Site icon Vistara News

ಹೆತ್ತ ತಾಯಿಯನ್ನೇ ರೇಪ್​ ಮಾಡಿ, ಆಕೆಯ ಆತ್ಮಹತ್ಯೆಗೆ ಕಾರಣನಾಗಿದ್ದ ಮಗನಿಗೆ ಕೋರ್ಟ್​ ನೀಡಿದ ಶಿಕ್ಷೆಯೇನು?

Man handed life term imprisonment for rape mother in Haryana

#image_title

ಗುರುಗ್ರಾಮ: ಅತ್ಯಾಚಾರ ಎಂಬುದೇ ಮಹಾಪಾಪ. ಯಾರನ್ನೇ ರೇಪ್​ ಮಾಡಿದರೂ ಅದು ಅತ್ಯಂತ ಹೇಯಕೃತ್ಯವೇ ಹೌದು. ಅಂಥದ್ದರಲ್ಲಿ ಹೆತ್ತಮ್ಮನನ್ನೂ ಬಿಡದ ಕಾಮಪಿಪಾಸುಗಳೂ ಇದ್ದಾರೆ. ಅಂತ ಕಾಮುಕನೊಬ್ಬನಿಗೆ ಗುರುಗ್ರಾಮ ಕೋರ್ಟ್​ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ. ಅಷ್ಟೇ ಅಲ್ಲ, 20 ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ. 2020ರಲ್ಲಿ ನಡೆದಿದ್ದ ಈ ಕೇಸ್​ನ ವಿಚಾರಣೆ ನಡೆಸಿದ ನ್ಯಾಯಾಧೀಶರು ‘ಮಗನಾದವನು ತನ್ನ ತಾಯಿಗೆ ಸದಾ ರಕ್ಷಣೆ ನೀಡಬೇಕು. ಆದರೆ ಈತ ಮೃಗನಂತೆ ವರ್ತಿಸಿದ್ದಾನೆ. ಅಮ್ಮನ ಪಾಲಿನ ಪೀಡಕನಾಗಿದ್ದಾನೆ. ಆತನದ್ದು ಅಮಾನವೀಯತೆಯ ಪರಮಾವಧಿ. ಅಮ್ಮನ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣನಾಗಿದ್ದಾನೆ’ ಎಂದು ಹೇಳಿದ್ದಾರೆ.

ಹರ್ಯಾಣದ ಪಟೌಡಿ ಏರಿಯಾದ ನಿವಾಸಿಯಾದ ಈ ಮಹಿಳೆ (ಅತ್ಯಾಚಾರಕ್ಕೀಡಾದ ಮಹಿಳೆ) 2020ರ ನವೆಂಬರ್ 16ರಂದು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಹಿಳೆಯ ಪತಿ 20 ವರ್ಷಗಳ ಹಿಂದೆಯೇ ಮೃತಪಟ್ಟಿದ್ದ. ಬಳಿಕ ಈಕೆ ತನ್ನ ಮೈದುನನ್ನೇ ಮದುವೆಯಾಗಿದ್ದರು. ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವರ ಈಗಿನ ಪತಿ, ಹಿರಿಯ ಮಗನ ವಿರುದ್ಧ ದೂರು ಕೊಟ್ಟಿದ್ದ. ಆತನೊಬ್ಬ ಮಾದಕ ವಸ್ತುಗಳ ವ್ಯಸನಿ. ಕುಟುಂಬದವರ ಜತೆ ಸದಾ ಜಗಳವಾಡುತ್ತಿದ್ದ. ತನ್ನ ತಾಯಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದೂ ಹೇಳಿದ್ದರು.

ಇದನ್ನೂ ಓದಿ: Dishonour Killing: ಬಿಹಾರದಲ್ಲಿ ಮರ್ಯಾದಾ ಹತ್ಯೆ; 18, 16 ವರ್ಷದ ಪುತ್ರಿಯರನ್ನು ಕೊಂದ ತಂದೆ, ತಾಯಿ!

ಮಹಿಳೆಯರ ಪೋಸ್ಟ್​ಮಾರ್ಟಮ್​ ಮಾಡಿದಾಗ ಆಕೆ ಮೇಲೆ ಅತ್ಯಾಚಾರ ಆಗಿದ್ದು ದೃಢಪಟ್ಟಿತ್ತು. ಮಗನನ್ನು ಅದೇವರ್ಷ ನವೆಂಬರ್​ 21ರಂದು ಅರೆಸ್ಟ್ ಮಾಡಲಾಗಿತ್ತು. ಸುಮಾರು 18 ಪುರಾವೆಗಳು ಅವನ ಅಪರಾಧವನ್ನು ಸಾಕ್ಷೀಕರಿಸಿದ್ದವು. ಅವನ ಕೃತ್ಯ ದೃಢಪಟ್ಟಿತ್ತು.

Exit mobile version