Site icon Vistara News

Andhra Horror | 14 ವರ್ಷದ ಬಾಲಕಿಯ ಕತ್ತು ಸೀಳಿ, ಆಕೆಯ ಬಾಯಿಗೆ ಆ್ಯಸಿಡ್‌ ಸುರಿದ ಕಾಮಾಂಧ!

Rape

ಅಮರಾವತಿ: ಆಂಧ್ರಪ್ರದೇಶದ ನೆಲ್ಲೂರು (Andhra Horror) ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ 14 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದು, ಈ ವೇಳೆ ಬಾಲಕಿ ಪ್ರತಿರೋಧ ಒಡ್ಡಿದ ಕಾರಣ ಆಕೆಯ ಕತ್ತು ಸೀಳಿ, ಬಾಯಿಗೆ ಆ್ಯಸಿಡ್‌ ಸುರಿದಿದ್ದಾನೆ. ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.

ವೆಂಕಟಾಚಲಂ ಗ್ರಾಮದಲ್ಲಿ ಸೋಮವಾರ ಬಾಲಕಿಯು ಒಬ್ಬಳೇ ಮನೆಯಲ್ಲಿರುವಾಗ ಯುವಕನು ನುಗ್ಗಿದ್ದಾನೆ. ಈ ವೇಳೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಆದರೆ, ಇದಕ್ಕೆ ಬಾಲಕಿಯು ಪ್ರತಿರೋಧ ಒಡ್ಡಿದ್ದಾಳೆ. ಹಾಗೆಯೇ, ಆತನಿಂದ ತಪ್ಪಿಸಿಕೊಂಡು ಶೌಚಾಲಯದ ಬಾಗಿಲು ಹಾಕಿಕೊಂಡು ಒಳಗೆ ಕೂತಿದ್ದಾಳೆ. ಇದರಿಂದ ಇನ್ನಷ್ಟು ಕುಪಿತಗೊಂಡ ಯುವಕನು ಶೌಚಾಲಯದ ಬಾಗಿಲು ಮುರಿದು, ಒಳಗೆ ಹೋಗಿದ್ದಾನೆ ಎಂದು ತಿಳಿದುಬಂದಿದೆ.

ಶೌಚಾಲಯದ ಒಳಗೆ ನುಗ್ಗಿದ ಯುವಕನು ಬಾಲಕಿಯ ಕತ್ತು ಸೀಳಿದ್ದಾನೆ. ಶೌಚಾಲಯ ಸ್ವಚ್ಛಗೊಳಿಸುವ ಆ್ಯಸಿಡ್‌ಅನ್ನು ಆಕೆಯ ಬಾಯಿಯಲ್ಲಿ ಸುರಿದು, ಪರಾರಿಯಾಗಿದ್ದಾನೆ. ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಪೊಲೀಸರು ಯುವಕನನ್ನು ಬಂಧಿಸಿದ್ದು, ಪೋಕ್ಸೊ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಯುವಕನು ಬಾಲಕಿಯ ಸಂಬಂಧಿಕ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | Sexually Assault | ಲೈಂಗಿಕ ದೌರ್ಜನ್ಯ ವಿರೋಧಿಸಿದ ಮಹಿಳೆಯನ್ನು ಚಲಿಸುವ ರೈಲಿನಿಂದ ತಳ್ಳಿದ!

Exit mobile version