ರಾಯಚೂರು: ಬೋರ್ ವೆಲ್ ಬಳಿ ಕುಡಿಯುವ ನೀರು ತರಲು ಹೋದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಮೃತಪಟ್ಟಿರುವ ಘಟನೆ (Electric Shock) ಲಿಂಗಸುಗೂರು ತಾಲೂಕಿನ ದೇವರಭೂಪುರ ಗ್ರಾಮದಲ್ಲಿ ನಡೆದಿದೆ. ಬೋರ್ ವೆಲ್ ಬಳಿ ಅರೆ ಬರೆ ವಿದ್ಯುತ್ ಕಾಮಗಾರಿ ನಡೆಸಿದ್ದರಿಂದ ವಿದ್ಯುತ್ ಸ್ಪರ್ಶಿಸಿ ಬಾಲಕ ಕೊನೆಯುಸಿರೆಳೆದಿದ್ದಾನೆ.
ಬಸವರಾಜ್ (2) ಮೃತ ಬಾಲಕ. ಬೋರ್ ವೆಲ್ ಬಳಿ ಅರೆ ಬರೆ ವಿದ್ಯುತ್ ಕಾಮಗಾರಿ ಮಾಡಿದ್ದರಿಂದ ವಿದ್ಯುತ್ ತಂತಿಗಳು ಕೆಳಗೆ ನೇತಾಡುತ್ತಿದ್ದವು. ಈ ವೇಳೆ ಬಾಲಕ ಬೋರ್ ವೆಲ್ ಬಳಿ ಹೋದಾಗ ವಿದ್ಯುತ್ ತಗುಲಿತ್ತು. ನಂತರ ಆತನನ್ನು ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಬಾಲಕ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಪಂಚಾಯಿತಿ ಸಿಬ್ಬಂದಿ ಹಾಗೂ ಪಿಡಿಒ ಎಡವಟ್ಟಿನಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಬಾಲಕನ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಕೃಷ್ಣಾ ನದಿಯಲ್ಲಿ ಬಾಲಕನನ್ನು ಎಳೆದೊಯ್ದ ಮೊಸಳೆ
ರಾಯಚೂರು: ಕೃಷ್ಣಾ ನದಿಯಲ್ಲಿ ಬಾಲಕನನ್ನು ಮೊಸಳೆ ಎಳೆದೊಯ್ದ ಘಟನೆ ರಾಯಚೂರು ತಾಲೂಕಿನ ಗಂಜಳ್ಳಿ ಗ್ರಾಮದಲ್ಲಿ ನಡೆದಿದೆ. ಕುರಿಗಳಿಗೆ ನೀರು ಕುಡಿಸಲು ನದಿಗೆ ಇಳಿದಿದ್ದ ಬಾಲಕನನ್ನು ಮೊಸಳೆ ಬಲಿ (Crocodile Attack) ಪಡೆದಿದೆ. ಗಂಜಳ್ಳಿ ಗ್ರಾಮದ ವಿಶ್ವ (12) ಮೃತ ಬಾಲಕ. ಸ್ಥಳಕ್ಕೆ ರಾಯಚೂರು ಗ್ರಾಮಾಂತರ ಪೋಲಿಸರು ದೌಡಾಯಿಸಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿಯಿಂದ ಬಾಲಕನ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ | Murder Attempt: ಮಗು ಹೆಣ್ಣೋ ಗಂಡೋ ನೋಡಲು ಹೆಂಡತಿಯ ಹೊಟ್ಟೆ ಸೀಳಿದವನಿಗೆ ಜೀವಾವಧಿ ಶಿಕ್ಷೆ!
ಮಹಿಳೆ ಕಾಲಿನ ಮೇಲೆ ಹರಿದ ಬಸ್ ಚಕ್ರ
ವಿಜಯಪುರ: ಬಸ್ ಹತ್ತುವ ವೇಳೆ ಆಯುತಪ್ಪಿ ಬಿದ್ದ ಮಹಿಳೆ ಕಾಲಿನ ಮೇಲೆ ಬಸ್ ಚಕ್ರ ಹರಿದ ಘಟನೆ ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆ ಕಾಲಿಗೆ ತೀವ್ರ ಗಾಯಗಳಾಗಿವೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸಾಲುಟಗಿ ಗ್ರಾಮದ ಸಾವಿತ್ರಿಬಾಯಿ ಬಿರಾದಾರ ಗಾಯಗೊಂಡವರು. ವಿಜಯಪುರದಿಂದ ಇಂಡಿಗೆ ತೆರಳುವ KA 28 F 2492 ಸಂಖ್ಯೆಯ ಬಸ್ ಹರಿದಿದ್ದರಿಂದ ಮಹಿಳೆ ಗಾಯಗೊಂಡಿದ್ದು, ಅವರನ್ನು ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.