ಪೀಲೀಭಿತ್: ಉತ್ತರ ಪ್ರದೇಶದ ಪೀಲೀಭೀತ್ನಲ್ಲಿ 10 ವರ್ಷದ ಬಾಲಕಿಯನ್ನು ಅತ್ಯಂತ ಭೀಕರ ಸ್ವರೂಪದಲ್ಲಿ ಹತ್ಯೆಗೈಯಲ್ಲಾಗಿದೆ. ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಆಕೆಯ ಮೃತದೇಹ ಮನೆ ಸಮೀಪದ ಗೋಧಿ ಹೊಲದಲ್ಲಿ ಪತ್ತೆಯಾಗಿದೆ. ಆದರೆ ಆಕೆಯ ಮೃತದೇಹ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಬಾಲಕಿಯ ಹೊಟ್ಟೆಯನ್ನು ಕತ್ತರಿಸಲಾಗಿದ್ದು, ಹೊಟ್ಟೆ ತೆರೆದ ಸ್ಥಿತಿಯಲ್ಲಿದೆ. ಒಳಗಿನ ಅಂಗಾಂಗಳನ್ನೆಲ್ಲ ಕಿತ್ತು, ಅಲ್ಲೇ ಎಸೆಯಲಾಗಿದೆ. ಅತ್ಯಂತ ಕ್ರೂರವಾಗಿ, ಇಡೀ ದೇಹವನ್ನು ವಿರೂಪಗೊಳಿಸಿ ಹತ್ಯೆ ಮಾಡಲಾಗಿದೆ.
10 ವರ್ಷದ ಬಾಲಕಿ ಶುಕ್ರವಾರ ತನ್ನ ಚಿಕ್ಕಪ್ಪ ಮತ್ತು ಕುಟುಂಬದ ಇತರ ಸದಸ್ಯರೊಂದಿಗೆ ಜಾತ್ರೆಯೊಂದಕ್ಕೆ ಹೋಗಿದ್ದಳು. ಆಗಲೇ ಕಣ್ಮರೆಯಾಗಿದ್ದಳು. ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಈಗ ಎರಡು ದಿನಗಳ ಬಳಿಕ ಆಕೆ ಮೃತದೇಹ ಮಾಧೋಪುರ ಎಂಬ ಗ್ರಾಮದ ಹೊರವಲಯದಲ್ಲಿರುವ ಗೋಧಿ ಹೊಲದಲ್ಲಿ ಸಿಕ್ಕಿದೆ. ಆಕೆಯ ಚಪ್ಪಲಿಯೂ ಅಲ್ಲೇ ಇದೆ ಎಂದು ಸ್ಥಳೀಯ ಎಸ್ಪಿ ದಿನೇಶ್ ಕುಮಾರ್ ಪ್ರಭು ಮಾಹಿತಿ ನೀಡಿದ್ದಾರೆ.
ಈ ಕೇಸ್ನಲ್ಲಿ ಶಕಿಲ್ ವೈಸ್ತವ್ ಎಂಬಾತನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈತನಿಗೆ ಬಾಲಕಿಯ ತಂದೆಯೊಂದಿಗೆ ವೈರತ್ವ ಇತ್ತು ಎನ್ನಲಾಗಿದ್ದು, ಕುಟುಂಬದವರು ಇವನ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಬಾಲಕಿಯ ಮೃತದೇಹವನ್ನು ಪೋಸ್ಟ್ಮಾರ್ಟಮ್ಗೆ ಕಳಿಸಲಾಗಿದೆ.
ಇದನ್ನೂ ಓದಿ: Crime News | KRSನಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಕಲ್ಲು ಹೊತ್ತು ಹಾಕಿ ಭೀಕರ ಹತ್ಯೆ: ಇಲ್ಲೇ ನಡೆದಿತ್ತು ಸಾಮೂಹಿಕ ಕೊಲೆ!