ತಿರುವನಂತಪುರಂ: ಕೇರಳದಲ್ಲಿ ಬೀದಿ ನಾಯಿಗಳ ಕಾಟ(Stray dog menace) ಮುಂದುವರಿದಿದೆ. ಹೊಸ ವರ್ಷದ ದಿನವಾದ ಭಾನುವಾರ ಬೀದಿ ನಾಯಿಗಳ ದಾಳಿಯಿಂದಾಗಿ ಅಯ್ಯಪ್ಪ ಸ್ವಾಮಿ ಭಕ್ತರು ಸೇರಿ ಒಟ್ಟು ಏಳು ಮಂದಿ ಆಸ್ಪತ್ರೆಗೆ ದಾಖಲಾಗುವಂತಾಗಿದೆ. ಕೊಲ್ಲಂ ಜಿಲ್ಲೆಯ ಕುಳುತುಪುಳ ನಗರದ ಶ್ರೀ ಧರ್ಮ ಶಾಸ್ತಾ ದೇಗುಲದ ಬಳಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ: Dog menace | ಒಂದೇ ಏರಿಯಾದ 21 ಜನರಿಗೆ ಕಚ್ಚಿದ ಹುಚ್ಚುನಾಯಿ; ಹುಡುಕಿ ಕೊಂದು ಹಾಕಿದ ಸ್ಥಳೀಯರು
ಗಾಯಾಳುಗಳಲ್ಲಿ 12 ವರ್ಷದ ಹೆಣ್ಣು ಮಗುವೂ ಸೇರಿದೆ. ವಾರಾಂತ್ಯದ ಹಿನ್ನೆಲೆಯಲ್ಲಿ ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದ್ದರು. ಭಾನುವಾರ ಸಂಜೆ 5.30ರ ಸಮಯಕ್ಕೆ ನಾಯಿಗಳು ಅಲ್ಲಿದ್ದ ಜನರ ಮೇಲೆ ದಾಳಿ ನಡೆಸಿದೆ. ತಪ್ಪಿಸಲು ಬಂದ ಪೊಲೀಸರು ಮತ್ತು ಸ್ಥಳೀಯರ ಮೇಲೂ ದಾಳಿ ಮಾಡಿವೆ. ಗಾಯಾಳುಗಳನ್ನು ಕುಳುತುಪುಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಾಳುಗಳಾಗಿರುವ ಇಬ್ಬರನ್ನು ಪುನಲೂರಿನ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: BlackBuck | ಕಾಡಿನಿಂದ ನಾಡಿಗೆ ಬಂದಿದ್ದ ಕೃಷ್ಣ ಮೃಗವನ್ನು ಬೇಟೆಯಾಡಿದ ಬೀದಿನಾಯಿಗಳು
ಕೇರಳದಲ್ಲಿ ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿ ದಾಳಿ ಪ್ರಕರಣಗಳು(Stray dog menace) ಹೆಚ್ಚಾಗಿ ಕೇಳಿಬರುತ್ತಿವೆ. ನವೆಂಬರ್ ತಿಂಗಳಲ್ಲಿ ತನಲೂರಿನಲ್ಲಿ ನಾಲ್ಕು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ, ಬಾಲಕ ಸಾವು ಬದುಕಿನ ನಡುವೆ ಹೋರಾಡುವಂತಾಗಿತ್ತು.