ಶ್ರೀನಗರ: ಉತ್ತರಾಖಂಡದ ಬಿಜೆಪಿ ನಾಯಕನ ರೆಸಾರ್ಟ್‌ನಲ್ಲಿ ರಿಸಪ್ಶನಿಸ್ಟ್ ಆಗಿದ್ದ ಅಂಕಿತಾ ಭಂಡಾರಿ ಹತ್ಯೆಗೀಡಾಗಿ (Receptionist Murder) ಮೂರು ದಿನವಾದರೂ ಜನಾಕ್ರೋಶ ಕಡಿಮೆಯಾಗಿಲ್ಲ. ಕಾಶ್ಮೀರದ ಶ್ರೀನಗರದಲ್ಲಿರುವ ಶವಾಗಾರದಿಂದ ಅಂಕಿತಾ ಭಂಡಾರಿಯ ಶವವನ್ನು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗಲು ಅವರ ತಂದೆ ಆಗಮಿಸಿದಾಗ ಶವಾಗಾರದ ಎದುರು ನೂರಾರು ಜನ ಜಮಾವಣೆಗೊಂಡು ಹತ್ಯೆಯನ್ನು ಖಂಡಿಸಿದ್ದಾರೆ. ಹಾಗೆಯೇ, ಶವಾಗಾರದ ಎದುರು ಪ್ರತಿಭಟನೆ ನಡೆಸಿದ್ದಾರೆ.
ಶ್ರೀನಗರದ ಶವಾಗಾರದಿಂದ ಕೊನೆಗೂ ಅಂಕಿತಾ ಭಂಡಾರಿ ಶವವನ್ನು ಎನ್‌ಐಟಿ ಘಾಟ್‌ಗೆ ಸಾಗಿಸಲಾಗಿದೆ. ಯುವತಿಯ ಪೋಷಕರು ಹಾಗೂ ಜನರ ಆಕ್ರೋಶದ ಮಧ್ಯೆಯೇ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆದಿದೆ. ಘಾಟ್‌ನಲ್ಲಿ ನೂರಾರು ಜನ ನೆರೆದಿದ್ದಾರೆ ಎಂದು ತಿಳಿದುಬಂದಿದೆ. ಏತನ್ಮಧ್ಯೆ, ಮಗಳ ಹತ್ಯೆಯ ಸಾಕ್ಷ್ಯ ನಾಶ ಮಾಡಲೆಂದೇ ರೆಸಾರ್ಟ್‌ಗೆ ಬೆಂಕಿ ಹಚ್ಚಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಬಿಜೆಪಿ ಉಚ್ಚಾಟಿತ ನಾಯಕ ವಿನೋದ್ ಆರ್ಯ ಒಡೆತನದ ವನತಾರಾ ರೆಸಾರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ೧೯ ವರ್ಷದ ಯುವತಿಯನ್ನು ವಿನೋದ್ ಆರ್ಯ ಪುತ್ರ ಪುಲ್ಕಿತ್ ಆರ್ಯ ಸೇರಿ ಮೂವರು ಹತ್ಯೆ ಮಾಡಿದ್ದಾರೆ ಎಂಬ ಆರೋಪವಿದೆ. ಪ್ರಕರಣದಲ್ಲಿ ಈಗಾಗಲೇ ಬಿಜೆಪಿ ಪುಲ್ಕಿತ್ ಆರ್ಯನನ್ನು ಬಂಧಿಸಲಾಗಿದೆ. ವಿನೋದ್ ಆರ್ಯ ಅವರನ್ನು ಬಿಜೆಪಿಯಿಂದ ಉಚ್ಚಾಟನೆಗೊಳಿಸಲಾಗಿದೆ. ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಲಾಗಿದೆ.
ಇದನ್ನೂ ಓದಿ | ಅಂಕಿತಾ ಸಿಂಗ್ ಬೆಡ್ರೂಮಿಗೇ ಹೋಗಿ ಬೆಂಕಿ ಹಚ್ಚಿದ ಶಾರುಖ್; ಆ ಕ್ಷಣ ವಿವರಿಸಿ ಕಣ್ಮುಚ್ಚಿದ ಯುವತಿ