Site icon Vistara News

ಕುಡಿದು ಮಲಗಿದ ಮೇಲೆ ಸೆಕ್ಸ್​​ಗಾಗಿ ಜಗಳ; ಬೇಸರದಿಂದ ಬಾವಿಗೆ ಹಾರಿದ ಪತ್ನಿಯನ್ನು ರಕ್ಷಿಸಿ ಬಳಿಕ ಕೊಂದ ಪತಿ!

Fight Over Sex Man First Saves Wife from well and then killed Her

#image_title

ಜಶ್​ಪುರ್​: ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬುದೊಂದು ಗಾದೆಯಿದೆ. ಆದರೆ ಈ ಕಾಲದಲ್ಲಿ ಉಂಡು ಮಲಗಿದ ಮೇಲಷ್ಟೇ ಅಲ್ಲ, ಮರುದಿನವೂ ಮುಂದುವರಿಯುವಂಥ ಜಗಳಗಳು ಆಗುವುದೇ ಹೆಚ್ಚು ಬಿಡಿ. ಅದಿರಲಿ, ಈಗ ಛತ್ತೀಸ್​​ಗಢ್​​ನಲ್ಲಿ (Chhattisgarh News ) ಗಂಡ-ಹೆಂಡತಿಯ ಜಗಳ ‘ಕುಡಿದು’ ಮಲಗಿದ ಮೇಲೆ ಶುರುವಾಗಿ, ಕೊಲೆಯಲ್ಲಿ ಅಂತ್ಯಕಂಡಿದೆ. ಛತ್ತೀಸ್​ಗಢ್​​ನ ಜಶ್​ಪುರ್​ ಜಿಲ್ಲೆಯಲ್ಲಿ ಪತಿ ತನ್ನ ಪತ್ನಿಯನ್ನು ಹತ್ಯೆಗೈದಿದ್ದಾನೆ. ಲೈಂಗಿಕ ಕ್ರಿಯೆಗೆ ಬರುವಂತೆ ಆಕೆಯನ್ನು ಕೇಳಿದ್ದಕ್ಕೆ, ಅವಳು ಒಪ್ಪಲಿಲ್ಲ ಎಂಬ ಕಾರಣಕ್ಕೆ ಕೊಂದಿದ್ದಾನೆ..

ಗಂಡನ ಹೆಸರು ಶಂಕರ್​ ರಾಮ್​ ಮತ್ತು ಪತ್ನಿ ಆಶಾ ಬಾಯಿ. ಇವರಿಬ್ಬರೂ ಒಟ್ಟಾಗಿ ಸೋಮವಾರ ರಾತ್ರಿ ಕಂಠಪೂರ್ತಿ ಮದ್ಯಪಾನ ಮಾಡಿದ ಬಳಿಕ ಮಲಗಲು ಹೋಗಿದ್ದಾರೆ. ಆಗ ಶಂಕರ್​ ರಾಮ್​ ತನ್ನ ಪತ್ನಿಯನ್ನು ಸೆಕ್ಸ್​ಗಾಗಿ ಒತ್ತಾಯ ಮಾಡಿದ್ದಾನೆ. ಆದರೆ ಆಶಾ ಬಾಯಿ ಒಪ್ಪಲಿಲ್ಲ. ಇದೇ ವಿಷಯ ತಾರಕಕ್ಕೇರಿ, ಗಂಡ-ಹೆಂಡತಿ ಜಗಳವೂ ದೊಡ್ಡದಾಯಿತು. ಕುಡಿದ ಅಮಲು, ಕೋಪ ಮತ್ತು ಬೇಸರದಲ್ಲಿದ್ದ ಆಶಾ ಬಾಯಿ ಹೋಗಿ ಬಾವಿಗೆ ಹಾರಿದ್ದಾಳೆ.

ಇದನ್ನೂ ಓದಿ: Triple Talaq: ಆನ್‌ಲೈನ್‌ನಲ್ಲಿ 1.5 ಲಕ್ಷ ರೂ. ಕಳೆದುಕೊಂಡ ಪತ್ನಿಗೆ ತ್ರಿವಳಿ ತಲಾಕ್‌ ನೀಡಿದ ಪತಿ

ಪತ್ನಿ ಆಶಾ ಬಾವಿಗೆ ಹಾರಿದ್ದನ್ನು ನೋಡಿದ ಶಂಕರ್ ರಾಮ್​ ಆಕೆಯನ್ನು ರಕ್ಷಿಸಲೆಂದು ತಾನೂ ಬಾವಿಗೆ ಹಾರಿದ್ದಾನೆ. ಆಶಾಳನ್ನು ರಕ್ಷಣೆ ಮಾಡಿದ್ದಾನೆ. ಹೀಗೆ ಅವಳನ್ನು ಬಾವಿಯಿಂದ ಮೇಲೆತ್ತಿ ಕರೆದುಕೊಂಡು ಬಂದ ಶಂಕರ್​ ರಾಮ್​ ಮತ್ತೆ ಸೆಕ್ಸ್​ಗಾಗಿ ಜಗಳ ತೆಗೆದಿದ್ದಾನೆ. ಆದರೆ ಆಶಾ ಸುತಾರಾಂ ಒಪ್ಪಲಿಲ್ಲ. ಇಲ್ಲ, ನನಗೆ ಸೆಕ್ಸ್​ ಮಾಡಲು ಇಷ್ಟವಿಲ್ಲ ಎಂದು ಹೇಳಿದ್ದಾಳೆ. ಕೋಪಗೊಂಡ ಶಂಕರ್​ ರಾಮ್ ಆಕೆಯ ಖಾಸಗಿ ಭಾಗದ ಮೇಲೆಯೇ ಹಲ್ಲೆ ಮಾಡಿ, ಕೊಂದಿದ್ದಾನೆ. ಹೆಣದೊಂದಿಗೆ ರಾತ್ರಿಪೂರ್ತಿ ಕುಳಿತು ಕಾಲಕಳೆದಿದ್ದಾನೆ.

ಮರುದಿನ ಬೆಳಗ್ಗೆ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಶಂಕರ್​​ನನ್ನು ಅರೆಸ್ಟ್ ಮಾಡಿದ್ದಾರೆ. ಆಶಾ ಶವವನ್ನು ಪೋಸ್ಟ್​ಮಾರ್ಟಮ್​ಗೆ ಕಳಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ಠಾಣಾ ಉಸ್ತುವಾರಿ ಅಧಿಕಾರಿ ತಿಳಿಸಿದ್ದಾರೆ.

Exit mobile version