Site icon Vistara News

ಮದುವೆ ಮನೆಯಲ್ಲಿ ಡ್ಯಾನ್ಸ್ ಮಾಡಿದ ಪತ್ನಿ; ಸಿಟ್ಟಾಗಿ ಇಬ್ಬರು ಸೋದರರನ್ನು ಕೊಂದು, ಇನ್ನಿಬ್ಬರ ಮೇಲೆ ಹಲ್ಲೆ ಮಾಡಿದ ಪತಿ!

Sexual Assault Case: mother of Dalit Victim stripped and brother killed

ಮದುವೆ ಮನೆ ಎಂದ ಮೇಲೆ ಅಲ್ಲಿ ಸಂಭ್ರಮ, ಹಾಡು-ಡ್ಯಾನ್ಸ್ ಎಲ್ಲ ಇದ್ದೇ ಇರುತ್ತದೆ. ಹಾಗೇ ಕುಡುಕರು ಇದ್ದಲ್ಲಿ ಗಲಾಟೆ, ಅಸಭ್ಯ ವರ್ತನೆ, ಕ್ರೈಂಗಳು ನಡೆದೇ ನಡೆಯುತ್ತದೆ. ಈಗ ಛತ್ತೀಸ್​ಗಢ್​​ನ (Chhattisgarh) ಕಬೀರ್​ಧಾಮ್​ ಜಿಲ್ಲೆಯಲ್ಲಿ ಕುಡುಕನೊಬ್ಬ ಮದುವೆ ಮನೆಯಲ್ಲೇ ಇಬ್ಬರ ಹತ್ಯೆ ಮಾಡಿದ್ದಾನೆ (Chhattisgarh Man killed Brothers). ತನ್ನ ಪತ್ನಿ, ಹಿರಿಯ ಸಹೋದರ ಮತ್ತು ಮೈದುನನ ಮೇಲೆ ಹಲ್ಲೆ ನಡೆಸಿದ್ದಾನೆ. ಇದೀಗ ಆತನ ಪತ್ನಿ ಅಪಾಯದಿಂದ ಪಾರಾಗಿದ್ದು, ಹಿರಿಯ ಸಹೋದರ ಮತ್ತು ಮೈದುನನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇಬ್ಬರಿಗೂ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿಯ ಹೆಸರು ತಿನ್ಹಾ ಬೇಗಾ. ಬಂಗೂರ ಎಂಬ ಗ್ರಾಮದವನು. ಈ ಹಳ್ಳಿಯಲ್ಲಿ ಇವರ ಸಂಬಂಧಿಕರ ಮದುವೆಯೊಂದು ನಡೆಯುತ್ತಿತ್ತು. ನೂರಾರು ಜನ ಅತಿಥಿಗಳು ಬಂದಿದ್ದರು. ತಿನ್ಹಾ ಬೇಗಾನ ಪತ್ನಿ ಜಾಲಿ ಮೂಡ್​ನಲ್ಲಿದ್ದಳು. ಅಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಇತರ ಸಂಬಂಧಿಕರು, ಕುಟುಂಬದವರ ಜತೆ ತಾನೂ ಹೆಜ್ಜೆ ಹಾಕುತ್ತ, ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಳು. ಅವಳೊಂದಿಗೆ ತಿನ್ಹಾ ಬೇಗಾನ ಇಬ್ಬರು ಕಿರಿಯ ಸಹೋದರರು ಕೂಡ ಡ್ಯಾನ್ಸ್ ಮಾಡುತ್ತಿದ್ದರು. ಇದನ್ನೆಲ್ಲ ನೋಡಿದ ತಿನ್ಹಾ ಕೆಂಡಾಮಂಡಲನಾಗಿದ್ದಾನೆ. ಮೊದಲೇ ಕುಡಿದಿದ್ದ ಅವನು ಕ್ರೋಧದಿಂದ, ಮಾರಕಾಸ್ತ್ರಗಳಿಂದ ಎಲ್ಲರ ಮೇಲೆ ಹಲ್ಲೆ ಮಾಡಿದ್ದಾನೆ. ಪತ್ನಿ ತನ್ನ ಸಹೋದರರ ಜತೆ ನೃತ್ಯ ಮಾಡುತ್ತಿರುವುದನ್ನು ನೋಡಿ ಅರಗಿಸಿಕೊಳ್ಳಲು ಸಾಧ್ಯವಾಗದೆ ಅವನು ಈ ಕೃತ್ಯ ಎಸಗಿದ್ದಾನೆ.

ಇದನ್ನೂ ಓದಿ: Suicide Case: ಕೆ.ಸುಧಾಕರ್‌ ಸೋಲಿನಿಂದ ನೊಂದ ಅಭಿಮಾನಿ ಆತ್ಮಹತ್ಯೆ, ಬದುಕುಳಿದ ಸಾ.ರಾ ಮಹೇಶ್‌ ಅಭಿಮಾನಿ

ಘಟನೆ ಬಗ್ಗೆ ಮಾಹಿತಿ ನೀಡಿದ ಎಸ್​ಪಿ ಡಾ. ಲಾಲುಮಂಡ್ ಸಿಂಗ್, ‘ಮೃತರ ಶವಗಳನ್ನು ಪೋಸ್ಟ್ ಮಾರ್ಟಮ್​​ಗೆ ಕಳಿಸಲಾಗಿದೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ನಾವು ಕೇಸ್​ನ್ನು ತನಿಖೆಗೆ ಎತ್ತಿಕೊಂಡಿದ್ದೇವೆ. ಬರೀ ಪತ್ನಿ ಡ್ಯಾನ್ಸ್ ಮಾಡುತ್ತಿದ್ದಳು ಎಂಬ ಕಾರಣಕ್ಕೆ ಅವನು ಸಹೋದರರನ್ನು ಹತ್ಯೆ ಮಾಡಿದ್ದಾನೋ ಅಥವಾ ಮೊದಲೇ ಬೇರೆ ಏನಾದರೂ ವೈಷಮ್ಯ-ಗಲಾಟೆ ಇತ್ತೋ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

Exit mobile version