ಹರಿಯಾಣ: ತನ್ನ ಇಬ್ಬರು ಭಕ್ತರ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಹರಿಯಾಣದ ಬಿಜೆಪಿ ಸರಕಾರ ಇದೇ ಮೊದಲ ಬಾರಿ ಒಂದು ತಿಂಗಳ ಪೆರೋಲ್ ನೀಡಿದೆ.
ಹರಿಯಾಣ ಮಾತ್ರವಲ್ಲದೆ, ದೇಶದ ನಾನಾ ಕಡೆ ಭಕ್ತರನ್ನು ಹೊಂದಿರುವ ಶೋಕಿಲಾಲ, ಡೇರಾ ಸಚ್ಚಾ ಸೌದಾ ಎಂಬ ಪಂಥವನ್ನೇ ಕಟ್ಟಿದ ಗುರು ರಾಮ್ ರಹೀಮ್ ಸಿಂಗ್ ಗೆ ಸಿಬಿಐ ವಿಶೇಷ ನ್ಯಾಯಾಲಯ 2017ರಲ್ಲಿ ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಿತ್ತು. ಈತ 2002ರಲ್ಲಿ ತನ್ನ ಮ್ಯಾನೇಜರ್‌ನನ್ನೇ ಕೊಂದ ಆರೋಪವೂ ಈತನ ಮೇಲೆ ಇತ್ತು.
ತನ್ನ ಆಶ್ರಮದಲ್ಲೇ ಇರುವ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಿಂದ ಮುಕ್ತವಾಗಲು ಗುರ್ಮಿತ್ ಸಿಂಗ್ ಭಾರಿ ಪ್ರಯತ್ನವನ್ನು ಮಾಡಿದ್ದ. 2017ರಲ್ಲಿ ಆತನನ್ನು ಬಂಧಿಸಿ ಪಂಚಕುಲ ನ್ಯಾಯಾಲಯಕ್ಕೆ ಕರೆತರುವಾಗ ಭಾರಿ ಹಿಂಸಾಚಾರವೇ ನಡೆದಿತ್ತು. ಭಕ್ತರು ಆತನ ಬಂಧನವನ್ನು ತಡೆಯಲು ಯತ್ನಿಸಿದ್ದರು.
ಬಲು ಶೋಕಿಯಿಂದ ಮೆರೆಯುತ್ತಿದ್ದ ರಾಮ್ ರಹೀಮ್ ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂಬ ಮಾಹಿತಿ ಇದೆ. ಈ ನಡುವೆ ಆತನನ್ನು ನಾಲ್ಕು ಬಾರಿ ಕಿರು ಜಾಮೀನಿನ ಅಡಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಆರೋಗ್ಯದ ಕಾರಣ, ತಾಯಿಯನ್ನು ನೋಡುವ ನಿಟ್ಟಿನಲ್ಲಿ ಮೂರು ವಾರದ ಮಟ್ಟಿಗೆ ಹೊರಬರಲು ಅವಕಾಶ ನೀಡಲಾಗಿತ್ತು. ಆದರೆ, ಸನ್ನಡತೆಯ ಆಧಾರದಲ್ಲಿ ನಾಲ್ಕು ವಾರಗಳ ಪೆರೋಲ್ ಸಿಗುತ್ತಿರುವುದು ಇದು ಮೊದಲ ಬಾರಿ.
ಇದನ್ನೂ ಓದಿ: Agnipath protest: ʻಅಗ್ನಿʼಕುಂಡವಾದ ಏಳು ರಾಜ್ಯಗಳು; ಬಿಹಾರ ಡಿಸಿಎಂ ಮನೆಗೆ ಬೆಂಕಿ, ತೆಲಂಗಾಣದಲ್ಲಿ ಫೈರಿಂಗ್