Site icon Vistara News

Sukesh Chandrasekhar: ಜೈಲಿನ ಕೋಣೆ ಮೇಲೆ ದಾಳಿ, ಐಷಾರಾಮಿ ವಸ್ತುಗಳು ಪತ್ತೆ: ವಂಚಕ ಸುಕೇಶ್ ಗಳಗಳನೆ ಅತ್ತ ವಿಡಿಯೊ ವೈರಲ್‌

Luxury items found in conman Sukesh Chandrasekhar’s jail cell.

ಬೆಂಗಳೂರು: ನೂರಾರು ಕೋಟಿ ರೂ. ಸುಲಿಗೆ ಪ್ರಕರಣ ಆರೋಪದಲ್ಲಿ ಜೈಲುವಾಸ ಅನುಭವಿಸುತ್ತಿರುವ ವಂಚಕ ಸುಕೇಶ್ ಚಂದ್ರಶೇಖರ್‌ (Sukesh Chandrasekhar) ಇರುವ ಜೈಲಿನ ಕೊಠಡಿಯಲ್ಲಿ ಲಕ್ಷುರಿ ವಸ್ತುಗಳು ಪತ್ತೆಯಾಗಿವೆ. ಮಂಡೋಲಿ ಜೈಲಿನ (Mandoli Jail Administration) ಸಿಸಿಟಿವಿ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಜೈಲು ಅಧಿಕಾರಿಗಳು ಸುಕೇಶ್ ಚಂದ್ರಶೇಖರ್‌ನಿದ್ದ ಜೈಲಿನ ಕೋಣೆಯೊಳಗೆ ಹುಡುಕಾಟ ನಡೆಸಿದಾಗ ಎರಡು ಪ್ಯಾಂಟ್‌ಗಳು, ಗುಸ್ಸಿ ಶೂಗಳು ಪತ್ತೆಯಾಗಿವೆ. ಪ್ಯಾಂಟ್ ಮತ್ತು ಶೂಗಳ ಬೆಲೆ ಸುಮಾರು 1.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಜೈಲರ್ ದೀಪಕ್ ಶರ್ಮಾ ಮತ್ತು ಜೈಸಿಂಗ್ ಅವರ ಮುಂದೆ ಸುಕೇಶ್ ಚಂದ್ರಶೇಖರ್ ಗದ್ಗದಿತರಾಗಿ ನಿಂತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜೈಲಿನ ಸಿಸಿಟಿವಿ ವೀಡಿಯೊದಲ್ಲಿ ಸುಕೇಶ್ ಅಳುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: Sukesh Chandrasekhar | ‌ಆಪ್‌ಗೆ 60 ಕೋಟಿ ರೂ. ದೇಣಿಗೆ: 200 ಕೋಟಿ ರೂ. ವಂಚನೆಯ ಆರೋಪಿ ಸುಕೇಶ್‌ ಚಂದ್ರಶೇಖರ್‌ ಹೇಳಿಕೆ

ಯಾರು ಈ ಸುಕೇಶ್‌ ಚಂದ್ರಶೇಖರ್‌?

ಸುಕೇಶ್‌ ಮೂಲತಃ ಬೆಂಗಳೂರಿನವನು. ವಿಲಾಸಿ ಜೀವನದ ಅಭಿಲಾಷೆ ಹೊಂದಿದ್ದ ಈತ ತನ್ನ 17ನೇ ವಯಸ್ಸಿನಿಂದಲೇ ಸಿಕ್ಕಸಿಕ್ಕವರಿಗೆ ವಂಚನೆ ಎಸಗುತ್ತಾ ಬಂದಿದ್ದಾನೆ ಎಂದು ತನಿಖಾ ಮೂಲಗಳು ಹೇಳಿವೆ. ಆರಂಭದಲ್ಲಿ ಈತ ಬೆಂಗಳೂರಿನಲ್ಲಿ ಫೋರ್ಜರಿ ಮಾಡುತ್ತಿದ್ದ. ನಂತರ ಚೆನ್ನೈಗೆ ಸಾಗಿದ. ನಂತರ ಇತರ ಮೆಟ್ರೋ ಸಿಟಿಗಳಿಗೂ ಇವನ ವಂಚನೆಯ ಬಾಹುಗಳು ಚಾಚಿದವು.

ಸದ್ಯ ಈತ ದೆಹಲಿಯ ಜೈಲಿನಲ್ಲಿದ್ದಾನೆ. ಇ.ಡಿ ಇವನನ್ನು ವಿಚಾರಣೆಗೆ ಒಳಪಡಿಸುತ್ತಿದೆ. ಸುಮಾರು 15 ಎಫ್‌ಐಆರ್‌ಗಳು ಇವನ ಮೇಲೆ ದಾಖಲಿಸಲಾಗಿವೆ. ಚೆನ್ನೈಯಲ್ಲಿ ಒಂದು ಕೋಟಿ ರೂ. ಮೌಲ್ಯದ ಸಮುದ್ರ ತೀರದ ಬಂಗಲೆ ಹಾಗೂ ಒಂದು ಡಜನ್‌ ಐಷಾರಾಮಿ ಕಾರುಗಳನ್ನು ಇವನಿಂದ ಸೀಜ್ ಮಾಡಲಾಗಿದೆ.

ಇದನ್ನೂ ಓದಿ: Jacqueline Fernandez: ಜಾಕ್ವೆಲಿನ್‌ಗೆ ವ್ಯಾಲೆಂಟೈನ್ಸ್​ ವಿಶ್ ಮಾಡಿದ ವಂಚಕ ಸುಕೇಶ್‌ ಚಂದ್ರಶೇಖರ್! 

ಇದಕ್ಕೂ ಮೊದಲು ಇವನು ತಿಹಾರ್‌ ಜೈಲಿನಲ್ಲಿದ್ದುಕೊಂಡೇ ತನ್ನ ಜಾಲದ ಮೂಲಕ ಸುಮಾರು 200 ಕೋಟಿ ರೂ. ಮೌಲ್ಯದ ವಂಚನೆ ಎಸಗಿದ ಪ್ರಕರಣಗಳು ಬಯಲಾಗಿವೆ. ಇವನಿಗೆ ಸಹಕರಿಸುತ್ತಿದ್ದ ಇವನ ಪತ್ನಿ ಲೀನಾ ಮಾರಿಯಾ ಪೌಲ್‌ ಸೇರಿದಂತೆ ಇತರ ಏಳು ಮಂದಿಯನ್ನೂ ಬಂಧಿಸಲಾಗಿದೆ. ರಾಜಕಾರಣಿಯಂತೆ ಪೋಸು ಕೊಟ್ಟು, ಕೆಲಸ ಕೊಡಿಸುವುದಾಗಿ ನಂಬಿಸಿ ನೂರಕ್ಕೂ ಹೆಚ್ಚು ಮಂದಿಯನ್ನು ವಂಚಿಸಿದ್ದಾನೆ.

Exit mobile version