Site icon Vistara News

Karwar Jail: ನಟ ದರ್ಶನ್‌ಗೆ ಐಷಾರಾಮಿ ಸವಲತ್ತು! ಕಾರವಾರ ಜೈಲಿನಲ್ಲಿ ತಂಬಾಕಿಗೆ ಬೇಡಿಕೆ ಇಟ್ಟ ಖೈದಿಗಳಿಂದ ಗಲಾಟೆ

Karwar Jail

ಕಾರವಾರ: ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappa Agrahara Jail) ನಟ ದರ್ಶನ್ ಗೆ (Actor darshan) ಐಷಾರಾಮಿ ಸವಲತ್ತು ಕಲ್ಪಿಸಿರುವ ಹಿನ್ನೆಲೆಯಲ್ಲಿ ಇದೀಗ ಉತ್ತರಕನ್ನಡ ಜಿಲ್ಲೆಯ (Uttara Kannada District) ಕಾರವಾರ ನಗರದ ಜೈಲಿನಲ್ಲಿ (Karwar Jail) ಖೈದಿಗಳು ಜೈಲು ಸಿಬ್ಬಂದಿಗೆ ಕೆಲವು ವಸ್ತುಗಳನ್ನು ತಂದುಕೊಡುವಂತೆ ಬೇಡಿಕೆ ಇಟ್ಟ ಘಟನೆ ನಡೆದಿದೆ.

ಕೆಲವು ಖೈದಿಗಳು ಹೊರಗಡೆಯಿಂದ ತಂಬಾಕು ತಂದುಕೊಡುವಂತೆ ಜೈಲು ಸಿಬ್ಬಂದಿಗೆ ಆಗ್ರಹಿಸಿದ್ದಾರೆ. ಜೈಲು ಸಿಬ್ಬಂದಿ ತಂಬಾಕು ತಂದುಕೊಡಲು ನಿರಾಕರಿಸಿದ್ದಕ್ಕೆ ಖೈದಿಗಳು ಕಲ್ಲಿನಿಂದ ಸ್ವಯಂ ಹಲ್ಲೆ ಮಾಡಿಕೊಂಡು ಜೈಲಿನಲ್ಲಿ ರಾದ್ಧಾಂತ ಎಬ್ಬಿಸಿದ್ದಾರೆ.

ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಗುರುವಾರ ತಂಬಾಕು ಕೊಡುವಂತೆ ಆಗ್ರಹಿಸಿ ಖೈದಿಗಳು ಗಲಾಟೆ ಮಾಡಿದ್ದಾರೆ. ತಂಬಾಕು ನೀಡದ್ದಕ್ಕೆ ಇಬ್ಬರು ಖೈದಿಗಳು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಮಹಮ್ಮದ್ ಮುಜಾಮಿಲ್, ಫರಾನ್ ಛಬ್ಬಿ ಕಲ್ಲಿನಿಂದ ಜಜ್ಜಿಕೊಂಡು ಹಲ್ಲೆ ಮಾಡಿಕೊಂಡ ಖೈದಿಗಳು.


ಹಲ್ಲೆ ಮಾಡಿಕೊಂಡ ಬಳಿಕ ವಾರ್ಡನ್ ಮೇಲೆ ಆರೋಪ ಮಾಡಿರುವ ಖೈದಿಗಳು ತಂಬಾಕು ನೀಡದ್ದಕ್ಕೆ ವಾರ್ಡನ್ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ. ಬಳಿಕ ವಾರ್ಡನ್‌ಗಳೇ ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿ ಆರೋಪಿಸಿದ್ದಾರೆ.

ಗಾಯಗೊಂಡ ಖೈದಿಗಳನ್ನು ಕಾರವಾರ ಪೊಲೀಸರು ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಖೈದಿಗಳ ವಾರ್ಡ್ ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಇದನ್ನೂ ಓದಿ: Actor Darshan : ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್‌ ಭೇಟಿಗೆ ಸೆಲೆಬ್ರೆಟಿಗಳಿಗೆ ಇಲ್ಲ ಅವಕಾಶ!

ಪ್ರೀತಿ ನಿರಾಕರಿಸಿದ್ದಕ್ಕೆ ಪ್ರಿಯತಮೆಗೆ ಚಾಕುವಿನಿಂದ ಇರಿದ ಯುವಕ

ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಕೋಟೆ ಪ್ರದೇಶದಲ್ಲಿ ಪ್ರೀತಿ‌ ನಿರಾಕರಿಸಿದ ಮಂಗಳಮುಖಿಗೆ ಯುವಕನೋರ್ವ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.

ಹನೀಷಾ (21) ಚಾಕುವಿನಿಂದ ಇರಿತಕ್ಕೊಳಗಾದ ಮಂಗಳಮುಖಿಯಾಗಿದ್ದಾರೆ. ಮಂಡ್ಯದ ಆದಿಲ್‌ (23) ಚಾಕು ಇರಿದ ಆರೋಪಿ. ಇವರಿಬ್ಬರು ಕಳೆದ ಆರು ತಿಂಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಹನೀಷಾ ಲಿಂಗತ್ವ ಅಲ್ಪಸಂಖ್ಯಾತರ ಕಾರ್ಯಕ್ರಮಗಳ ನಿಮಿತ್ತ ಪರ ಊರುಗಳಿಗೆ ಆಗಾಗ ಹೋಗುತ್ತಿದ್ದರು.

ಇದನ್ನು ಸಹಿಸದ ಆದಿಲ್‌ ಆಕ್ಷೇಪ ವ್ಯಕ್ತಪಡಿಸಿ ಹಲ್ಲೆ ನಡೆಸುತ್ತಿದ್ದ. ಇದರಿಂದ ಬೇಸತ್ತು ಹನೀಷಾ ಪ್ರೇಮ ನಿರಾಕರಿಸಿದ್ದಳು. ಈ ಹಿನ್ನೆಲೆಯಲ್ಲಿ ಬುಧವಾರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ಸಿಟ್ಟಿನಲ್ಲಿ ಆದಿಲ್‌ ಚಾಕುವಿನಿಂದ ಇರಿದಿದ್ದಾನೆ. ಗಾಯಾಳು ಹನೀಷಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

Exit mobile version