ನವದೆಹಲಿ: ರಾಷ್ಟ್ರ ರಾಜಧಾನಿಯ ನಜಾಫ್ಗಢದ ಫ್ರಿಡ್ಜ್ನಲ್ಲಿ ಯುವತಿಯ ಸಿಕ್ಕ ಪ್ರಕರಣಕ್ಕೆ (Nikki Yadav Case) ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಯೊಂದು ಲಭ್ಯವಾಗಿದೆ. ಹತ್ಯೆಗೀಡಾಗುವ ಮೊದಲು ಪ್ರಿಯತಮ ಸಾಹಿಲ್ ಗೆಹ್ಲೋಟ್ನ ಮನೆಗೆ ನಿಕ್ಕಿ ಯಾದವ್ ಹೋಗಿರುವ ವಿಡಿಯೊ ಲಭ್ಯವಾಗಿದ್ದು, ಇದೀಗ ವೈರಲ್ ಆಗಿದೆ.
ಬೇರೊಬ್ಬಳ ಜತೆ ಮದುವೆ ಫಿಕ್ಸ್ ಆದ ಹಿನ್ನೆಲೆಯಲ್ಲಿ ನಿಕ್ಕಿ ಯಾದವ್, ಸಾಹಿಲ್ ಗೆಹ್ಲೋಟ್ ಮನೆಗೆ ಒಬ್ಬಳೇ ಹೋಗಿದ್ದಾಳೆ. ಮೆಟ್ಟಿಲು ಹತ್ತಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆಗೆ ಹೋದ ಬಳಿಕ ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ಇದೇ ವೇಳೆ ಕುಪಿತಗೊಂಡಿದ್ದ ಸಾಹಿಲ್ ಗೆಹ್ಲೋಟ್, ನಿಕ್ಕಿ ಯಾದವ್ಳನ್ನು ಹತ್ಯೆ ಮಾಡಿದ್ದಾನೆ. ಇದಾದ ಬಳಿಕ ನಜಾಫ್ಗಢ ಹೊರವಲಯದಲ್ಲಿರುವ ತನ್ನ ಡಾಬಾದ ಫ್ರಿಡ್ಜ್ನಲ್ಲಿ ಇರಿಸಿದ್ದಾನೆ ಎಂದು ತಿಳಿದುಬಂದಿದೆ.
ಫೆಬ್ರವರಿ ೯ರಂದು ನಿಕ್ಕಿ ಯಾದವ್, ಸಾಹಿಲ್ ಗೆಹ್ಲೋಟ್ ಮನೆಗೆ ಹೋಗಿದ್ದಾಳೆ. ಇದೇ ದಿನ ಆತ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಯುವತಿಯನ್ನು ಕೊಲೆ ಮಾಡಿದ ಕೆಲವೇ ಗಂಟೆಯಲ್ಲಿ ಸಾಹಿಲ್ ಗೆಹ್ಲೋಟ್, ಬೇರೊಬ್ಬ ಯುವತಿ ಜತೆ ಮದುವೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಡಾಬಾದ ಫ್ರಿಡ್ಜ್ನಲ್ಲಿ ಗೆಳತಿಯ ಶವ ಇಟ್ಟು, ಕೆಲವೇ ಗಂಟೆಯಲ್ಲಿ ಮತ್ತೊಬ್ಬಳನ್ನು ಮದುವೆಯಾದ ಸಾಹಿಲ್ ಗೆಹ್ಲೋಟ್