Site icon Vistara News

ಕೆಲಸದಿಂದ ತೆಗೆದು ಹಾಕಿದ ಮ್ಯಾನೇಜರ್​​ ಎದೆಗೇ ಗುಂಡು ಹಾರಿಸಿ, ನಾಪತ್ತೆಯಾದ ಮಾಜಿ ಉದ್ಯೋಗಿ!

Man Shoots Employer In Noida

ನೊಯ್ಡಾ: ಕೆಲಸದಿಂದ ತೆಗೆದು ಹಾಕುವ ಬಾಸ್​​, ಮ್ಯಾನೇಜರ್​​ಗಳನ್ನು ಕೆಲಸ ಕಳೆದುಕೊಂಡವರು ಬೈಯ್ಯುವುದು, ಕಂಪನಿಯನ್ನು ಹೀಗಳೆಯುವುದು, ‘ಅವರಿಗೂ ಹೀಗೇ ಆಗಲಿ’ ಎಂದು ಶಾಪ ಹಾಕುವುದು ಸಾಮಾನ್ಯ. ಆದರೆ ನೊಯ್ಡಾದಲ್ಲಿ ಒಬ್ಬ ವ್ಯಕ್ತಿ ಕೆಲಸ ಕಳೆದುಕೊಂಡು 6 ತಿಂಗಳ ಬಳಿಕ, ತನ್ನನ್ನು ಕೆಲಸದಿಂದ ತೆಗೆದು ಹಾಕಿದ ಮ್ಯಾನೇಜರ್​ ಎದೆಗೆ ಗುಂಡು ಹಾರಿಸಿದ್ದಾನೆ (Man Shoots Employer). ಆ ಮ್ಯಾನೇಜರ್​ ಸ್ಥಿತಿ ಗಂಭೀರವಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನೊಯ್ಡಾದ ಹೊರಗುತ್ತಿಗೆ ಕಂಪನಿಯೊಂದರಲ್ಲಿ ಡಾಟಾ ಎಂಟ್ರಿ ಆಪರೇಟರ್​ ಆಗಿ ಕೆಲಸ ಮಾಡುತ್ತಿದ್ದ ಅನೂಪ್​ ಸಿಂಗ್​ ಆರೋಪಿ. ಈತ ದೆಹಲಿಯ ಅಶೋಕ್​ ನಗರದ ನಿವಾಸಿ. ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂಬ ಕಾರಣಕ್ಕೆ ಆತನ ಮ್ಯಾನೇಜರ್​ ಆಗಿದ್ದ ಶಾರ್ದೂಲ್​​ ಇಸ್ಲಾಮ್​ ಅವರು ಕೆಲಸದಿಂದ ವಜಾಗೊಳಿಸಿದ್ದರು. ಆಗಿನಿಂದಲೂ ಅನೂಪ್​ ಸಿಟ್ಟಾಗಿದ್ದ. ಕಳೆದ ಒಂದು ತಿಂಗಳ ಹಿಂದೆ ಮತ್ತು ಶಾರ್ದೂಲ್ ಇಸ್ಲಾಮ್​​ನನ್ನು ಸಂಪರ್ಕಿಸಿ ಅನೂಪ್​ ಸಿಂಗ್​, ತನ್ನನ್ನು ಕೆಲಸಕ್ಕೆ ವಾಪಸ್​ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದ. ಆದರೆ ಇಸ್ಲಾಮ್​​ ಒಪ್ಪಿರಲಿಲ್ಲ.

ಬುಧವಾರ ಸಂಜೆ ಇಸ್ಲಾಮ್​ನ ಆಫೀಸಿಗೆ ನುಗ್ಗಿದ ಅನೂಪ್​ ಜಗಳ ಮಾಡಿದ್ದಾನೆ. ಇವರಿಬ್ಬರ ನಡುವೆ ಸಿಕ್ಕಾಪಟೆ ಗಲಾಟೆಯೂ ಆಯಿತು. ಆಗ ಏಕಾಏಕಿ ಅನೂಪ್ ದೇಶೀಯ ರಿವಾಲ್ವರ್​​ನ್ನು ತೆಗೆದು, ಇಸ್ಲಾಮ್​​ಗೆ ಗುಂಡು ಹಾರಿಸಿದ್ದಾನೆ. ಈ ಬಗ್ಗೆ ಮಾಹಿತಿ ನೀಡಿದ ಹೆಚ್ಚುವರಿ ಪೊಲೀಸ್​ ಆಯುಕ್ತ ಆಶುತೋಶ್​ ದ್ವಿವೇದಿ, ‘ಇಸ್ಲಾಮ್​ ಎದೆಗೇ ಗುಂಡು ಹಾರಿದೆ. ಪರಿಸ್ಥಿತಿ ಗಂಭೀರವಾಗಿದೆ. ಕೈಲಾಶ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ. ಅನೂಪ್ ಸಿಂಗ್ ನಾಪತ್ತೆಯಾಗಿದ್ದು ಆತನಿಗಾಗಿ ಹುಡುಕಾಟ ನಡೆದಿದೆ.

ಇದನ್ನೂ ಓದಿ: Viral post | 380 ಅಡಿ ಎತ್ತರದ ಜಲಪಾತದ ತುದಿಯಲ್ಲಿ ನೀರ ಮೇಲೆ ನಿಂತ ನೀರೆ!

Exit mobile version