Site icon Vistara News

Suicide | ಪ್ರೇಯಸಿಗೆ ಬೆದರಿಸಲು ಹೋಗಿ ನೇಣು ಕುಣಿಕಿಗೆ ಸಿಲುಕಿ ಪ್ರಾಣಬಿಟ್ಟ ಗಾಯಕ!

Family Suicide

ವೆಲ್ಲೂರು (ತಮಿಳುನಾಡು) : ಪತ್ನಿ ಮಕ್ಕಳಿದ್ದರೂ ಆ ವ್ಯಕ್ತಿಗೆ ಬೇರೊಬ್ಬಳ ಜತೆ ಅಕ್ರಮ ಸಂಬಂಧ. ಅದೂ ಅಲ್ಲದೆ ಆಕೆಯ ಜತೆಯೂ ಜಗಳ. ಮುಂದುವರಿದ ಆತ ಆತ್ಮಹತ್ಯೆ (Suicide) ಮಾಡಿಕೊಳ್ಳುತ್ತೇನೆ ಎಂದು ಪ್ರೇಯಸಿಗೆ ಹೆದರಿಸಲೆಂದು ನೇಣು ಕುಣಿಕೆಗೆ ಕೊರಳೊಡ್ಡಿದ್ದ. ಆಚಾನಕ್‌ ಆಗಿ ಬಿಗಿದುಕೊಂಡಿದ್ದರಿಂದ ಆತ ಕೊನೆಯುಸಿರೆಳೆದ.

ಘಟನೆ ನಡೆದಿರುವುದು ತಮಿಳುನಾಡಿನ ವೆಲ್ಲೂರಿನಲ್ಲಿ. ಮೃತಪಟ್ಟ ಗಾಯಕನನ್ನು ರಾಜಾ ಎಂದು ಗುರುತಿಸಲಾಗಿದೆ. ೪೨ ವರ್ಷದ ಅವರಿಗೆ ಹೆಂಡತಿ ಮಕ್ಕಳಿರುವ ಹೊರತಾಗಿಯೂ ತಾವು ಗಾಯಕರಾಗಿ ಕೆಲಸ ಮಾಡುತ್ತಿದ್ದ ಬ್ಯಾಂಡ್‌ ತಂಡದಲ್ಲಿದ್ದ ಚಿತ್ರಾ ಎಂಬುವರ ಜತೆ ಅನೈತಿಕ ಸಂಬಂಧವಿತ್ತು. ಯಾವುದೋ ವಿಷಯಕ್ಕೆ ಚಿತ್ರಾ ಮತ್ತು ರಾಜಾ ವಿಡಿಯೊ ಕಾಲ್‌ ಮಾಡಿಕೊಂಡು ಜಗಳವಾಡಿದ್ದಾರೆ. ಈ ವೇಳೆ ರಾಜಾ ತಾನು ನೇಣು ಬಿಗಿದುಕೊಂಡು ಸಾಯುವುದಾಗಿ ಹೇಳಿದ್ದಾನೆ. ಕೋಪದಲ್ಲಿದ್ದ ಚಿತ್ರ ಹೋಗಿ ಸಾಯಿ ಎಂದಿದ್ದಳು.

ಕೋಪಗೊಂಡ ರಾಜಾ, ಕುಣಿಕೆಯೊಂದನ್ನು ತಯಾರಿಸಿ ಕೊರಳೊಡ್ಡಿದ್ದಾನೆ. ಚಿತ್ತಾ ನೋಡುತ್ತಿದ್ದಂತೆ ನೇಣು ಕುಣಿಕೆ ಬಿಗಿದುಕೊಂಡಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ತಲುಪಿದ್ದು, ಅವರು ಸ್ಥಳಕ್ಕೆ ತೆರಳಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

Exit mobile version