Site icon Vistara News

Jacqueline Fernandez | 200 ಕೋಟಿ ರೊಕ್ಕದ ಕೇಸ್‌ನಲ್ಲಿ ರಕ್ಕಮ್ಮಗೆ ತುಸು ರಿಲೀಫ್‌, ಮಧ್ಯಂತರ ಜಾಮೀನು

Jacqueline Fernandez

ನವದೆಹಲಿ: ೨೦೦ ಕೋಟಿ ರೂ. ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌‌ (Jacqueline Fernandez) ಅವರಿಗೆ ತುಸು ರಿಲೀಫ್‌ ಸಿಕ್ಕಿದೆ. ದೆಹಲಿಯ ನ್ಯಾಯಾಲಯವು ೫೦ ಸಾವಿರ ರೂ. ವೈಯಕ್ತಿಕ ಬಾಂಡ್‌ ಮೇರೆಗೆ “ರಕ್ಕಮ್ಮ”ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಹಾಗೆಯೇ, ವಿಚಾರಣೆಯನ್ನು ಅಕ್ಟೋಬರ್‌ ೨೨ಕ್ಕೆ ಮುಂದೂಡಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಗಸ್ಟ್‌ ೩೧ರಂದು ಜಾಕ್ವೆಲಿನ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸುವ ಜತೆಗೆ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಸೂಚಿಸಿದ್ದರು. ಹಾಗೆಯೇ, ಪ್ರಕರಣದಲ್ಲಿ ಹಲವು ಬಾರಿ ನಟಿಗೆ ಸಮನ್ಸ್‌ ಸಹ ಜಾರಿ ಮಾಡಿದೆ. ಅಲ್ಲದೆ, ಪ್ರಕರಣದಲ್ಲಿ ಫರ್ನಾಂಡಿಸ್‌ ಅವರನ್ನು ಆರೋಪಿಯನ್ನಾಗಿಸಿದೆ.

ವಂಚಕ ಸುಕೇಶ್‌ ಚಂದ್ರಶೇಖರ್‌ ಸುಮಾರು ೨೦೦ ಕೋಟಿ ರೂ. ಸುಲಿಗೆ ಮಾಡಿದ್ದು, ಈತನಿಂದ ಜಾಕ್ವೆಲಿನ್‌ ಫರ್ನಾಂಡಿಸ್‌ ಕೋಟ್ಯಂತರ ರೂ. ಮೌಲ್ಯದ ಉಡುಗೊರೆಗಳನ್ನು ಪಡೆದಿದ್ದಾರೆ ಎಂಬ ಆರೋಪವಿದೆ. ಸುಕೇಶ್‌ಗೆ ಮದುವೆಯಾಗಿದ್ದು, ಆತನ ಕೃತ್ಯಗಳ ಬಗ್ಗೆ ಅರಿವಿದ್ದೂ ಫರ್ನಾಂಡಿಸ್‌ ಅವರು ಉಡುಗೊರೆ ಪಡೆದಿದ್ದಾರೆ ಎಂದೂ ಇ.ಡಿ ಆರೋಪಿಸಿದೆ. ಪ್ರಕರಣದಲ್ಲಿ ಮತ್ತೊಬ್ಬ ನಟಿ ನೋರಾ ಫತೇಹಿ ಅವರನ್ನೂ ವಿಚಾರಣೆ ನಡೆಸಲಾಗಿದೆ.

ಇದನ್ನೂ ಓದಿ | Sukesh Case | ಡ್ರೀಮ್ ಮ್ಯಾನ್ ಸುಕೇಶ್‌ನನ್ನು ಮದ್ವೆಯಾಗಲು ಹೊರಟಿದ್ದ ರಕ್ಕಮ್ಮ ಜಾಕ್ವೆಲಿನ್!

Exit mobile version