ಎಲ್ಲರಿಗೂ ಪ್ರೀತಿ ಬೇಕು. ಆದರೆ ಅನೇಕರು ಅದರಲ್ಲಿ ವಿಕೃತಿ ಮೆರೆಯುತ್ತಾರೆ. ಗುಜರಾತ್ನ ಸೂರತ್ನಲ್ಲೊಬ್ಬ (Surat Man) ಮಹಿಳೆಯೊಬ್ಬರನ್ನು ಪ್ರೀತಿ ಹೆಸರಲ್ಲಿ ಅತ್ಯಾಚಾರ ಮಾಡಿದ್ದಾನೆ. ಅಷ್ಟೇ ಅಲ್ಲ, ರೇಪ್ ಮಾಡಿದ ಬಳಿಕ ಆಕೆಯ ಖಾಸಗಿ ಭಾಗಕ್ಕೆ ಮೆಣಸಿನ ಪುಡಿ ಹಾಕಿದ್ದಾನೆ. ಸದ್ಯ ಆ ಯುವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಆರೋಪಿ ಹೆಸರು ನಿಕುಂಜ್ ಕುಮಾರ್ ಅಮೃತ್ ಭಾಯ್ ಎಂದಾಗಿದ್ದು, ಅದಾಗಲೇ ಒಬ್ಬಳು ಮಹಿಳೆಯೊಟ್ಟಿಗೆ ಮದುವೆಯಾಗಿತ್ತು. ಆದರೆ ಪತ್ನಿ ಈತನ ಜತೆ ಇರಲಿಲ್ಲ. ಕೆಲಸದ ನಿಮಿತ್ತ ನಿಕುಂಜ್ ಕುಮಾರ್ ಅಮೃತ್ ಭಾಯ್ ಪಟೇಲ್ ಬೇರೆ ಹಳ್ಳಿಯಲ್ಲಿ ವಾಸಿಸುತ್ತಿದ್ದ.
ಹೀಗೆ ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ನಿಕುಂಜ್ ಕುಮಾರ್ ಇಲ್ಲಿ ಇನ್ನೊಬ್ಬಳು ಯುವತಿಯನ್ನು ಪ್ರೀತಿ ಹೆಸರಲ್ಲಿ ಸೆಳೆದಿದ್ದ. ಆಕೆಗೆ ತಾನು ಮದುವೆಯಾದವನು ಎಂದು ಹೇಳಿರಲಿಲ್ಲ. ಆಕೆಗೆ ಅದೂ ಇದು ಆಮಿಷ ತೋರಿಸಿ, ಜತೆಗೇ ಇರುವಂತೆ ನೋಡಿಕೊಂಡಿದ್ದ. ಆದರೂ ಒಂದು ದಿನ ಯುವತಿಗೆ ಈ ನಿಕುಂಜ್ ಕುಮಾರ್ ಮದುವೆಯಾದವನು, ಆತನಿಗೆ ಪತ್ನಿ ಇದ್ದಾಳೆ ಎಂಬುದು ಗೊತ್ತಾಯಿತು. ಅದು ಗೊತ್ತಾಗುತ್ತಿದ್ದಂತೆ ಜಗಳ ತೆಗೆದಳು. ಅವನಿಂದ ದೂರವಾಗಲು ನಿರ್ಧಾರ ಮಾಡಿದ್ದಳು.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬುಡಕಟ್ಟು ಬಾಲಕಿ ಮೃತಪಟ್ಟಿದ್ದು ವಿಷದಿಂದ ಎಂದ ಪೋಸ್ಟ್ಮಾರ್ಟಮ್ ರಿಪೋರ್ಟ್; ಅತ್ಯಾಚಾರ ನಡೆದಿತ್ತಾ?
ಯುವತಿ ದೂರವಾಗುತ್ತಿದ್ದಾಳಲ್ಲ ಎಂಬ ಕ್ರೋಧದಿಂದ ನಿಕುಂಜ್ ಕುಮಾರ್ ಮಿತಿಮೀರಿ ವರ್ತಿಸಿದ್ದಾನೆ. ಮೊದಲು ಕೇಬಲ್ ವೈರ್ನಿಂದ ಆಕೆಗೆ ಥಳಿಸಿದ್ದಾನೆ. ಬಳಿಕ ರೇಪ್ ಮಾಡಿದ್ದಾನೆ. ಅಷ್ಟಕ್ಕೂ ಬಿಡದೆ ಅವಳ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿದ್ದಾನೆ. ನಿನ್ನ ಅಶ್ಲೀಲ ಫೋಟೋಗಳನ್ನು, ವಿಡಿಯೊಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡುವ ಬೆದರಿಕೆಯನ್ನೂ ಹಾಕಿದ್ದ. ಸದ್ಯ ಆಕೆ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಒಲ್ಪಾಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.