುರಿಯಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇದನ್ನೂ ಓದಿ | Accident In Delhi | ಅಂಜಲಿ ವಿಲವಿಲ ಎನ್ನುತ್ತಿದ್ದರೆ ಪೊಲೀಸರು ನಿರ್ಲಕ್ಷಿಸಿದರು, 9 ವ್ಯಾನ್‌ನಿಂದಲೂ ಕಾರ್‌ ಚೇಸ್‌ ಮಾಡಲು ಆಗಲಿಲ್ಲ?

Exit mobile version