Site icon Vistara News

ಮಗು ಹೆತ್ತುಕೊಡಲಿಲ್ಲ ಎಂದು ಪತ್ನಿಯ ಗುಪ್ತಾಂಗವನ್ನು ಬ್ಲೇಡ್​​ನಿಂದ ಕೊಯ್ದ ದುಷ್ಟ ಪತಿ; ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯ

Two killed as two bikes collide head on

ಲಖನೌ: ಮದುವೆಯಾಗಿ 6 ವರ್ಷಗಳೇ ಕಳೆದರೂ ಒಂದು ಮಗುವನ್ನು ಹೆತ್ತುಕೊಡಲಿಲ್ಲ ಎಂದು ಹೆಂಡತಿಯನ್ನು ಸದಾ ಮೂದಲಿಸುತ್ತ, ಜಗಳವಾಡುತ್ತಿದ್ದ ಪತಿಯೀಗ ಮತ್ತೊಂದು ಹಂತದ ಕ್ರೌರ್ಯ ತೋರಿಸಿದ್ದಾನೆ. ತನ್ನ ಹೆಂಡತಿಯ ಗುಪ್ತಾಂಗವನ್ನು ಬ್ಲೇಡ್ ನಿಂದ ಕೊಯ್ದು ಗಾಯಗೊಳಿಸಿದ್ದಾನೆ. ಆಕೆ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಉತ್ತರ ಪ್ರದೇಶದ ಲಖನೌದ ರವೀಂದ್ರ ಎಂಬಾತ ತನ್ನ ಪತ್ನಿ ಬಸುರಾಗಲಿಲ್ಲ ಎಂಬ ಕಾರಣಕ್ಕೆ ಕ್ರೋಧಗೊಂಡು ಈ ಕೃತ್ಯ ಎಸಗಿದ್ದಾನೆ. ಮದುವೆಯಾಗಿ ಆರುವರ್ಷಗಳಾದರೂ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಇದೇ ವಿಚಾರಕ್ಕೆ ಇತ್ತೀಚೆಗೆ ದಂಪತಿ ಮಧ್ಯೆ ಜಗಳವಾಗುತ್ತಿತ್ತು. ಗಂಡನ ಕಾಟ ತಡೆಯಲಾಗದ ಆಕೆ ಎಂಟು ತಿಂಗಳ ಹಿಂದೆ ತವರು ಮನೆ ಸೇರಿದ್ದರು.

ಡಿಸೆಂಬರ್ 25ರಂದು ಪತ್ನಿಯಿದ್ದಲ್ಲಿಗೆ ಹೋದ ರವೀಂದ್ರ ಆಕೆಯ ಮನವೊಲಿಸಿ ವಾಪಸ್ ಕರೆದುಕೊಂಡು ಬಂದಿದ್ದ. ಹೀಗೆ ಬಂದವನು ಅಸಹಜ ಲೈಂಗಿಕ ಕ್ರಿಯೆ ನಡೆಸಲು ಮುಂದಾದ. ಆದರೆ ಆಕೆ ಸುತಾರಾಂ ಒಪ್ಪಲಿಲ್ಲ. ಸಿಟ್ಟಾದ ರವೀಂದ್ರ ತನ್ನ ಪತ್ನಿಯ ಗುಪ್ತಾಂಗ ಗಾಯಗೊಳಿಸಿದ್ದಾನೆ. ಆರೋಪಿ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಅವನು ತಪ್ಪಿಸಿಕೊಂಡಿದ್ದಾನೆ.

ಇದನ್ನೂ ಓದಿ: Suspicious Death | ಅನುಮಾನಾಸ್ಪದ ರೀತಿಯಲ್ಲಿ ಪೊಲೀಸ್‌ ಪೇದೆ ಪತ್ನಿ ಸಾವು; ಕೊಲೆ ಎಂದು ಪೋಷಕರ ಆರೋಪ

Exit mobile version