Site icon Vistara News

10 ಸಾವಿರ ರೂ. ವಿವಾದ: ಹೈಕೋರ್ಟ್​ ಆವರಣದಲ್ಲಿ ಹಗಲು ಹೊತ್ತಲ್ಲೇ ಭೀಕರ ಹತ್ಯೆ

Telangana High Court

#image_title

ಹೈದರಾಬಾದ್​ನಲ್ಲಿರುವ ತೆಲಂಗಾಣ ಹೈಕೋರ್ಟ್ (Telangana High Court)​​ ಎದುರಲ್ಲಿ, ಇಂದು ಹಾಡಹಗಲಲ್ಲೇ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಹೈಕೋರ್ಟ್​​ ಕಟ್ಟಡದ ಗೇಟ್​ ನಂಬರ್​ 6ರ ಬಳಿ ಮಿಥುನ್ ಎಂಬಾತನ ಮೇಲೆ ಅಪರಿಚಿತನೊಬ್ಬ ಚಾಕುವಿನಿಂದ ಹಲ್ಲೆ ಮಾಡಿ, ಇರಿದು ಕೊಂದಿದ್ದಾನೆ. ಜನರೆಲ್ಲ ಓಡಾಡುತ್ತಿದ್ದಾಗಲೇ ನಡೆದ ಹತ್ಯೆ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ. ಅದು ಹೈಕೋರ್ಟ್ ಆವರಣವೇ ಆಗಿದ್ದು, ಅಲ್ಲಿ ಪೊಲಿಸರು ಇದ್ದರೂ, ಹಾಡಹಗಲಲ್ಲೇ ಆಗಿದ್ದರೂ ಆರೋಪಿ ಅಲ್ಲಿಂದ ಪರಾರಿಯಾಗಿದ್ದ. ಬಳಿಕ ಅವನೇ ಬಂದು ಶರಣಾಗಿದ್ದಾನೆ.

ಮಿಥುನ್​ ಸುಲಭ್​ ಕಾಂಪ್ಲೆಕ್ಸ್​​ ಕಟ್ಟಡ (ಸಾರ್ವಜನಿಕ ಶೌಚಗೃಹ)ದಲ್ಲಿ ಕೆಲಸ ಮಾಡುವವನಾಗಿದ್ದ. ಇವನನ್ನು ಕೊಂದವನ ಹೆಸರು ಆಜಂ. ಮಿಥುನ್ ಸ್ವಲ್ಪ ತಿಂಗಳ ಹಿಂದೆ ಆಜಂನಿಗೆ 10 ಸಾವಿರ ರೂಪಾಯಿ ಕೊಟ್ಟಿದ್ದ. ಇದೇ 10ಸಾವಿರ ರೂಪಾಯಿ ವಿಚಾರಕ್ಕೆ ಮಿಥುನ್ ಮತ್ತು ಆಜಂ ನಡುವೆ ವಿವಾದ-ಸಂಘರ್ಷ ನಡೆಯುತ್ತಲೇ ಇತ್ತು. ಅಂತಿಮವಾಗಿ ಆಜಂ ಕ್ರೂರ ವರ್ತನೆ ತೋರಿಸಿದ್ದಾನೆ. ಮಿಥುನ್​ನನ್ನು ಹತ್ಯೆ ಮಾಡಿದ್ದಾನೆ. ಪೊಲೀಸರು ಮಿಥುನ್ ದೇಹವನ್ನು ಪೋಸ್ಟ್​​ಮಾರ್ಟಮ್​ಗೆ ಕಳಿಸಿದ್ದಾರೆ. ಶರಣಾಗಿರುವ ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಫೇಸ್​​ಬುಕ್​ ಲೈವ್​​ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಅಯೋಧ್ಯೆ ಅರ್ಚಕ; ಪೊಲೀಸರ ವಿರುದ್ಧ ಆರೋಪ

ಇದೇ ವರ್ಷ ಮಾರ್ಚ್​ ತಿಂಗಳಲ್ಲಿ ಬಿಹಾರದಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು. ಸಹಸ್ರ ಸಿವಿಲ್​ ಕೋರ್ಟ್ ಆವರಣದಲ್ಲಿ ವಿಚಾರಣಾಧೀನ ಕೈದಿಯೊಬ್ಬನನ್ನು ವ್ಯಕ್ತಿಯೊಬ್ಬ ಕೊಂದು ಹಾಕಿದ್ದ. ಮೃತಪಟ್ಟವನ ಹೆಸರು ಪ್ರಭಾಕರ್ ಕುಮಾರ್ (26) ಎಂದಾಗಿತ್ತು. ಪ್ರಭಾಕರ್​ ಕುಮಾರ್​ ಒಬ್ಬ ಕೊಲೆ ಆರೋಪಿಯಾಗಿದ್ದ. ಆತನನ್ನು ವಿಚಾರಣೆಗಾಗಿ ಕೋರ್ಟ್​ಗೆ ಹಾಜರು ಪಡಿಸಲು ಕರೆದುಕೊಂಡು ಹೋಗುತ್ತಿದ್ದಾಗಲೇ ಹತ್ಯೆಯಾಗಿತ್ತು. ಪ್ರಭಾಕರ್ ಕುಮಾರ್ ಯಾರನ್ನು ಹತ್ಯೆ ಮಾಡಿದ್ದನೋ, ಆ ವ್ಯಕ್ತಿಯ ಮನೆಯವನೊಬ್ಬ ಬಂದು ಇವನನ್ನು ಕೊಲೆ ಮಾಡಿದ್ದ.

Exit mobile version