Site icon Vistara News

Karnataka Election : ಶಾಫಿ ಬೆಳ್ಳಾರೆ ಸ್ಪರ್ಧೆಗೆ ಪ್ರವೀಣ್‌ ನೆಟ್ಟಾರು ಮನೆಯವರ ವಿರೋಧ

Shafi bellare

ಪುತ್ತೂರು : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ಶಾಫಿ ಬೆಳ್ಳಾರೆಯನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಎಂದು ಎಸ್‌ಡಿಪಿಐ ಘೋಷಿಸಿರುವುದಕ್ಕೆ, (Karnataka Election) ಪ್ರವೀಣ್‌ ನೆಟ್ಟಾರು ಪೋಷಕರು ವಿರೋಧಿಸಿದ್ದಾರೆ.

ಶಾಫಿ ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಯಾಗಿದ್ದು, ಜೈಲಿನಲ್ಲಿದ್ದಾನೆ. ಆದರೆ ಆತನನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಎಸ್‌ಡಿಪಿಐ ಘೋಷಿಸಿದೆ. ಯಾವುದೇ ಕಾರಣಕ್ಕೂ ಶಾಫಿ ಬೆಳ್ಳಾರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಪ್ರವೀಣ್‌ ನೆಟ್ಟಾರು ಅವರ ಪೋಷಕರು ಒತ್ತಾಯಿಸಿದ್ದಾರೆ.ಅನ್ಯಾಯವಾಗಿ ನಮ್ಮ ಮಗನನ್ನು ಶಾಫಿ ಹತ್ಯೆ ಮಾಡಿದ್ದಾನೆ. ಅಧಿಕಾರ ಪಡೆದರೆ ಮತ್ತಷ್ಟು ಮಂದಿಯನ್ನು ಕೊಲ್ಲಬಹುದು. ನಮಗೆ ಮನೆಯಿಂದ ಹೊರಗೆ ಹೋಗಲಾರದ ಸ್ಥಿತಿ ಬರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಫಿ ಬೆಳ್ಳಾರೆ ೨೦೨೨ರ ಜುಲೈ ೨೬ರಂದು ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿದ್ದಾನೆ. ಈ ಕೊಲೆಯಲ್ಲಿ ಶಾಮೀಲಾಗಿರುವ ಬಗ್ಗೆ ಮಾಹಿತಿ ಪಡೆದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿತ್ತು. ಈಗ ಶಾಫಿ ಜೈಲಿನಲ್ಲಿದ್ದಾನೆ.

Exit mobile version