Site icon Vistara News

ಆರೋಗ್ಯ ಕೇಂದ್ರದಲ್ಲಿ ನರ್ಸ್​ ಮೇಲೆ ಅಪ್ರಾಪ್ತ ವಯಸ್ಸಿನ ಹುಡುಗರಿಂದ ಗ್ಯಾಂಗ್​ರೇಪ್​; ಮಧ್ಯಾಹ್ನ ಹೊತ್ತಲ್ಲಿ ನಡೆಯಿತು ಕೃತ್ಯ

Gang rape by friends

ರಾಯ್ಪುರ: ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ನರ್ಸ್​ ಮೇಲೆ ಸಾಮೂಹಿಕ ಅತ್ಯಾಚಾರ ಆಗಿದೆ. ದೀಪಾವಳಿ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ರಜಾ ಇತ್ತು. ಆದರೂ ಏನಾದರೂ ತುರ್ತು ಸಂದರ್ಭ ಎದುರಾದರೆ ಎಂಬ ಕಾರಣಕ್ಕೆ ಈ ನರ್ಸ್​ ಬಂದು ಆರೋಗ್ಯ ಕೇಂದ್ರದ ಬಾಗಿಲು ತೆರೆದಿದ್ದು. ಆಕೆ ಒಬ್ಬರೇ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ನಾಲ್ವರು ಅಪ್ರಾಪ್ತ ವಯಸ್ಸಿನ ಹುಡುಗರು ಅತ್ಯಾಚಾರ ಎಸಗಿದ್ದಾರೆ. ಅವರೆಲ್ಲರೂ 17 ವರ್ಷ ಒಳಗಿನವರೇ ಆಗಿದ್ದು, ಸದ್ಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬಾತ ತಪ್ಪಿಸಿಕೊಂಡಿದ್ದಾನೆ.

ಈ ಘಟನೆ ನಡೆದಿದ್ದು ಛತ್ತೀಸ್​ಗಢದ ಮನೇಂದ್ರಗಢ-ಚಿರ್ಮಿರಿ-ಭಾರತಪುರ ಜಿಲ್ಲೆಯಲ್ಲಿ ನಡೆದಿದೆ. ಇನ್ನೂ ಸ್ವಲ್ಪ ಹೊತ್ತು ಕಳೆದಿದ್ದರೆ ಆ ನರ್ಸ್​ ಕೂಡ ಆರೋಗ್ಯ ಕೇಂದ್ರದಿಂದ ಹೊರಡುತ್ತಿದ್ದರು. ಅಷ್ಟರಲ್ಲಾಗಲೇ ದುರಂತ ನಡೆದುಹೋಗಿದೆ.
ಮಧ್ಯಾಹ್ನ ಹೊತ್ತಾಗಿತ್ತು. ನರ್ಸ್​ ಒಬ್ಬರೇ ಆರೋಗ್ಯ ಕೇಂದ್ರದಲ್ಲಿ ಕುಳಿತು ಏನೋ ಕೆಲಸ ಮಾಡುತ್ತಿದ್ದುದನ್ನು ನೋಡಿದ ನಾಲ್ವರು ಹುಡುಗರು ಒಳನುಗ್ಗಿದರು. ನರ್ಸ್​ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಸಂಜೆ 5ಗಂಟೆವರೆಗೆ ಅವರನ್ನು ಒತ್ತೆಯಾಳಾಗಿ ಇಟ್ಟುಕೊಂಡು ಅತ್ಯಾಚಾರ ಎಸಗಿದ್ದಾರೆ. ಅಲ್ಲಿಂದ ಹೋಗುವಾಗ ನರ್ಸ್​ಗೆ, ‘ಪೊಲೀಸರಿಗೆ ದೂರು ನೀಡಿದರೆ ಹತ್ಯೆ ಮಾಡುತ್ತೇವೆ’ ಎಂದು ಬೆದರಿಕೆಯನ್ನೂ ಹಾಕಿ ಹೋಗಿದ್ದರು.

ಆರೋಗ್ಯ ಕೇಂದ್ರದಿಂದ ಸುಮಾರು 5 ಕಿಮೀ ದೂರದಲ್ಲಿರುವ ತಮ್ಮ ಮನೆಗೆ ಬಂದ ನರ್ಸ್​ ತಂದೆ-ತಾಯಿ ಬಳಿ ವಿಷಯ ಹೇಳಿಕೊಂಡಿದ್ದಾರೆ. ಅವರು ಕೂಡಲೇ ಮಗಳನ್ನು ಕರೆದುಕೊಂಡು ಪೊಲೀಸ್​ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ದೂರು ದಾಖಲಾದ ಕೆಲವೇ ಕ್ಷಣದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಬಳಿಕ ಇನ್ನೊಬ್ಬಾತ ಸೆರೆಸಿಕ್ಕ. ನಾಲ್ಕನೇಯವನು ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, 24 ಗಂಟೆಯಲ್ಲಿ ಆರೋಪಿಗಳ ಬಂಧನ

Exit mobile version