ಶಿವಮೊಗ್ಗ: ಕೌಟುಂಬಿಕ ಕಲಹದಿಂದಾಗಿ ಪತಿಯೊಬ್ಬ ಪತ್ನಿ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ (Murder Case) ಮೃತಪಟ್ಟಿದ್ದಾಳೆ. ನೀಲಾವತಿ (42) ಮೃತ ದುರ್ದೈವಿ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕುದರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆವಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನೀಲಾವತಿ ಹಾಗೂ ಪತಿ ಲೋಕೇಶ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿತ್ತು. ನಿತ್ಯವು ಮನೆಯಲ್ಲಿ ಗಲಾಟೆ ಇದ್ದೆ ಇತ್ತು. ಇಂದು ಅದು ವಿಪರೀತಕ್ಕೆ ತಿರುಗಿದ್ದು, ಜಗಳದಲ್ಲಿ ಸಿಟ್ಟಿಗೆದ್ದ ಲೋಕೇಶ್ ಪತ್ನಿ ನೀಲಾವತಿಗೆ ಕತ್ತಿಯನ್ನು ಬೀಸಿದ್ದಾನೆ.
ಕತ್ತಿಯಿಂದ ಬೀಸಿದ ರಭಸಕ್ಕೆ ತೀವ್ರ ಹಲ್ಲೆಗೊಳಗಾಗಿದ್ದ ನೀಲಾವತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಜೀವಬಿಟ್ಟಿದ್ದಾಳೆ.ಇತ್ತ ಪತ್ನಿ ಕೊಂದ ಲೋಕೇಶ್ ನಾಪತ್ತೆಯಾಗಿದ್ದಾನೆ. ಸದ್ಯ ಈ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: Karnataka Weather : ಇನ್ನೆರಡು ದಿನಗಳು ರಾಜ್ಯಾದ್ಯಂತ ಸೆಕೆ ಟೈಂ; ತಾಪಮಾನ ಎಚ್ಚರಿಕೆ
ಉಡುಪಿಯಲ್ಲಿ ರಾತ್ರಿ ಬಸ್ ಸಂಚಾರ ವಿಷ್ಯಕ್ಕೆ ಇಬ್ಬರಿಗೆ ಚೂರಿ ಇರಿತ
ಪುತ್ತಿಗೆ ಪರ್ಯಾಯ ಸಮಯದಲ್ಲಿ ರಾತ್ರಿ ಬಸ್ ಸಂಚಾರ ವಿಷಯದಲ್ಲಿ ಇತ್ತಂಡಗಳ ನಡುವೆ ಗಲಾಟೆ ನಡೆದಿದೆ. ಪರ್ಯಾಯ ದಿನ ಬಸ್ ಸಂಚಾರ ವಿಷಯದಲ್ಲಿ ಜೆಎಂಟಿ ಬಸ್ ಸಿಬ್ಬಂದಿ ಹಾಗೂ ಟಿಎಂಟಿ ಬಸ್ ಸಿಬ್ಬಂದಿ ನಡುವೆ ಗಲಾಟೆ ನಡೆದಿತ್ತು.
ನಿನ್ನೆ ತಡರಾತ್ರಿ ಕೆಲಸ ಮುಗಿಸಿ ತೆರಳುತ್ತಿದ್ದ ವೇಳೆ ಜೆಎಂಟಿ ಬಸ್ನ ಶಿಶಿರ್ ಮತ್ತು ಸಂತೋಷ್ ಬೈಕ್ ಅಡ್ಡಗಟ್ಟಿದ ಟಿಎಂಟಿ ಬಸ್ನ ತನ್ವೀರ್, ಮುರ್ಹನ್, ಶಾಕೀರ್ ತಂಡದವರು ಚೂರಿ ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡವರಿಗೆ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ