Site icon Vistara News

Online Fraud | ಕಸ್ಟಮರ್‌ ಕೇರ್‌ಗೆ ಕರೆ ಮಾಡಿ 1.49 ಲಕ್ಷ ರೂ. ಕಳೆದುಕೊಂಡ ವಿಮಾನ ಪ್ರಯಾಣಿಕ!

ಲಕ್ನೋ: ಯಾವುದಾದರೂ ಸೌಲಭ್ಯದಲ್ಲಿ ಸಮಸ್ಯೆಯುಂಟಾದರೆ ಅದರ ಕಸ್ಟಮರ್‌ ಸರ್ವೀಸ್‌ ಸಂಖ್ಯೆಗೆ ಕರೆ ಮಾಡಿ ವಿಚಾರಿಸುವುದು ಸಾಮಾನ್ಯ. ಆದರೆ ಉತ್ತರ ಪ್ರದೇಶದ ಈ ವ್ಯಕ್ತಿ ಹೀಗೆ ಮಾಡಿದ್ದರಿಂದಲೇ (Online Fraud) 1.49 ಲಕ್ಷ ರೂ. ಕಳೆದುಕೊಂಡಿದ್ದಾನೆ.

ಇದನ್ನೂ ಓದಿ: Donald Trump Company | ತೆರಿಗೆ ವಂಚನೆ ಕೇಸ್‌, ಡೊನಾಲ್ಡ್‌ ಟ್ರಂಪ್‌ ಕಂಪನಿಗೆ 130 ಕೋಟಿ ರೂ. ದಂಡ

ಅಮಿತ್‌ ಗುಪ್ತಾ ಹೆಸರಿನ ವ್ಯಕ್ತಿ ಲಕ್ನೋದವರಾಗಿದ್ದು, ಕೆಲಸದ ನಿಮಿತ್ತ ಮುಂಬೈಗೆ ಬಂದಿದ್ದರು. ಅವರು ಜ.9ರಂದು ಮುಂಬೈನಿಂದ ಲಕ್ನೋಗೆ ವಾಪಸು ತೆರಳಲು ವಿಮಾನದ ಟಿಕೆಟ್‌ ಬುಕ್‌ ಮಾಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಆ ವಿಮಾನ ರದ್ದಾಗಿದೆ. ಇದೇ ವಿಚಾರವನ್ನು ವಿಚಾರಿಸಲೆಂದು ಅವರು ಏರ್‌ಲೈನ್‌ನ ಕಸ್ಟಮರ್‌ ಸರ್ವೀಸ್‌ಗೆ ಕರೆ ಮಾಡಿದ್ದಾರೆ.

ಅವರ ಕರೆ ಕಟ್‌ ಆಗಿ ಕೆಲ ಕ್ಷಣದ ನಂತರ ಇನ್ನೋರ್ವ ವ್ಯಕ್ತಿ ಅಮಿತ್‌ ಅವರಿಗೆ ಕರೆ ಮಾಡಿದ್ದಾರೆ. ತಾವು ಏರ್‌ಲೈನ್‌ ಕಸ್ಟಮರ್‌ ಕೇರ್‌ನವರು ಎಂದು ಪರಿಚಯಿಸಿಕೊಂಡಿರುವ ಅವರು ಅಮಿತ್‌ ಅವರಿಗೆ ಅವರ ಮೊಬೈಲ್‌ನಲ್ಲಿ ಎನಿಡೆಸ್ಕ್‌ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಲು ತಿಳಿಸಿದ್ದಾರೆ. ಅವರು ಡೌನ್‌ಲೋಡ್‌ ಮಾಡಿಕೊಂಡ ನಂತರ ಕೆಲವು ಕೆಲಸಗಳನ್ನು ಮೊಬೈಲ್‌ನಲ್ಲಿ ಮಾಡಿಸಿಕೊಂಡಿದ್ದು, ಅವರ ಖಾತೆಯಿಂದ ಒಂದೂವರೆ ಲಕ್ಷ ರೂ. ದೋಚಿದ್ದಾರೆ.

ಇದನ್ನೂ ಓದಿ: Fake Doctor Arrested | ದೀರ್ಘಕಾಲೀನ ರೋಗಿಗಳೇ ಟಾರ್ಗೆಟ್‌; ಆಯುರ್ವೇದ ಚಿಕಿತ್ಸೆ ಹೆಸರಿನಲ್ಲಿ‌ ಲಕ್ಷ ಲಕ್ಷ ಪಡೆದು ವಂಚನೆ

ಮೋಸ ಹೋದ ನಂತರ ಈ ವಿಚಾರ ಅರ್ಥೈಸಿಕೊಂಡ ಅಮಿತ್‌ ಅವರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಳೆದ ಮೂರು ತಿಂಗಳುಗಳಲ್ಲಿ ಉತ್ತರ ಪ್ರದೇಶದಲ್ಲಿ ಕಸ್ಟಮರ್‌ ಕೇರ್‌ಗೆ ಕರೆ ಮಾಡಿ ಹಣ ವಂಚನೆಗೆ ಒಳಗಾದ ಮೂರನೇ ಪ್ರಕರಣ ಇದಾಗಿದೆ.

Exit mobile version