Site icon Vistara News

Neha Murder Case: ನೇಹಾ ಹತ್ಯೆ ಆರೋಪಿಯನ್ನು ಜನರ ಕೈಗೆ ಒಪ್ಪಿಸಿ ಎಂದ ಡಿಂಪಲ್‌ ಕ್ವೀನ್‌!

Neha Murder Case Rachita Ram React

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ (Neha Murder Case) ಬರ್ಬರ ಕೊಲೆ ಪ್ರಕರಣ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿ ಫಯಾಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಸಿನಿಮಾ ತಾರೆಯರು ಕೂಡ ಧ್ವನಿ ಎತ್ತಿದ್ದಾರೆ. ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ, ನಟಿ ಪ್ರಿಯಾ ಸವದಿ, ನಟಿ ಕಾವ್ಯಾ ಶಾಸ್ತ್ರಿ ಪೋಸ್ಟ್‌ ಬೆನ್ನಲ್ಲೇ ಇದೀಗ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ (Rachita ram) ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ. ʻಈ ರೀತಿಯ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಅವರನ್ನು ಜನರ ಕೈಗೆ ಒಪ್ಪಿಸಿʼಎಂದು ಬರೆದುಕೊಂಡಿದ್ದಾರೆ.

ರಚಿತಾ ರಾಮ್‌ ಪೋಸ್ಟ್‌ನಲ್ಲಿ ʻʻಜಾತಿ, ಧರ್ಮ ಯಾವುದೇ ಆಗಿರಲಿ ಮೊದಲು ನಾವು ಮಾನವರು. ನಾನು ಈ ಪೋಸ್ಟ್‌ ಹಾಕಲು ಕಾರಣ ಆಕೆಗೆ ಆಗಿರುವ ಅನ್ಯಾಯ. ತಪ್ಪು ಯಾರೇ ಮಾಡಿದರು ತಪ್ಪೇ. ಸರ್ಕಾರಕ್ಕೆ ನನ್ನ ಒಂದು ಮನವಿ. ರಾಜಕೀಯ ಆಯಾಮದಲ್ಲಿ ಈ ವಿಷಯವನ್ನು ತರಬೇಡಿ. ಆಗಿರೋದು ಅನ್ಯಾಯ. ಈಗ ನ್ಯಾಯ ಬೇಕಾಗಿದೆ ಅಷ್ಟೆ. ಈ ರೀತಿಯ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಅವರನ್ನು ಜನಸಮಾನ್ಯರ ಕೈಗೆ ಒಪ್ಪಿಸಿʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Neha Murder Case: ನೇಹಾಳನ್ನು ಮದುವೆ ಮಾಡಿಸುವಂತೆ ಆಕೆಯ ಹೆತ್ತವರ ಪ್ರಾಣ ತಿಂದಿದ್ದ ಫಯಾಜ್!‌

ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

ಏ.18ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜು (Hubballi BVB College) ಆವರಣದಲ್ಲೇ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳು ನೇಹಾ ಹಿರೇಮಠ ಬರ್ಬರವಾಗಿ (Neha Murder Case) ಕೊಲೆಯಾಗಿದ್ದಳು. ಪಾಗಲ್‌ ಪ್ರೇಮಿಯ ಕೃತ್ಯಕ್ಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ಮುಂದುವರಿದಿದೆ. ಆರೋಪಿಯನ್ನು ಎನ್‌ಕೌಂಟರ್ ಮಾಡಿ ಬಿಸಾಕಿ ಎಂದು ಆಕ್ರೋಶಗಳು ಕೇಳಿಬರುತ್ತಿವೆ. ಈ ನಡುವೆ ಘಟನೆ ಬಗ್ಗೆ ಆರೋಪಿ ಫಯಾಜ್‌ ತಾಯಿ ಮಮ್ತಾಜ್ ಪ್ರತಿಕ್ರಿಯಿಸಿದ್ದು, ಫಯಾಜ್‌ಗೆ ಶಿಕ್ಷೆ ಆಗಬೇಕೆಂದು ಕಣ್ಣೀರು ಹಾಕಿದ್ದಾರೆ.

ನನ್ನ ಮಗ ಫಯಾಜ್‌ ಮಾಡಿದ ಕೃತ್ಯಕ್ಕೆ ತಕ್ಕ ಶಿಕ್ಷೆ ಆಗಬೇಕು. ಆತನ ತಪ್ಪಿಗೆ ನಾನು ರಾಜ್ಯದ ಜನತೆಗೆ ಹಾಗೂ ನೇಹಾಳ ತಂದೆ-ತಾಯಿಗೂ ಕ್ಷಮೆಯಾಚಿಸುತ್ತೆನೆ. ಅವರಿಗೆ ಎಷ್ಟು ದುಃಖ ಆಗಿದ್ದೀಯೋ ಅಷ್ಟೇ ನೋವನ್ನು ನಾವು ಅನುಭವಿಸುತ್ತಿದ್ದೇವೆ. ಯಾವ ಮಕ್ಕಳು ತಪ್ಪು ಮಾಡಿದರೂ ತಪ್ಪೇ.. ನನ್ನ ಮಗ ಮಾಡಿದ ತಪ್ಪಿಗೆ ಈ ನೆಲದ ಕಾನೂನು ಏನು ಶಿಕ್ಷೆ ವಿಧಿಸುತ್ತೋ ಆ ಪ್ರಕಾರ ಶಿಕ್ಷೆ ಆಗಲಿ ಎಂದರು.

Exit mobile version