Site icon Vistara News

Pavithra Gowda: ನನ್ನನ್ನು ನೋಡಲು ಯಾರೂ ಬರೋದಿಲ್ಲ ಎಂದು ಪವಿತ್ರಾ ಕಣ್ಣೀರು; ʻದಚ್ಚುʼ ನಿರಾಳ!

Pavithra Gowda Cried After In Jail darshan case

ಬೆಂಗಳೂರು: ನಟಿ ಪವಿತ್ರಾ ಗೌಡ (Pavithra Gowda) ಅವರು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಅವರು ಅರೆಸ್ಟ್ ಆಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಆರಂಭದಲ್ಲಿ ಪವಿತ್ರಾ ಗೌಡ ಅವರನ್ನು ನೋಡಲು ಯಾರೂ ಬಂದಿರಲಿಲ್ಲ. ಇದೀಗ ಮಗಳನ್ನ ಕಂಡು ಕೊಂಚ ನಿರಾಳವಾಗಿದ್ದಾರೆ ಎನ್ನಲಾಗಿದೆ. ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ಪವಿತ್ರಾ ಕುಗ್ಗಿ ಹೋಗಿದ್ದರು. ನಿನ್ನೇ ಪವಿತ್ರಾ ಗೌಡ ಭೇಟಿಗೆ ಮಗಳು ಖುಷಿ ತಾಯಿ, ತಂದೆ,ತಮ್ಮ ಆಗಮಿಸಿದ್ದರು. ಇದಕ್ಕೂ ಮುಂಚೆ ʻʻನನ್ನನ್ನು ನೋಡಲು ಯಾರೂ ಬರುವುದಿಲ್ಲ. ನನ್ನನ್ನು ಯಾರೂ ಮಾತನಾಡಿಸುವುದಿಲ್ಲ’ ಎಂದು ಪವಿತ್ರಾ ಬೇಸರ ಮಾಡಿಕೊಂಡಿದ್ದರುʼʼಎನ್ನಲಾಗಿದೆ.ಕೊನೆಗೂ ಪವಿತ್ರಾ ಮಗಳು ಹಾಗೂ ಪವಿತ್ರಾ ತಾಯಿ ಜೈಲಿಗೆ ಬಂದು ಅವರನ್ನು ನೋಡಿ ಹೋಗಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನ ಮಹಿಳಾ ಬ್ಯಾರಕ್‌ನಲ್ಲಿ ಪವಿತ್ರಾ ಸೆರೆವಾಸ ಅನುಭವಿಸುತ್ತಿದ್ದಾರೆ. ಸರಿಯಾಗಿ ಊಟ, ನಿದ್ರೆ ಮಾಡದೆ ಚಡಪಡಿಸುತ್ತಿದ್ದಾರೆ ಎನ್ನಲಾಗಿದೆ. ಮಗಳು ಖುಷಿ ಭೇಟಿ ಬಳಿಕ ರಾತ್ರಿ ಬೇಗನೆ ಪವಿತ್ರಾ ಗೌಡ ನಿದ್ದೆಗೆ ಜಾರಿದ್ದರು ಎನ್ನಲಾಗಿದೆ. ಜೈಲು ಸಿಬ್ಬಂದಿ ನೀಡಿದ್ದ ಮುದ್ದೆ, ಅನ್ನ, ಚಪಾತಿ, ಸಾಂಬರ್, ಮಜ್ಜಿಗೆ ಊಟ ಮಾಡಿ ಮಲಗಿದ್ದರು. ಬೆಳಗ್ಗೆ 6 ಗಂಟೆಯ ಸುಮಾರಿಗೆ ನಿದ್ರೆಯಿಂದ ಪವಿತ್ರಾ ಎದ್ದಿದ್ದರು. ಬ್ಯಾರಕ್‌ನಲ್ಲಿಯೇ ಕೆಲಹೊತ್ತು ವಾಕಿಂಗ್ ಮಾಡಿದ್ದಾರೆ. ಜೈಲು ಸಿಬ್ಬಂದಿ ನೀಡಿದ್ದ ಕಾಫಿ ಕುಡಿದು ರಿಲ್ಯಾಕ್ಸ್‌ ಮೂಡ್‌ಗೆ ಜಾರಿದ್ದಾರೆ. ನಿತ್ಯ ಪೌಷ್ಟಿಕ ಆಹಾರ ತಿನ್ನುತ್ತಿದ್ದ ಪವಿತ್ರಾ ಜೈಲೂಟ ಒಗ್ಗದೆ ಇದ್ದರೂ ತಿನ್ನಲೇ ಬೇಕಾದ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ: Duniya Vijay: ʻಭೀಮʼ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ದುನಿಯಾ ವಿಜಯ್‌; ಸ್ಟಾರ್‌ ಹಿರೋ ಸಿನಿಮಾ ಜತೆ ಕ್ಲ್ಯಾಶ್‌?

ರಿಲ್ಯಾಕ್ಸ್ ಮೂಡ್‌ನಲ್ಲಿ ದರ್ಶನ್

ಇನ್ನು ದರ್ಶನ್‌ ವಿಚಾರಕ್ಕೆ ಬಂದರೆ,ಮಗ ಪತ್ನಿ ಬಂದು ಹೋದ ಬಳಿಕ ಡೆವಿಲ್ ಸ್ವಲ್ಪ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರಂತೆ. ದರ್ಶನ್‌ ರಾತ್ರಿ ರಾತ್ರಿ ಬೇಗನೇ ನಿದ್ರೆಗೆ ಜಾರಿದ್ದಾರೆ. ಬೆಳಗ್ಗೆ 5.30ರ ಸುಮಾರಿಗೆ ನಿದ್ರೆಯಿಂದ ಎದಿದ್ದಾರೆ ದರ್ಶನ್‌. ಜೈಲಿನ ಸಿಬ್ಬಂದಿ ಬಳಿ ಬಿಸಿ ನೀರನ್ನು ಕೇಳಿ ದರ್ಶನ್‌ ಕುಡಿದಿದ್ದರು. ಕೆಲ ಹೊತ್ತು ಬ್ಯಾರಕ್ ನಲ್ಲಿಯೇ ದರ್ಶನ್ ವಾಕಿಂಗ್ ಮಾಡಿದ್ದಾರೆ. ದಿನೇ ದಿನೇ ನಟ ದರ್ಶನ್ ತೂಕ ಕಳೆದುಕೊಳ್ಳುತ್ತಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ನಾಲ್ವರು ಆರೋಪಿಗಳು ತುಮಕೂರು ಜೈಲಿಗೆ ಶಿಫ್ಟ್ ವಿಚಾರದಲ್ಲಿ, ಆರೋಪಿಗಳ ವರ್ಗಾವಣೆಗೆ ಬಂಧಿಖಾನೆ ಇಲಾಖೆ ಎಡಿಜಿಪಿ ಅನುಮೋದನೆ ನೀಡಿದೆ. ಕೋರ್ಟ್ ಆದೇಶದಂತೆ ವಿಚಾರಣಾಧೀನ ಬಂಧಿಗಳ ಶಿಫ್ಟ್‌ಗೆ ಅನುಮೋದನೆ ನೀಡಿದೆ. ರವಿಶಂಕರ್, ಕಾರ್ತೀಕ್‌, ಕೇಶವ್ ಮತ್ತು ನಿಖಿಲ್ ನಾಯಕ್ ಪರಪ್ಪನ ಅಗ್ರಹಾರದಿಂದ ಇಂದು ತುಮಕೂರು ಜೈಲಿಗೆ ಶಿಫ್ಟ್ ಆಗುವ ಸಾಧ್ಯತೆ ಇದೆ. ಪ್ರತ್ಯೇಕ ವಾಹನ ಹಾಗೂ ಶಸ್ತ್ರಸಜ್ಜಿತ ಬೆಂಗವಾಲು ಪಡೆಯೊಂದಿಗೆ ಆರೋಪಿಗಳನ್ನು ಕರೆದೊಯ್ಯಲು ತಯಾರಿ‌ ಆಗುತ್ತಿದೆ ಎಂದು ಮೂಲ ತಿಳಿಸಿದೆ.‌

ರೇಣುಕಾಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ (Actor Darshan) ಮತ್ತು ಆತನ ಸಹಚರ ಪ್ರದೋಷ್‌ ಬಗ್ಗೆ ಮತ್ತೊಂದು ಕುತೂಹಲಕಾರಿ ವಿಚಾರ ಬೆಳಕಿಗೆ ಬಂದಿದೆ. ಇಬ್ಬರ ಬಳಿಯೂ ಪರವಾನಗಿ ಹೊಂದಿದ ಪಿಸ್ತೂಲ್‌ಗಳಿದ್ದು Licenced Pistol), ಲೋಕಸಭೆ ಚುನಾವಣೆ (Lok Sabha Election 2024) ವೇಳೆ ಇಬ್ಬರೂ ಅವುಗಳನ್ನು ಪೊಲೀಸರ ಬಳಿ ಠೇವಣಿ (deposit) ಇರಿಸಿರಲಿಲ್ಲ ಎಂಬುದು ಗೊತ್ತಾಗಿದೆ. ಇದೀಗ ಅವುಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.

ದರ್ಶನ್ ಬಳಿ ಎರಡು ಯುಎಸ್ ಮೇಡ್ ಪಿಸ್ತೂಲ್‌ಗಳು, ಪ್ರದೋಷ್ ಬಳಿ ಒಂದು ಲೈಸೆನ್ಸ್ ಪಿಸ್ತೂಲ್‌ ಇವೆ. ಕಳೆದ ಲೋಕಸಭಾ ಚುನಾವಣಾ ವೇಳೆ ಲೈಸೆನ್ಸ್ ಪಡೆದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಬೇಕಿತ್ತು. ಆದರೆ ಚುನಾವಾಣೆ ವೇಳೆ ಶಸ್ತ್ರಾಸ್ತ್ರ ಠೇವಣಿಯಿಂದ ದರ್ಶನ್ ಮತ್ತು ಪ್ರದೋಷ್ ವಿನಾಯಿತಿ ಪಡೆದಿದ್ದರು.

ಬೆಂಗಳೂರು ನಗರಾದ್ಯಂತ 7830 ಗನ್ ಲೈಸೆನ್ಸ್ ಪರವಾನಗಿದಾರರಿದ್ದಾರೆ. ಈ ಪೈಕಿ ದರ್ಶನ್ ಮತ್ತು ಪ್ರದೋಷ್ ಸೇರಿ 277 ಜನರಿಗೆ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ನೀಡಲಾಗಿತ್ತು. ಉಳಿದ 7553 ಪರವಾನಗಿ ಹೊಂದಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರು ಠೇವಣಿ ಇರಿಸಿಕೊಂಡಿದ್ದರು. ಆದರೆ ನಟ ದರ್ಶನ್ ಮತ್ತು ಪ್ರದೋಷ್ ಪಿಸ್ತೂಲ್ ವಾಪಸ್ ಮಾಡದೇ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ಪಡೆದಿದ್ದಾರೆ.

Exit mobile version