ಹೈದರಾಬಾದ್: ತಮ್ಮ ಸಹೋದರಿಯನ್ನು ಮದುವೆಯಾದ ಎಂಬ ಸಿಟ್ಟಿನಿಂದ ಹಿಂದೂ ಯುವಕನೊಬ್ಬನನ್ನು ಮುಸ್ಲಿಂ ಯುವಕರಿಬ್ಬರು ಮನಸೋ ಇಚ್ಛೆ ರಾಡ್‌ಗಳಿಂದ ಥಳಿಸಿ ಕೊಂದುಹಾಕಿದ್ದಾರೆ.
ಹೈದರಾಬಾದ್‌ನಲ್ಲಿ ಹಾಡಹಗಲೇ ನಡುಬೀದಿಯಲ್ಲಿ ಈ ಘಟನೆ ನಡೆದಿದ್ದು, ಮೊಬೈಲ್ ಕ್ಯಾಮೆರಾಗಳು ಈ ದೃಶ್ಯವನ್ನು ಚಿತ್ರೀಕರಿಸಿಕೊಂಡಿವೆ. ಯುವತಿ ಅಂಗಲಾಚಿ ಬೇಡಿಕೊಳ್ಳುತ್ತಿದ್ದರೂ ಈ ಖೂಳರು ಬಿಡದೆ ಆಕೆಯ ಪತಿಯನ್ನು ಹೊಡೆದುಹಾಕಿದ್ದಾರೆ. ದಾರಿಹೋಕರು ಈ ಸಂದರ್ಭ ಮೂಕಪ್ರೇಕ್ಷಕರಾಗಿದ್ದರು.
ನಾಗರಾಜು ಮತ್ತು ಸುಲ್ತಾನಾ ಅವರು ಜನವರಿಯಲ್ಲಿ ಹೈದರಾಬಾದ್‌ನ ಹಳೆ ಕ್ವಾರ್ಟರ್ಸ್‌ನಲ್ಲಿರುವ ಆರ್ಯ ಸಮಾಜ ದೇವಸ್ಥಾನದಲ್ಲಿ ತಮ್ಮ ಕುಟುಂಬದವರ ಅಪೇಕ್ಷೆಗೆ ವಿರುದ್ಧವಾಗಿ ವಿವಾಹವಾಗಿದ್ದರು. ಇವರಿಗೆ 10ನೇ ತರಗತಿಯಿಂದಲೂ ಪರಸ್ಪರ ಪರಿಚಯವಿತ್ತು. ಮದುವೆಯ ನಂತರ ಸುಲ್ತಾನಾ ತನ್ನ ಹೆಸರನ್ನು ಪಲ್ಲವಿ ಎಂದು ಬದಲಾಯಿಸಿಕೊಂಡಿದ್ದಳು.
ಬುಧವಾರ ಸಂಜೆ ನಾಗರಾಜು ಮತ್ತು ಸುಲ್ತಾನಾ ಮನೆಯಿಂದ ಹೊರ ಹೋಗಿದ್ದ ವೇಳೆ ಸರೂರನಗರದಲ್ಲಿ ಇಬ್ಬರು ಸಹೋದರರು ಇವರ ಬೈಕ್ ಅಡ್ಡ ಹಾಕಿ ರಸ್ತೆಯಲ್ಲೇ ತಡೆದು, ನಾಗರಾಜ್‌ಗೆ ಕಬ್ಬಿಣದ ರಾಡ್ ನಿಂದ ಥಳಿಸಿದ್ದಾರೆ. ನಾಗರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಾಗರಾಜು ಎಂಬಾತನನ್ನು ಆತನ ಪತ್ನಿ ಸೈಯದ್ ಅಶ್ರಿನ್ ಸುಲ್ತಾನ ಸಂಬಂಧಿಕರೇ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಶ್ರೀಧರ್ ರೆಡ್ಡಿ ತಿಳಿಸಿದ್ದಾರೆ. ಈ ಭೀಕರ ಹತ್ಯೆಯು ಸ್ಥಳದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಕಠಿಣ ಕ್ರಮಕ್ಕೆ ಆಗ್ರಹಿಸಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ.
ಇದನ್ನೂ ಓದಿ | ಹುಡುಗಿ ಪೋಟೋ ತೋರಿಸಿ ಹತ್ಯೆ: ಬಿಜೆಪಿ ಕಾರ್ಯಕರ್ತನ ಸಾವಿನ ರಹಸ್ಯ ಬಯಲು