ಲಖನೌ: ಹಿಂದೂ ಸಂಘಟನೆಗಳ ಪರ ಗುರುತಿಸಿಕೊಂಡಿದ್ದಕ್ಕೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ವೈದ್ಯರೊಬ್ಬರಿಗೆ ಶಿರಚ್ಛೇದ ಮಾಡುವ ಬೆದರಿಕೆ (Death Threat) ಹಾಕಲಾಗಿದೆ. ಅಮೆರಿಕ ಮೂಲದ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ ಬೆದರಿಕೆ ಹಾಕಿದ್ದು, “ಹಿಂದೂ ಸಂಘಟನೆಗಳಿಗೆ ಬೆಂಬಲ ನೀಡಬಾರದು. ಇಲ್ಲದಿದ್ದರೆ ಶಿರಚ್ಛೇದ ಮಾಡಲಾಗುವುದು” ಎಂದಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಂದರೂ ನಿನ್ನನ್ನು ಕಾಪಾಡಲು ಆಗುವುದಿಲ್ಲ. ನಿನ್ನ ಮೇಲೆ ಕಣ್ಣಿಟ್ಟಿದ್ದೇವೆ. ಹೀಗೆಯೇ ಹಿಂದೂ ಸಂಘಟನೆಗಳ ಪರ ಕೆಲಸ ಮಾಡಿದರೆ ಶಿರಚ್ಛೇದ ಮಾಡಲಾಗುವುದು” ಎಂಬುದಾಗಿ ವೈದ್ಯ ಅರವಿಂದ್ ವ್ಯಾಟ್ಸ್ ಅವರಿಗೆ ಬೆದರಿಸಿದ್ದಾರೆ.
ಲೋಹಿಯಾ ನಗರದಲ್ಲಿ ಡಾ.ಅರವಿಂದ್ ವ್ಯಾಟ್ಸ್ ಕ್ಲಿನಿಕ್ ನಡೆಸುತ್ತಿದ್ದಾರೆ. ಅವರಿಗೆ ಅಮೆರಿಕ ಮೂಲದ ಮೊಬೈಲ್ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿದೆ” ಎಂದು ಪೊಲೀಸರು ತಿಳಿಸಿದ್ದಾರೆ. “ಸೆಪ್ಟೆಂಬರ್ ೭ರಂದು ಕರೆ ಮಾಡಿ ಬೆದರಿಕೆ ಒಡ್ಡಲಾಗಿದೆ” ಎಂದು ಅರವಿಂದ್ ತಿಳಿಸಿದ್ದಾರೆ. ಈ ಕುರಿತು ಘಾಜಿಯಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Death Threat | ನಿನ್ನ ಕತೆ ಮುಗಿಯಿತು, ಸಮೀರ್ ವಾಂಖೆಡೆಗೆ ಜೀವ ಬೆದರಿಕೆ