ನವದೆಹಲಿ: ಸರ್ಕಾರಿ ಶಾಲೆ ಶಿಕ್ಷಿಯೊಬ್ಬರು ಐದನೇ ತರಗತಿಯ ವಿದ್ಯಾರ್ಥಿನಿಯನ್ನು ಶಾಲೆಯ ಮೊದಲನೆಯ ಅಂತಸ್ತಿನಿಂದ ಎಸೆದ ಘಟನೆ ದಿಲ್ಲಿಯಲ್ಲಿ (Delhi School) ನಡೆದಿದೆ. ತೀವ್ರ ಗಾಯಗಳಿಂದ ಬಳಲುತ್ತಿರುವ ಬಾಲಕಿ ವಂದನಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದ್ದು, ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಿಲ್ಲಿಯ ನಗರ ನಿಗಮ ಬಾಲಿಕಾ ವಿದ್ಯಾಲಯ ಶಾಲೆಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಶಿಕ್ಷಕಿ ಗೀತಾ, ಬಾಲಕಿಯನ್ನು ಶಾಲೆಯ ಮೊದಲನೆಯ ಅಂತಸ್ತಿನಿಂದ ಎಸೆಯು ಮುಂಚೆ, ಎರಡು ಜೋಡಿ ಕತ್ತರಿಯಿಂದ ಹೊಡೆದಿದ್ದಾರೆ ಕೂಡ. ಬಾಲಕಿಯನ್ನು ಹೊಡೆಯುತ್ತಿರುವಾಗ, ಮತ್ತೊಬ್ಬ ಶಿಕ್ಷಕಿ ರಿಯಾ ಮಧ್ಯಪ್ರವೇಶಿಸಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದ್ದಾರೆ.
ಮೊದಲನೆ ಅಂತಸ್ತಿನಿಂದ ಮಗು ಕೆಳಗೆ ಬೀಳುತ್ತಿದ್ದಂತೆ ದಾರಿಹೋಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ಬಳಿಕ ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಬಾರಾ ಹಿಂದೂ ರಾವ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ | Delhi School Scam | ಅಬಕಾರಿ ಪ್ರಕರಣದ ಬೆನ್ನಲ್ಲೇ ದಿಲ್ಲಿಯಲ್ಲಿ ಮತ್ತೊಂದು ಹಗರಣ ಸದ್ದು, ಏನಿದು ಕೇಸ್?