ಮೀರತ್: ಸರ್ಕಾರಿ ಕಾಲೇಜಿನ ಪ್ರಾಂಶುಪಾಲರೊಬ್ಬರು 17 ವರ್ಷದ ಹುಡುಗಿಗೆ ಅಮಲು ಪದಾರ್ಥಗಳನ್ನು ನೀಡಿ, ರೇಪ್ ಮಾಡಿದ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನವೆಬರ್ 23ರಂದು ಆರೋಪಿ ಪ್ರಿನ್ಸಿಪಾಲ್ 9 ವಿದ್ಯಾರ್ಥಿಗಳೊಂದಿಗೆ ವೃಂದಾವನಕ್ಕೆ ಪ್ರವಾಸ ಕೈಗೊಂಡಿದ್ದರು. ಈ ವೇಳೆ, ವಿದ್ಯಾರ್ಥಿನಿಯರು ಉಳಿಯಲು ಎರಡು ಹೊಟೇಲ್ ರೂಮ್‌ಗಳನ್ನು ಬಾಡಿಗೆಗೆ ಪಡೆದಿದ್ದರು. ಒಂದು ರೂಮಿನಲ್ಲಿ 8 ಹುಡುಗಿಯರಿಗೆ ಉಳಿಯಲು ಅವಕಾಶ ನೀಡಿದರೆ, ಮತ್ತೊಂದು ರೂಮಿನಲ್ಲಿ 11ನೇ ಕ್ಲಾಸ್ ಓದುತ್ತಿದ್ದ ವಿದ್ಯಾರ್ಥಿನಿ ಜತೆ ಪ್ರಾಂಶುಪಾಲರು ಉಳಿದುಕೊಂಡಿದ್ದರು. ಈ ವೇಳೆ, ಆಕೆಗೆ ಅಮಲು ಬರುವ ಪದಾರ್ಥಗಳನ್ನು ನೀಡಿ, ರೇಪ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವೇಳೆ, ಸಂತ್ರಸ್ತ ವಿದ್ಯಾರ್ಥಿನಿ ಪ್ರತಿರೋಧ ತೋರಿದಾಗ ಆರೋಪಿ ಪ್ರಿನ್ಸಿಪಾಲ್ ಪರೀಕ್ಷೆಯಲ್ಲಿ ಫೇಲ್ ಮಾಡುವ ಮತ್ತು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ನವೆಂಬರ್ 24 ಸಂತ್ರಸ್ತ ಹುಡುಗಿ ಮನೆಗೆ ಮರಳಿದ್ದಾಳೆ. ಮೊದಲಿಗೆ ಈ ವಿಷಯದ ಬಗ್ಗೆ ಮಾತನಾಡದ ಹುಡುಗಿ ನಂತರ ನಡೆದ ಎಲ್ಲ ವಿಷಯವನ್ನು ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಆಗ ಹುಡುಗಿಯ ತಂದೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ | Sexual Assault | ಶಾಲೆಗೆ ಹೋಗಿದ್ದ ಬಾಲಕಿ ಅಪಹರಣ; ಗುಜರಾತಿಗೆ ಹೊತ್ತೊಯ್ದ ಯುವಕನಿಂದ ಅತ್ಯಾಚಾರ