ಗಾಂಧಿನಗರ: “ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ” ಎಂಬ ಮಾತಿದೆ. ಆದರೆ, ಗುಜರಾತ್‌ನ ಅಹಮದಾಬಾದ್‌ನಲ್ಲಿ ಗಂಡ-ಹೆಂಡತಿ ಜಗಳವು 12ನೇ ಮಹಡಿಯಿಂದ ಜಿಗಿದು, ಆತ್ಮಹತ್ಯೆ (Suicide Case) ಮಾಡಿಕೊಳ್ಳುವ ಅತಿರೇಕಕ್ಕೆ ಹೋಗಿದೆ. ಅಹಮದಾಬಾದ್‌ನಲ್ಲಿ ಪೇದೆ, ಅವರ ಪತ್ನಿ ಹಾಗೂ ಮಗಳು ವಸತಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ, ಗಂಡ-ಹೆಂಡತಿ ಜಗಳವೇ ಇದಕ್ಕೆ ಕಾರಣ ಎನ್ನಲಾಗಿದೆ.
“ಅಹಮದಾಬಾದ್‌ನ ಗೊಟಾ ಪ್ರದೇಶದಲ್ಲಿ ಪೇದೆ ಕುಲದೀಪ್ ಸಿಂಗ್ ಯಾದವ್, ಅವರ ಪತ್ನಿ ರಿದ್ಧಿ ಹಾಗೂ ಮೂರು ವರ್ಷದ ಮಗಳು ವಾಸವಿದ್ದರು. ಆದರೆ, ಮಂಗಳವಾರ ರಾತ್ರಿ ಗಂಡ-ಹೆಂಡತಿ ಜಗಳವಾಡಿದ್ದು, ಇದು ಅತಿರೇಕಕ್ಕೆ ಹೋಗಿದೆ. ಇದೇ ವೇಳೆ ರಾತ್ರಿ 1.30ರ ಸುಮಾರಿಗೆ ಪೇದೆಯ ಪತ್ನಿಯು 12ನೇ ಮಹಡಿಯಿಂದ ಜಿಗಿದಿದ್ದಾರೆ. ಇದರ ಬೆನ್ನಲ್ಲೇ ಪೇದೆಯೂ ಮಗಳ ಜತೆಗೆ ಜಿಗಿದಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ ಇದು ಆತ್ಮಹತ್ಯೆ ಎಂದು ತಿಳಿದುಬಂದಿದೆ” ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಪೇದೆಯು ಅವರ ಸಂಬಂಧಿಕರಿಗೆ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಪೋಸ್ಟ್ ಮಾರ್ಟಮ್ ವರದಿ ಬಳಿಕವೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ | Suicide Case | ಅಕ್ಕ- ತಂಗಿಯರ ಗೌರಿ ಗಲಾಟೆ; ಆತ್ಮಹತ್ಯೆಯಲ್ಲಿ ಅಂತ್ಯ