Site icon Vistara News

ತನ್ನ ಮೇಲೆ ಅತ್ಯಾಚಾರ ಮಾಡಿದ ಹುಡುಗನ ಅಮ್ಮನಿಗೆ ಗುಂಡು ಹಾರಿಸಿದ ಯುವತಿ; ಮಹಿಳೆ ಸ್ಥಿತಿ ಗಂಭೀರ

Man Shoots Employer In Noida

ದೆಹಲಿಯಲ್ಲೊಬ್ಬಳು 16 ವರ್ಷದ ಹುಡುಗಿ, 50 ವರ್ಷದ ಮಹಿಳೆಗೆ ಗುಂಡು ಹಾರಿಸಿದ್ದಾಳೆ. ಕಿರಾಣಿ ಅಂಗಡಿ ನಡೆಸುತ್ತಿದ್ದ ಮಹಿಳೆ, ಎಂದಿನಂತೆ ಅಂಗಡಿಯಲ್ಲಿ ಕುಳಿತಿದ್ದಳು. ಶನಿವಾರ ಸಂಜೆ 5.30ರ ಹೊತ್ತಿಗೆ ಪಿಸ್ತೂಲ್​ ಹಿಡಿದು ಅಲ್ಲಿಗೆ ಹೋದ ಹುಡುಗಿ, ಏಕಾಏಕಿ ಮಹಿಳೆ ಮೇಲೆ ಫೈರಿಂಗ್ ಮಾಡಿದ್ದಾಳೆ. ಸದ್ಯ ಮಹಿಳೆಯನ್ನು ಜಿಟಿಬಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದ್ದು, ಹುಡುಗಿಯನ್ನು ಪೊಲೀಸರು ಬಂಧಿಸಿದ್ದಾರೆ. ಆ ಮಹಿಳೆಯ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಮಗ ಮಾಡಿದ ತಪ್ಪಿಗೆ ಅವನಮ್ಮನಿಗೆ ಶಿಕ್ಷೆ ಕೊಟ್ಟಿದ್ದಾಳೆ ಈ ಹುಡುಗಿ. ಅದನ್ನೇ ಪೊಲೀಸರ ಎದುರು ಹೇಳಿಕೊಂಡಿದ್ದಾಳೆ. 2021ರಲ್ಲಿ ಈ ಮಹಿಳೆಯ ಮಗ ನನ್ನ ಮೇಲೆ ಅತ್ಯಾಚಾರ ಮಾಡಿದ್ದ. ಆತನ ವಿರುದ್ಧ ನಾನು ದೂರು ಕೊಟ್ಟಿದ್ದೇನೆ. ಅವನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆತ ನನ್ನ ಮೇಲೆ ರೇಪ್​ ಮಾಡಿದ್ದಕ್ಕೆ, ಅವನ ಅಮ್ಮನಿಗೆ ಶೂಟ್ ಮಾಡಿದೆ ಎಂದು ಹೇಳಿಕೊಂಡಿದ್ದಾಳೆ. ಆ ಹುಡುಗನೂ ಅಪ್ರಾಪ್ತ ವಯಸ್ಸಿನವನೇ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ: Santro Ravi case | 1995ರಲ್ಲೇ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದ ಸ್ಯಾಂಟ್ರೋ ರವಿ!

Exit mobile version