Site icon Vistara News

Etah Fake Encounter | ನಕಲಿ ಎನ್‌ಕೌಂಟರ್‌ ಪ್ರಕರಣ, 9 ಪೊಲೀಸರು ದೋಷಿ, ಇವರಲ್ಲಿ ಐವರಿಗೆ ಜೀವಾವಧಿ ಶಿಕ್ಷೆ

Etah Fake Encounter

ಲಖನೌ: ಉತ್ತರ ಪ್ರದೇಶದ ಎತಾಹ್‌ ಜಿಲ್ಲೆಯಲ್ಲಿ ನಡೆದ ನಕಲಿ ಎನ್‌ಕೌಂಟರ್‌ಗೆ (Etah Fake Encounter) ಸಂಬಂಧಿಸಿದಂತೆ ಒಂಬತ್ತು ಪೊಲೀಸರನ್ನು ಘಾಜಿಯಾಬಾದ್‌ ಸಿಬಿಐ ಕೋರ್ಟ್‌ ದೋಷಿ ಎಂದು ತೀರ್ಪು ನೀಡಿದೆ. ಒಂಬತ್ತು ಪೊಲೀಸರಲ್ಲಿ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿದರೆ, ಉಳಿದ ನಾಲ್ವರಿಗೆ ಐದು ವರ್ಷ ಶಿಕ್ಷೆ ವಿಧಿಸಿದೆ.

ಕಾರ್ಪೆಂಟರ್‌ ರಾಜಾರಾಮ್‌ ಎಂಬುವರು 2006ರಲ್ಲಿ ತಮ್ಮ ಕೂಲಿಗಾಗಿ ಬೇಡಿಕೆ ಇಟ್ಟಿದ್ದರು. ಆರೋಪಿಗಳಲ್ಲಿಯೇ ಒಬ್ಬರ ಮನೆಯಲ್ಲಿ ಅವರು ಕೆಲಸ ಮಾಡಿದ್ದಕ್ಕಾಗಿ ಕೂಲಿ ಕೊಡಿ ಎಂದು ಕೇಳಿದ್ದರು. ಇದೇ ಕಾರಣಕ್ಕೆ ಅವರನ್ನು ಡಕಾಯಿತ ಎಂಬುದಾಗಿ ಬಿಂಬಿಸಿ, ದರೋಡೆ ಕೇಸ್‌ ಹಾಕಿ ನಕಲಿ ಎನ್‌ಕೌಂಟರ್‌ ಮಾಡಲಾಗಿತ್ತು. ಈಗ ಪ್ರಕರಣದಲ್ಲಿ ಆರೋಪ ಸಾಬೀತಾಗಿದೆ.

ಸಿಬಿಐ ವಿಶೇಷ ನ್ಯಾಯಾಧೀಶ ಪರ್ವೇಂದ್ರ ಕುಮಾರ್‌ ಶರ್ಮಾ ಅವರು ಮಂಗಳವಾರವೇ ಒಂಬತ್ತು ಪೊಲೀಸರನ್ನು ದೋಷಿ ಎಂದು ಘೋಷಿಸಿದ್ದರು. ಬುಧವಾರ ಅವರಿಗೆ ಶಿಕ್ಷೆ ಘೋಷಿಸಲಾಗಿದೆ. ಹಾಗೆಯೇ, ಐವರಿಗೆ ತಲಾ 38 ಸಾವಿರ ರೂ. ಹಾಗೂ ನಾಲ್ವರಿಗೆ ತಲಾ 11 ಸಾವಿರ ರೂ. ದಂಡ ವಿಧಿಸಲಾಗಿದೆ.

ಇದನ್ನೂ ಓದಿ | Azam Khan | ದ್ವೇಷ ಭಾಷಣ ಕೇಸ್‌ನಲ್ಲಿ ದೋಷಿಯಾಗಿರುವ ಅಜಂ ಖಾನ್‌ ಸಂಸತ್ ಸದಸ್ಯತ್ವ ಕಳೆದುಕೊಳ್ಳುವುದೇಕೆ?

Exit mobile version