Site icon Vistara News

ಹ್ಯಾಂಡ್‌ ಬ್ಯಾಗ್‌ನಲ್ಲಿ ಚಿನ್ನದ ಪೇಸ್ಟ್‌; ಹೊಟ್ಟೆಯೊಳಗೆ ಮಾತ್ರೆ ರೂಪದಲ್ಲಿತ್ತು 20 ಕೋಟಿ ರೂ. ಮೌಲ್ಯದ ಡ್ರಗ್ಸ್‌!

Gold smuggling in Bengaluru airport

ದೇವನಹಳ್ಳಿ: ಕಳ್ಳರು ಚಾಪೆ ಕೆಳಗೆ ನುಗ್ಗಿದರೆ, ಅಧಿಕಾರಿಗಳು ರಂಗೋಲಿ ಕೆಳಗೆ ನುಗ್ಗಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಯಮಾರಿಸಿ ಚಿನ್ನ ಕಳ್ಳಸಾಗಣೆ (gold smuggling) ಯತ್ನಿಸಲು ಹೋಗಿ ಸಿಕ್ಕಿ ಬಿದ್ದಿದ್ದಾರೆ.

ಏರ್‌ಪೋರ್ಟ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 816 ಗ್ರಾಂ ಪೇಸ್ಟ್ ರೂಪದ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಹ್ಯಾಂಡ್ ಬ್ಯಾಗ್‌ನಲ್ಲಿ ಸಾಗಾಟಕ್ಕೆ ಯತ್ನಿಸಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Child Death : ಆಟವಾಡುತ್ತಾ ನೀರಿನ ತೊಟ್ಟಿಗೆ ಬಿದ್ದ 3 ವರ್ಷದ ಮಗು ಸಾವು

ಕೊಕೇಕ್‌ ತುಂಬಿದ್ದ ಮಾತ್ರೆ ನುಂಗಿ ಬಂದ ಪ್ರಯಾಣಿಕ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bengaluru Airport) ಬಂದ ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿ 20 ಕೋಟಿ ರೂ. ಮೌಲ್ಯದ ಕೊಕೇನ್‌ ಪತ್ತೆಯಾಗಿದೆ. ಕೊಕೇನ್‌ ತುಂಬಿರುವ 50ಕ್ಕೂ ಹೆಚ್ಚು ಮಾತ್ರೆಗಳನ್ನು ನುಂಗಿ ಪ್ರಯಾಣಿಸಿದ ವ್ಯಕ್ತಿಯನ್ನು ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದು, ಡ್ರಗ್ಸ್‌ ಜಪ್ತಿ ಮಾಡಿದ್ದಾರೆ.

ಬೆಂಗಳೂರಿಗೆ ಬಂದ ವ್ಯಕ್ತಿಯೊಬ್ಬ ಶಂಕಾಸ್ಪದ ವರ್ತನೆ ಗಮನಿಸಿ ಅಧಿಕಾರಿಗಳು ಕೂಡಲೇ ಬಾಡಿ ಸ್ಕ್ಯಾನ್‌ ಹಾಗೂ ರೇಡಿಯೋಲಜಿ ತಪಾಸಣೆ ಮಾಡಿದ್ದಾರೆ. ಈ ವೇಳೆ ಆತನ ಹೊಟ್ಟೆಯಲ್ಲಿ ಕೊಕೇನ್‌ ತುಂಬಿದ ಮಾತ್ರೆಗಳು ಇರುವುದು ಪತ್ತೆಯಾಗಿವೆ. ಸಿನಿಮಾ ಸ್ಟೈಲ್‌ನಲ್ಲಿ ಮಾತ್ರೆಯ ರೂಪದಲ್ಲಿ ಕೊಕೇನ್ ಸೇವಿಸಿ ಕಳ್ಳ ಸಾಗಣೆ (Cocaine smuggling) ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬರೋಬ್ಬರಿ 20 ಕೋಟಿ ಮೌಲ್ಯದ 2 ಕೆ.ಜಿ ಕೊಕೇನ್‌ ಅನ್ನು ದೇಹದೊಳಗೆ ಬಚ್ಚಿಟ್ಟುಕೊಂಡಿದ್ದ.

ಆರೋಪಿ ಅದಿದಿಸ್ ಎಂಬಾತ ಅಬಾಬಾದಿಂದ ಇಥೋಪಿಯಾ ಏರ್‌ಲೈನ್ಸ್‌ನಲ್ಲಿ ಬಂದಿದ್ದ. ಸದ್ಯ ಈತನ ಹೊಟ್ಟೆಯಲ್ಲಿದ್ದ ಮಾತ್ರೆಗಳನ್ನು ಹೊರಗೆ ತೆಗೆದು, ಬಂಧಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version