ಬೆಂಗಳೂರು/ಶಿವಮೊಗ್ಗ: ಬೆಂಗಳೂರಿನ ನಾಗರಭಾವಿಯಲ್ಲಿರುವ ನಮ್ಮೂರ ತಿಂಡಿ ಹೋಟೆಲ್ಗೆ ಬಂದವರು ಇಂದು ಗಾಬರಿಯಾಗಿ ಓಡಿ ಹೋಗಿದ್ದರು. ಇದಕ್ಕೆ ಕಾರಣವಾಗಿದ್ದು ಸ್ಟೀಮರ್. ಹೋಟೆಲ್ ಒಳಗಿನ ಅಡುಗೆ ಕೋಣೆಯಲ್ಲಿ ಸ್ಟೀಮರ್ (Steamer Blast) ಒಮ್ಮೆಲೆ ಸ್ಫೋಟಗೊಂಡಿದೆ. ಸ್ಫೋಟದಿಂದ (Fire Accident) ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ.
ಸ್ಟೀಮರ್ ಅಕ್ಕ ಪಕ್ಕ ನಿಂತಿದ್ದ ಮಹಿಳೆ ಸೇರಿ ಮೂವರ ಕಾಲು-ಕೈಗಳಿಗೆ ಗಾಯವಾಗಿದೆ. ಗಾಯಗೊಂಡು ನರಳಾಡುತ್ತಿದ್ದ ಗಾಯಾಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಐಶ್ವರ್ಯ, ಬಸಿಕುಮಾರ್, ಕಾರ್ತಿಕ್ ಗಾಯಾಳುಗಳು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Road Accident : ಯಮಸ್ವರೂಪಿ ಟ್ರಕ್ಗೆ ಮಸಣ ಸೇರಿದ ಬೆಂಗಳೂರಿಗರು; ಎರಡು ತುಂಡಾಯ್ತು ಬೈಕ್!
ಸ್ಟೀಮ್ ಬ್ಲಾಸ್ಟ್ನಿಂದಾಗಿ ಅಡುಗೆ ಸಾಮಾಗ್ರಿ ಅಸ್ತವ್ಯಸ್ತಗೊಂಡಿದೆ. ಸ್ಟೀಮರ್ ಪೂರ್ತಿಯಾಗಿ ಸುಟ್ಟು ಹೋಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಜ್ಞಾನಭಾರತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುಟ್ಟು ಭಸ್ಮವಾಯ್ತು ಮನೆ, ದಿನಸಿ ಅಂಗಡಿ
ಶಿವಮೊಗ್ಗದ ಸೊರಬದಲ್ಲಿ ಬೆಂಕಿ ಅನಾಹುತಕ್ಕೆ ದಿನಸಿ ಅಂಗಡಿ ಹಾಗೂ ಮನೆಯೊಂದು ಭಸ್ಮವಾಗಿದೆ. ಕುಮಾರ ಎನ್.ಬಿ. ಎಂಬುವವರಿಗೆ ಸೇರಿದ ಅಂಗಡಿ, ಮನೆಯು ನಿಸರಾಣಿ ವೃತ್ತದ ಮಾವಿನಮರದ ಪಕ್ಕದಲ್ಲೆ ಇದೆ. ಕುಮಾರ್ ನಿಸರಾಣಿ ಗ್ರಾ.ಪಂ. ಅಧ್ಯಕ್ಷರಾಗಿದ್ದಾರೆ. ಅಂಗಡಿಯಲ್ಲಿರುವ ಜೆರಾಕ್ಸ್ ಮಷಿನ್, ಫ್ರಿಡ್ಜ್ ಸೇರಿ ಮನೆಯಲ್ಲಿರುವ ವಸ್ತುಗಳೆಲ್ಲ ಬೆಂಕಿ ಆಹುತಿ ಆಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ