ರಾಂಚಿ: ಜಗತ್ತಿನಲ್ಲಿ ಎಂತೆಂಥ ನಾಚಿಕೆಗೆಟ್ಟ ಜನ ಇರುತ್ತಾರೆ ಎಂಬುದಕ್ಕೆ ಜಾರ್ಖಂಡ್‌ನ ವ್ಯಕ್ತಿಯೊಬ್ಬ ನಿದರ್ಶನವಾಗಿ ಸಿಕ್ಕಿದ್ದಾನೆ. ಜಾರ್ಖಂಡ್‌ನ ಡುಮ್ಕಾದಲ್ಲಿ ೧೯ ವರ್ಷದ ಯುವತಿಗೆ ಪ್ರೇಮ ನಿವೇದನೆ ಮಾಡಿದ ಶಾರುಖ್ ಎಂಬ ವ್ಯಕ್ತಿಯು, ಆಕೆ ಪ್ರೀತಿಯನ್ನು ನಿರಾಕರಿಸಿದಾಗ ಬೆಂಕಿ ಹಚ್ಚಿದ್ದಾನೆ. ಸುಟ್ಟ ಗಾಯಗಳಿಂದ ಬಳಲಿದ ಯುವತಿಯು ಭಾನುವಾರ ಮೃತಪಟ್ಟಿದ್ದಾಳೆ. ಬೆಂಕಿ ಹಚ್ಚಿ ಕೊಂದ ಆರೋಪದಲ್ಲಿ ಪೊಲೀಸರು ಯುವಕನನ್ನು ಬಂಧಿಸಿದಾಗ ಆತ ನಾಚಿಕೆಯಿಲ್ಲದೆ (Shameless Smile) ನಕ್ಕ ವಿಡಿಯೊ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಯುವತಿಯು ಈತನ ಪ್ರಪೋಸಲ್ ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ಡುಮ್ಕಾದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ)ಯ ಸೆಕ್ಷನ್ ೧೪೪ ಜಾರಿಗೊಳಿಸಲಾಗಿದೆ. ಇನ್ನು ಪೊಲೀಸರು ಆರೋಪಿಯನ್ನು ಬಂಧಿಸಿ, ವಾಹನದಲ್ಲಿ ಕರೆದುಕೊಂಡು ಹೋಗುವಾಗ ಆರೋಪಿಯು ನಕ್ಕಿರುವುದು ಜಾಲತಾಣದಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಯುವತಿಯನ್ನು ಕೊಂದು ಈತ ನಾಚಿಕೆಯಿಲ್ಲದೆ ನಕ್ಕಿದ್ದಾನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಿಯುಸಿ ಓದುತ್ತಿದ್ದ ಯುವತಿಗೆ ಈತ ಹಲವು ದಿನಗಳಿಂದ ಪ್ರೀತಿ ಪ್ರೇಮದ ಹೆಸರಿನಲ್ಲಿ ಹಿಂಬಾಲಿಸುವುದು, ಪದೇಪದೆ ನನ್ನನ್ನು ಪ್ರೀತಿಸು ಎಂದು ಒತ್ತಾಯಿಸುತ್ತಿದ್ದ. ಆದರೆ, ಯುವತಿಯು ಇವನ ಪ್ರಪೋಸಲ್‌ಅನ್ನು ನಿರಾಕರಿಸಿದ್ದಾಳೆ. ಇದರಿಂದ ಕುಪಿತಗೊಂಡ ಶಾರುಖ್, ಬೆಂಕಿ ಹಚ್ಚಿದ್ದ. ಯುವತಿ ದೇಹದ ಶೇ.೯೦ರಷ್ಟು ಭಾಗ ಸುಟ್ಟ ಕಾರಣ ಆಕೆಯು ರಾಂಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.
ಇದನ್ನೂ ಓದಿ | Crime | 12 ಕೋಟಿ ರೂ. ಮೌಲ್ಯದ ಮೊಬೈಲ್ ಕದ್ದ ಪ್ರಕರಣವನ್ನು ಪೊಲೀಸರು 24 ಗಂಟೆಯಲ್ಲಿ ಭೇದಿಸಿದ್ದು ಹೇಗೆ?