ಬೆಂಗಳೂರು: ರಸ್ತೆ ಬದಿಯ ಅಂಗಡಿಯಲ್ಲಿ ದುಡ್ಡು ಕೊಡದೆ ಬಜ್ಜಿ ಬೊಂಡಾ ತಿನ್ನುತ್ತಿದ್ದ ನಕಲಿ ಮಹಿಳಾ ಪೊಲೀಸ್ ವಿರುದ್ಧ ದೂರು ದಾಖಲಾಗಿದೆ. ಮಹಿಳಾ ‘ಪೊಲೀಸ್’ ಎಂದು ಧಮ್ಕಿ ಹಾಕಿ ನೂರು ರುಪಾಯಿಗೆ ಬಜ್ಜಿ ಬೊಂಡಾ ಪಡೆದು ಪದೇಪದೆ ಖರೀದಿಗೆ ಬರುತ್ತಿದ್ದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.
ತಾನು ಕೊಡಿಗೇಹಳ್ಳಿ ಪೊಲೀಸ್ ಆಗಿದ್ತಾದು, ಬಂದಾಗಲೆಲ್ಲ ಬಜ್ಜಿ ಕೊಡ್ಬೇಕು. ಇಲ್ಲದಿದ್ದಲ್ಲಿ ಅಂಗಡಿಯನ್ನು ಎತ್ತಂಗಡಿ ಮಾಡಿಸುವೆ ಎಂದು ಮಹಿಳೆ ಧಮಕಿ ಹಾಕುತ್ತಿದ್ದಳು ಎಂದು ಆರೋಪಿಸಲಾಗಿದೆ.
ಬ್ಯಾಟರಾಯನಪುರ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಬಜ್ಜಿ ಅಂಗಡಿ ಇಟ್ಟುಕೊಂಡಿದ್ದ ಶೇಕ್ ಸಲಾಂ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಪೊಲೀಸ್ ಆಗಿರಬಹುದು ಎಂಬ ಭಯಕ್ಕೆ ಪ್ರತಿ ನಿತ್ಯ ಶೇಕ್ ಸಲಾಂ ಬಜ್ಜಿ ಕೊಡುತ್ತಿದ್ದರು. ಆದರೆ ಮೊನ್ನೆ ಮತ್ತೆ ಕೇಳಿದಾಗ ವ್ಯಾಪಾರಿ ಪೊಲೀಸರಿಗೆ ಕರೆ ಮಾಡಿದ್ದ. ಕೂಡಲೇ ತನ್ನ ಬೈಕ್‌ನಲ್ಲಿ ಮಹಿಳೆ ಪರಾರಿಯಾಗಿದ್ದಾಳೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.