Site icon Vistara News

ಮದ್ಯ ದರದಲ್ಲಿ ಮೋಸ ಖಂಡಿಸಿ Gandhigiri ಗಾಂಧಿ, ಅಂಬೇಡ್ಕರ್ ಪೋಟೊ ಇಟ್ಟು ಪ್ರೊಟೆಸ್ಟ್‌

ಹಾವೇರಿ: ವೈನ್ ಶಾಪ್‌ ಗಳು ಮದ್ಯಪ್ರಿಯರಿಗೆ ಮೋಸ ಮಾಡುತ್ತಿವೆ ಎಂದು ಆರೋಪಿಸಿ ಹಿರೇಕೆರೂರು ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರು ವಿನೂತನ ಪ್ರತಿಭಟನೆ ಮಾಡುತ್ತಿದ್ದಾರೆ.

ಪಟ್ಟಣ ಪಂಚಾಯಿತಿ ಸದಸ್ಯ ರಮೇಶ್‌ ಕಳೆದ ಒಂದು ವಾರದಿಂದ ಅಬಕಾರಿ ಇಲಾಖೆ ಕಚೇರಿ ಮುಂದೆ ಗಾಂಧಿ ಮತ್ತು ಅಂಬೇಡ್ಕರ್‌ ಅವರ ಭಾವಚಿತ್ರ ಇಟ್ಟು ಧರಣಿ ನಡೆಸುತ್ತಿದ್ದಾರೆ.

ಹಿರೆಕೇರೂರು ತಾಲೂಕಿನಲ್ಲಿ ಒಟ್ಟು 16 ಸಿಎಲ್-2 ವೈನ್ ಶಾಪ್ ಗಳಿವೆ. ಇವು ಸರ್ಕಾರದ ಆದೇಶಗಳನ್ನು ಪಾಲನೆ ಮಾಡುತ್ತಿಲ್ಲ. ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ಮೋಸ ಮಾಡುತ್ತಿವೆ. ಜತೆಗೆ ಮದ್ಯದ ದರವನ್ನು ವಿಪರೀತವಾಗಿ ಹೆಚ್ಚಿಸಿವೆ ಎನ್ನುವುದು ಅವರ ಆರೋಪ. ಅಬಕಾರಿ ಇಲಾಖೆಗೆ ಹಲವು ಬಾರಿ ದೂರುಗಳನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗದ ಕಾರಣ ಅಧಿಕಾರಿಗಳ ಹಾಗೂ ಸಮಾಜದ ಗಮನ ಸೆಳೆಯಲು ಹೋರಾಟ ಮಾಡುತ್ತಿರುವುದಾಗಿ ರಮೇಶ್‌ ಹೇಳಿದ್ದಾರೆ.

ಸಿಎಲ್ -2 ಲೈಸೆನ್ಸ್ ಹೊಂದಿದ ವೈನ್ ಶಾಪ್ಗಳು, ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಟ ಮಾರುತ್ತಿದ್ದಾರೆ. ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಬಿಸಿನೆಸ್ ಮಾಡುತ್ತಿದ್ದಾರೆ ಎಂದು ರಮೇಶ್‌ ಆರೋಪಿಸಿದ್ದಾರೆ.

ಆದರೆ ಈ ಪ್ರತಿಭಟನೆಯಿಂದ ಕರ್ತವ್ಯಕ್ಕೆ ಅಡ್ಡಿಯಾಗುತ್ತದೆ. ಹಾಗಾಗಿ ಜಾಗ ಖಾಲಿ ಮಾಡಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಯಾವುದೆ ಕಾರಣಕ್ಕೂ ನ್ಯಾಯ ಸಿಗುವವರೆಗೂ ಕದಲುವುದಿಲ್ಲ ಎಂದಿದ್ದಾರೆ ರಮೇಶ್‌. ಅವರ ವಿರುದ್ಧ ಪೋಲಿಸರಿಗೆ ದೂರು ನೀಡಲಾಗಿದೆ.

ಇದನ್ನು ಓದಿ | ಹಿಂದುಳಿದ ವರ್ಗಗಳ ರಾಜಕೀಯ ಪ್ರಾತಿನಿಧ್ಯ ಗುರುತಿಸಲು ನ್ಯಾಯಮೂರ್ತಿ ಭಕ್ತವತ್ಸಲ ಆಯೋಗ ರಚನೆ

Exit mobile version