Site icon Vistara News

Fraud Case : ಲೀಸ್‌ಗೆ ಫ್ಲಾಟ್‌ ಪಡೆಯುವ ಮುನ್ನ ಎಚ್ಚರ; ರಾತ್ರೋರಾತ್ರಿ ಬೀದಿಗೆ ಬೀಳ್ತಿರಿ!

Be careful before getting a flat on lease

ಆನೇಕಲ್: ನೀವೆನಾದರೂ ಪೂರ್ವಪರ ವಿಚಾರಿಸದೇ ಲಕ್ಷ ಲಕ್ಷ ಹಣ ಕೊಟ್ಟು ಮನೆ ಲೀಜ್‌ ಪಡೆಯುವ ಮುನ್ನ (Fraud Case) ಎಚ್ಚರವಾಗಿರಿ. ಯಾಕೆಂದರೆ ಯಾವ ಕ್ಷಣದಲ್ಲಾದರೂ ಬ್ಯಾಂಕಿನವರು ನೀವಿರುವ ಮನೆಯನ್ನು ಸೀಜ್‌ ಮಾಡಬಹುದು. ಸದ್ಯ ಖತರ್ನಾಕ್‌ ದಂಪತಿಯ ಕೆಲಸಕ್ಕೆ ಗ್ರಾಹಕರು ಮನೆ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ.

ಆನೇಕಲ್ ಪೊಲೀಸ್ ಠಾಣೆಯಲ್ಲಿ ಸುಜಾತಾ ಹಾಗೂ ಅಜಿತ್ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ. ಆನೇಕಲ್-ಚಂದಾಪುರ ಮುಖ್ಯರಸ್ತೆಯಲ್ಲಿರುವ ವಿಬಿಹೆಚ್‌ಸಿ ಅಪಾರ್ಟ್ಮೆಂಟ್‌ನಲ್ಲಿ ಈ ದಂಪತಿಗೆ ಸೇರಿದ ಹತ್ತಾರು ಫ್ಲಾಟ್‌ಗಳಿವೆ. ಈ ಫ್ಲಾಟ್‌ಗಳನ್ನು ಲೀಜ್‌ಗೆ ನೀಡುವುದಾಗಿ ಜಾಹೀರಾತು ನೀಡುತ್ತಾರೆ. ಜಾಹೀರಾತು ನೋಡಿ ಬರುವ ಗ್ರಾಹಕರಿಂದ ಲಕ್ಷಾಂತರ ರೂಪಾಯಿ ಹಣವನ್ನು ಪಡೆಯುತ್ತಾರೆ.

ಸುಜಾತಾ ಹಾಗೂ ಅಜಿತ್‌ ವಂಚಕ ದಂಪತಿ

ಇತ್ತ ಗ್ರಾಹಕರು ಫ್ಲಾಟ್‌ಗೆ ಬರುವ ಮುನ್ನವೇ ಈ ದಂಪತಿ ಆ ಫ್ಲಾಟ್‌ ಮೇಲೆ ಬ್ಯಾಂಕ್‌ನಿಂದ ಲೋನ್ ಪಡೆಯುತ್ತಾರೆ. ಹೀಗೆ ಲೋನ್‌ ಪಡೆಯುವ ಇವರು ಇಎಂಐ ಕಟ್ಟದೇ ಸುಮ್ಮನಾಗಿದ್ದಾರೆ. ಇತ್ತ ಗ್ರಾಹಕರು ಫ್ಲಾಟ್‌ಗೆ ಬಂದ ಎರಡ್ಮೂರು ತಿಂಗಳಿಗೆ ಲೋನ್‌ ಕ್ಲಿಯರ್‌ ಮಾಡುವಂತೆ ಬ್ಯಾಂಕ್‌ನಿಂದ ನೋಟಿಸ್ ಬರುತ್ತೆ.

ಸದ್ಯ ಹೀಗೆ ಎಲ್ಲ ಫ್ಲಾಟ್‌ಗಳ ಮೇಲೂ ಈ ದಂಪತಿ ಲೋನ್‌ ಪಡೆದಿದ್ದು, ಆ ಎಲ್ಲ ಮನೆಗಳಿಗೆ ಬ್ಯಾಂಕ್‌ನಿಂದ ನೋಟಿಸ್‌ ಬಂದಿದೆ. ಬ್ಯಾಂಕ್‌ನಿಂದ ನೋಟಿಸ್ ಬಂದರೂ ಇವರಿಬ್ಬರು ತಲೆಕೆಡಿಸಿಕೊಂಡಿಲ್ಲ. ಇತ್ತ ಮಾಲೀಕರು ಲೋನ್‌ ಇಎಂಐ ಕಟ್ಟದ ಕಾರಣಕ್ಕೆ ಬ್ಯಾಂಕ್‌ನವರು ಆ ಮನೆಯ ಸಾಮಾನುಗಳ ಜತೆಗೆ ಬೀಗ ಜಡಿದು ಸೀಜ್‌ ಮಾಡಿದ್ದಾರೆ. ಇತ್ತ ದಿಢೀರ್‌ ಮನೆ ಸೀಜ್‌ ಆಗಿರುವುದರಿಂದ ಗ್ರಾಹಕರು ಕಂಗಲಾಗಿದ್ದಾರೆ.

ದಂಪತಿಯನ್ನು ವಶಕ್ಕೆ ಪಡೆದಿರುವ ಆನೇಕಲ್‌ ಪೊಲೀಸರು

ಲಕ್ಷಾಂತರ ಹಣ ನೀಡಿರುವ ಗ್ರಾಹರಿಗೆ ಅತ್ತ ಹಣವೂ ಇಲ್ಲದೆ, ಇತ್ತ ಫ್ಲಾಟ್ ಇಲ್ಲದೆ ಬೀದಿಗೆ ಬಂದಿದ್ದಾರೆ. ಹಣ ವಾಪಸ್‌ ಕೊಡುವಂತೆ ಕೇಳಿದರೆ ಇವರಿಬ್ಬರು ಅಲ್ಲಿಂದ ನಾಪತ್ತೆ ಆಗಿದ್ದರು. ಹೀಗಾಗಿ ಗ್ರಾಹಕರೇ ಇವರನ್ನು ಹುಡುಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಖತರ್ನಾಕ್ ದಂಪತಿಯ ವಿರುದ್ಧ ಆನೇಕಲ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ದಂಪತಿಯನ್ನು ವಶಕ್ಕೆ ಪಡೆದು, ತನಿಖೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version