ಗುವಾಹಟಿ: ಕೊರೊನಾ ಲಾಕ್‌ಡೌನ್ ಅನೇಕರ ಜೀವನವನ್ನೇ ಬದಲಿಸಿದೆ. ಆ ಸಮಯದಲ್ಲೇ ಪ್ರೀತಿ ಹುಟ್ಟಿ ಮದುವೆಯಾದ ಘಟನೆಗಳೂ ವರದಿಯಾಗಿದೆ. ಅದೇ ರೀತಿ ಲಾಕ್‌ಡೌನ್ ಸಮಯದಲ್ಲಿ ಫೇಸ್‌ಬುಕ್‌ನಲ್ಲೇ ಪ್ರೀತಿ ಹುಟ್ಟಿ, ಕುಟುಂಬಗಳ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದ ಜೋಡಿ ಇದೀಗ ಭಯಾನಕ ಕೊಲೆಯ ಕಥೆಯಾಗಿ ಹೊರಹೊಮ್ಮಿರುವ ಘಟನೆ (Love Jihad) ಅಸ್ಸಾಂನಲ್ಲಿ ನಡೆದಿದೆ.
ಅಸ್ಸಾಂನ ಗೋಲಘಾಟ್ ಜಿಲ್ಲೆಯ ನಿವಾಸಿಗಳಾದ ಸಂಜೀವ್ ಮತ್ತು ಜಾನು ಘೋಷ್ ಅವರ ಮಗಳು ಸಂಘಮಿತ್ರ(24) 2020ರ ಜೂನ್‌ನಲ್ಲಿ ಫೇಸ್‌ಬುಕ್‌ನಲ್ಲಿ ನಜಿಬುರ್ ರೆಹಮಾನ್ ಬೊರ (25) ಹೆಸರಿನ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದಳು. ಆ ಸ್ನೇಹ ಕೆಲವೇ ದಿನಗಳಲ್ಲಿ ಪ್ರೀತಿಯಾಗಿದ್ದು, ಇಬ್ಬರೂ ಅಕ್ಟೋಬರ್‌ನಲ್ಲಿ ಕೋಲ್ಕೊತ್ತಾಗೆ ಓಡಿ ಹೋಗಿದ್ದಾರೆ. ಅಲ್ಲಿಯೇ ಕಾನೂನಿನ ಪ್ರಕಾರ ಮದುವೆಯನ್ನೂ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Viral Video : ಕಣ್ಣು ಕಾಣದ ನಾಯಿಗೆ ಪ್ರೀತಿಯಿಂದ ಮಸಾಜ್ ಮಾಡುತ್ತದೆ ಈ ಬೆಕ್ಕು!
ಆಮೇಲೆ ಸಂಘಮಿತ್ರಳನ್ನು ಹುಡುಕಿದ ಆಕೆಯ ಕುಟುಂಬ ಆಕೆಯನ್ನು ಮನೆಗೆ ವಾಪಸ್ ಕರೆದುಕೊಂಡು ಬಂದಿದೆ. 2021ರಲ್ಲಿ ಆಕೆಯ ಮನೆಯಲ್ಲಿ ಕಳ್ಳತನ ಮಾಡಿದ್ದರ ಬಗ್ಗೆ ಪೋಷಕರೇ ದೂರು ನೀಡಿದ್ದು, ಸಂಘಮಿತ್ರ ಒಂದು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದು, ಜಾಮೀನು ಪಡೆದು ಹೊರಬಂದಿದ್ದಾಳೆ. ನಂತರ ತಂದೆ ತಾಯಿಯೊಂದಿಗೇ ಜೀವಿಸಲು ಆರಂಭಿಸಿದ್ದಳು.
2022ರ ಜನವರಿಯಲ್ಲಿ ಸಂಘಮಿತ್ರ ಮತ್ತು ನಜಿಬುರ್ ಮತ್ತೊಮ್ಮೆ ಚೆನ್ನೈಗೆ ಓಡಿ ಹೋಗಿದ್ದರು. ಆಗಸ್ಟ್‌ನಲ್ಲಿ ಅವರು ಗೋಲಘಾಟ್‌ಗೆ ಮರಳಿದ್ದು, ಆ ಸಮಯದಲ್ಲಿ ಸಂಘಮಿತ್ರ ಗರ್ಭಿಣಿಯಾಗಿದ್ದಳು. ನಜಿಬುರ್ ಮನೆಯಲ್ಲೇ ಸಂಘಮಿತ್ರ ವಾಸಿಸಿದ್ದು, 2022ರ ನವೆಂಬರ್‌ನಲ್ಲಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
2023ರ ಆಗಸ್ಟ್‌ನಲ್ಲಿ ಪತಿಯ ವಿರುದ್ಧ ಕೌಟುಂಬಿಕ ಹಲ್ಲೆಯ ಆರೋಪ ಮಾಡಿದ ಸಂಘಮಿತ್ರ ತಂದೆ ತಾಯಿಯ ಮನೆಗೆ ಹೋಗಿ ವಾಸಿಸಲು ಆರಂಭಿಸಿದ್ದಳು. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ನಜಿಬುರ್‌ನನ್ನು ಪೊಲೀಸರು ಬಂಧಿಸಿದ್ದರು. 28 ದಿನಗಳ ನಂತರ ಆತ ಜಾಮೀನು ಪಡೆದು ಹೊರಬಂದಿದ್ದ.
ಇದನ್ನೂ ಓದಿ: Viral Video: 6-7 ವರ್ಷದ ವಿದ್ಯಾರ್ಥಿನಿ ಜತೆ ಶಿಕ್ಷಕನ ಅಸಭ್ಯ ವರ್ತನೆ; ಅಕ್ಷರ ಕಲಿಸುವವನ ಅನಾಚಾರಕ್ಕೆ ಶಿಕ್ಷೆ ಏನು?
ಜೈಲಿನಿಂದ ಹೊರಬಂದ ನಜಿಬುರ್ ತನ್ನ ಮಗನನ್ನು ಭೇಟಿ ಮಾಡಬೇಕೆಂದು ಕೇಳಿದ್ದಾನಾದರೂ ಅದಕ್ಕೆ ಸಂಘಮಿತ್ರ ಕುಟುಂಬ ಅವಕಾಶ ಮಾಡಿಕೊಟ್ಟಿಲ್ಲ. ಏಪ್ರಿಲ್ 29ರಂದು ಸಂಘಮಿತ್ರ ಮತ್ತು ಅವರ ಕುಟುಂಬ ಸದಸ್ಯರು ನಜೀಬುರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಆತನ ಸಹೋದರ ದೂರು ದಾಖಲಿಸಿದ್ದರು.
ಇದಾದ ನಂತರ ಜುಲೈ 24ರಂದು ನಜೀಬುರ್ ಸಂಘಮಿತ್ರ ಮನೆಗೆ ನುಗ್ಗಿ, ಪತ್ನಿಯನ್ನು ಮತ್ತು ಅತ್ತೆ-ಮಾವನನ್ನು ಕೊಲೆ ಮಾಡಿದ್ದಾನೆ. 9 ತಿಂಗಳ ಮಗುವನ್ನು ಎತ್ತಿಕೊಂಡು ಬಂದ ಪೊಲೀಸರ ಮುಂದೆ ಶರಣಾಗಿದ್ದಾನೆ. ಅಸ್ಸಾಂನ ಪೊಲೀಸರು ನಜೀಬುರ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಐಡಿ ಕೂಡ ಈ ವಿಚಾರದಲ್ಲಿ ತನಿಖೆ ನಡೆಸುತ್ತಿದೆ.
ಲವ್ ಜಿಹಾದ್ ಆರೋಪ
ಕೊಲೆಯಾದ ಕುಟುಂಬದವರನ್ನು ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಬುಧವಾರ ಭೇಟಿ ಮಾಡಿ ಮಾತನಾಡಿಸಿದ್ದಾರೆ. ನಜೀಬುರ್ ಹಿಂದೂ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಖಾತೆ ತೆರೆದು ಸಂಘಮಿತ್ರಳನ್ನು ಲವ್ ಜಿಹಾದ್ ಬಲೆಗೆ ಬೀಳಿಸಿಕೊಂಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 15 ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗುವಂತೆ ಮಾಡಿ, ಅಪರಾಧಿಗೆ ತಕ್ಕ ಶಿಕ್ಷೆ ನೀಡಿಸುವ ಬಗ್ಗೆ ಅವರು ಭರವಸೆ ನೀಡಿದ್ದಾರೆ.
#WATCH | Assam Chief Minister Himanta Biswa Sarma meets family members of triple murder case victim Golaghat. pic.twitter.com/rnsYiWOlYM
— ANI (@ANI) July 26, 2023