Site icon Vistara News

Haryana Crime : ಸುಟ್ಟ ವಾಹನದಲ್ಲಿ ಸಿಕ್ಕಿತು ಎರಡು ಶವಗಳು; ಭಜರಂಗದಳದ ಕಾರ್ಯಕರ್ತರ ಮೇಲೆ ಕೇಳಿಬಂತು ಆರೋಪ

#image_title

ಭಿವಾನಿ: ಹರ್ಯಾಣದ ಭಿವಾನಿ ಜಿಲ್ಲೆಯಲ್ಲಿ ಮಹೀಂದ್ರಾ ಕಂಪನಿಯ ಬೊಲೆರೊ ಎಸ್‌ಯುವಿ ಗಾಡಿಯಲ್ಲಿ ಗುರುವಾರ ಎರಡು ಸುಟ್ಟ ಶವಗಳು (Haryana Crime) ಪತ್ತೆಯಾಗಿವೆ. ಮೃತರಾಗಿರುವ ಈ ಇಬ್ಬರನ್ನು ಭಜರಂಗದಳದ ಕಾರ್ಯಕರ್ತರು ಅಪಹರಣ ಮಾಡಿದ್ದರು ಎನ್ನುವ ಆರೋಪ ಕೇಳಿಬಂದಿದೆ.

ಮೃತರನ್ನು ರಾಜಸ್ಥಾನದ ಭರತ್ ಪುರ ಜಿಲ್ಲೆಯ ಪಹಾರಿ ತಹಸಿಲ್‌ನ ಘಟ್ಮೀಕಾ ಗ್ರಾಮದ ನಿವಾಸಿಗಳಾದ ನಾಸಿರ್ (25) ಮತ್ತು ಜುನೈದ್ ಅಲಿಯಾಸ್ ಜುನಾ (35) ಎಂದು ಗುರುತಿಸಲಾಗಿದೆ. ಈ ಇಬ್ಬರನ್ನು ಗೋ ಸಂರಕ್ಷಕರು ಎಂದು ಹೇಳಿಕೊಂಡು ಬಂದ ಭಜರಂಗದಳದ ಕಾರ್ಯಕರ್ತರು ಅಪಹರಣ ಮಾಡಿದ್ದರು ಎಂದು ಮೃತರ ಕುಟುಂಬಗಳು ದೂರಿವೆ. ಬುಧವಾರದಂದು ಅಪಹರಣವಾಗಿದ್ದಾಗಿ ಹೇಳಲಾಗಿದೆ. ನಿಜಕ್ಕೂ ಇದು ಗೋ ಸಂರಕ್ಷಣೆ ವಿಚಾರದಲ್ಲಿ ನಡೆದ ಅಪಹರಣ ಮತ್ತು ಕೊಲೆಯೇ ಎನ್ನುವುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Cholesterol reducing: ಕೆಲವರಿಗೆ ಕೊಲೆಸ್ಟೆರಾಲ್‌ ಏಕೆ ಕಡಿಮೆಯಾಗುವುದಿಲ್ಲ? ಇಲ್ಲಿವೆ 10 ಕಾರಣಗಳು!

ಗುರುವಾರ ಬೆಳಗ್ಗೆ ಭಿವಾನಿಯ ಲೋಹರು ಎಂಬಲ್ಲಿ ಸುಟ್ಟ ಕಾರು ಹಾಗೂ ಅದರಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ. ಇದನ್ನು ಕಂಡಿರುವ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ, ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಭಿವಾನಿಯ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಜಗತ್ ಸಿಂಗ್ ತಿಳಿಸಿದ್ದಾರೆ. ಭರತ್‌ಪುರದಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಭಿವಾನಿಗೆ ವಾಹನವನ್ನು ಚಲಾಯಿಸಿ ನಂತರ ಬೆಂಕಿ ಹಚ್ಚಿರುವ ಸಾಧ್ಯತೆಯಿದೆ. ಮೃತರ ಕುಟುಂಬಗಳು ನೀಡಿರುವ ದೂರಿನ ಆಧಾರದ ಮೇಲೆ ಐವರ ವಿರುದ್ಧ ಗೋಪಾಲ್‌ಗಢ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಭಿವಾನಿಯಲ್ಲಿ ಸುಟ್ಟು ಕರಕಲಾದ ಬೊಲೆರೋ ಭರತ್‌ಪುರದಿಂದ ಕಾಣೆಯಾದ ವಾಹನವಾಗಿದೆ. ಇದು ಅಸೀನ್ ಖಾನ್ ಹೆಸರಿನ ವ್ಯಕ್ತಿಗೆ ಸೇರಿದ ವಾಹನ. ಸಂತ್ರಸ್ತರಲ್ಲಿ ಒಬ್ಬನಾದ ಜುನೈದ್‌ ವಿರುದ್ಧ ಈ ಹಿಂದೆಯೇ ಕೆಲವು ಪ್ರಕರಣಗಳು ದಾಖಲಾಗಿದ್ದವು ಎಂದೂ ತಿಳಿಸಲಾಗಿದೆ.

ಇದನ್ನೂ ಓದಿ: Blasphemy In Pakistan: ಧರ್ಮನಿಂದನೆ ಆರೋಪ, ವ್ಯಕ್ತಿಯನ್ನು ಜೈಲಿನಿಂದ ಎಳೆದು ಸುಟ್ಟುಹಾಕಿದ ಮೂಲಭೂತವಾದಿಗಳು

Exit mobile version