ಬೆಂಗಳೂರು: ʻಉದಯʼ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ʻನಂದಿನಿʼ ಧಾರಾವಾಹಿಯ ಪ್ರಮುಖ ಪಾತ್ರಧಾರಿ ರಾಹುಲ್ ರವಿ ಬಗ್ಗೆ ಆಘಾತಕಾರಿ ಸುದ್ದಿಯೊಂದು ರಿವೀಲ್ ಆಗಿದೆ. ನಟನ ವಿರುದ್ಧ ಪತ್ನಿ ದೂರು ದಾಖಲಿಸಿದ್ದು ಇದೀಗ ರಾಹುಲ್ ರವಿ (Rahul Ravi) ನಾಪತ್ತೆಯಾಗಿದ್ದಾರೆ. ರಾಹುಲ್ ರವಿ ವಿರುದ್ಧ ಪತ್ನಿ ಲಕ್ಷ್ಮಿ ಕಿರುಕುಳದ ದೂರು ನೀಡಿದ ಕೆಲವೇ ದಿನಗಳಲ್ಲಿ ಈ ಸುದ್ದಿ ಬೆಳಕಿಗೆ ಬಂದಿದೆ.
ರಾಹುಲ್ ರವಿ ಅವರಿಗಾಗಿ ಚೆನ್ನೈ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ. ರಾಹುಲ್ ಡಿಸೆಂಬರ್ 2020ರಲ್ಲಿ ಲಕ್ಷ್ಮಿ ಅವರನ್ನು ಮದುವೆಯಾಗಿದ್ದರು. ರಾಹುಲ್ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಹಲವು ದಿನಗಳಿಂದ ಕೇಳಿಬಂದಿತ್ತು. ರಾಹುಲ್ ಮತ್ತೊಬ್ಬ ಹುಡುಗಿಯ ಜತೆಗಿನ ಸಂಬಂಧದ ಬಗ್ಗೆ ಲಕ್ಷ್ಮಿ ಅವರೂ ಕೂಡ ಬಹಿರಂಗಪಡಿಸಿದ್ದರು. ಇದೇ ವಿಚಾರಕ್ಕೆ ದಂಪತಿ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಪತಿಯ ಮತ್ತೊಂದು ಸಂಬಂದದ ಬಗ್ಗೆ ತಿಳಿದ ಲಕ್ಷ್ಮಿ ಸೀದಾ ಅವರ ಅಪಾರ್ಟ್ಮೆಂಟ್‌ಗೆ ಭೇಟಿ ನೀಡಿದ್ದರು. ಏಪ್ರಿಲ್ 26 ರ ಮಧ್ಯರಾತ್ರಿ ಸುಳಿವು ಆಧರಿಸಿ ಲಕ್ಷ್ಮಿ ಅವರು ಪೊಲೀಸರು ಮತ್ತು ಅಪಾರ್ಟ್‌ಮೆಂಟ್ ಅಸೋಸಿಯೇಷನ್ಸದಸ್ಯರೊಂದಿಗೆ ಅವರ ಅಪಾರ್ಟ್ಮೆಂಟ್‌ಗೆ ಹೋಗಿದ್ದರು .ಈ ವೇಳೆ ರಾಹುಲ್ ಬೆಡ್‌ರೂಂನಲ್ಲಿ ಯುವತಿ ಇರುವುದು ನೋಡಿದ್ದರು. ಇದರಿಂದ ಸಿಟ್ಟಿಗೆದ್ದ ನಟ ರಾಹುಲ್ ಲಕ್ಷ್ಮಿ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿದ ಸಂಬಂಧ ನಟನ ಪತ್ನಿ ಲಕ್ಷ್ಮಿ ಕೇಸು ದಾಖಲಿಸಿದ್ದರು. ಇದಕ್ಕೆ ರಾಹುಲ್ ರವಿ ತನ್ನ ಹೆಂಡತಿ ಮಾನಸಿಕ ಸ್ಥಿತಿ ಸರಿಯಿಲ್ಲ. ಅವರು ಮಾನಸಿಕವಾಗಿ ಸದೃಢವಾಗಿಲ್ಲ ಎಂದು ಆರೋಪಿಸಿದ್ದರು.
ಇದನ್ನೂ ಓದಿ: NIA Raid: ಶಂಕಿತ ಉಗ್ರ ಅಲಿ ಅಬ್ಬಾಸ್ ಮತ್ತೆ ಎನ್‌ಐಎ ವಶಕ್ಕೆ
ಆದರೆ ಮದ್ರಾಸ್ ಹೈಕೋರ್ಟ್ ಈ ಆರೋಪಗಳನ್ನು ತಿರಸ್ಕರಿಸಿ, ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ನವೆಂಬರ್ 3 ರಂದು, ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ. ನಟನ ವಿರುದ್ಧ ಬಂಧನ ವಾರಂಟ್ ಸಹ ಹೊರಡಿಸಲಾಗಿದೆ. ಆದರೆ ಈಗ, ನಾಪತ್ತೆಯಾಗಿರುವ ರಾಹುಲ್ ಪತ್ತೆಗೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ರಾಹುಲ್ ಅವರು ಕೇವಲ ನಟ ಮಾತ್ರವಲ್ಲ. ಮಾಡೆಲ್ ಕೂಡ. ಪೊನ್ನಂಬಿಲಿ ( Ponnambili ) ಕಾರ್ಯಕ್ರಮವು ಅವರಿಗೆ ದೊಡ್ಡ ಬ್ರೇಕ್ ನೀಡಿತು. ಕಟ್ಟುಮ್ ಮಕನ್ (Kattum Makan) ಮತ್ತು ಇಂಡಿಯನ್ ಲವ್ ಸ್ಟೋರಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕನ್ನಡ ಮತ್ತು ತಮಿಳಿನಲ್ಲಿ ಪ್ರಸಾರವಾಗುವ ‘ನಂದಿನಿ’ ಧಾರಾವಾಹಿಯ ಮೂಲಕ ಖ್ಯಾತಿ ಪಡೆದರು. ರಾಹುಲ್ ಸನ್ ಟಿವಿಯ ಕಣ್ಣಕ್ಕನನ್ನೇ (Kannakananne) ಕಾರ್ಯಕ್ರಮದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.