ಬೆಂಗಳೂರು: ನಟಿ ಪವಿತ್ರಾ ಗೌಡ (Pavithra Gowda) ಅವರು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅವರು ಅರೆಸ್ಟ್ ಆಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಆರಂಭದಲ್ಲಿ ಪವಿತ್ರಾ ಗೌಡ ಅವರನ್ನು ನೋಡಲು ಯಾರೂ ಬಂದಿರಲಿಲ್ಲ. ಇದೀಗ ಮಗಳನ್ನ ಕಂಡು ಕೊಂಚ ನಿರಾಳವಾಗಿದ್ದಾರೆ ಎನ್ನಲಾಗಿದೆ. ಹೀಗಿರುವಾಗಲೇ ಪವಿತ್ರಾಗೆ ಮೇಕಪ್ ಮಾಡಲು ಅವಕಾಶ ನೀಡಿದ ಪಿಎಸ್ಐಗೆ ಸಂಕಷ್ಟ ಎದುರಾಗಿದೆ. ವಿತ್ರಾ ಗೌಡ ಮನೆ ಮಹಜರು ಮಾಡಲಾಗಿತ್ತು. ಈ ವೇಳೆ ಪವಿತ್ರಾ ಗೌಡ ಕೂಡ ಇದ್ದರು. ಪವಿತ್ರಾಗೆ ಲಿಪ್‌ಸ್ಟಿಕ್ ಹಚ್ಚಲು ಪಿಎಸ್ಐ ಅವಕಾಶ ಕೊಟ್ಟಿದ್ದರು. ಕರ್ತವ್ಯ ಲೋಪ ಹಿನ್ನಲೆಯಲ್ಲಿ ವಿಜಯನಗರದ ಮಹಿಳಾ ಪಿಎಸ್ಐ ನೇತ್ರಾ ಅವರಿಗೆ ನೋಟಿಸ್ ನೀಡಲಾಗಿದೆ.
ಜೂನ್ 15ರಂದು ಆರೋಪಿ ಪವಿತ್ರಾ ಗೌಡಳನ್ನು ಆರ್.ಆರ್.ನಗರದ ಮನೆಗೆ ಸ್ಥಳ ಮಹಜರಿಗೆ ಕೊಂಡೊಯ್ಯಲಾಗಿತ್ತು. ಈ ವೇಳೆ ಪವಿತ್ರಾ ಗೌಡ ಮನೆಯಲ್ಲಿ ವಾಶ್‌ರೂಮ್‌ಗೆಂದು ಹೋದಾಗ ಲಿಪ್ ಸ್ಟಿಕ್ ಹಚ್ಚಿಕೊಂಡು, ಮೇಕಪ್ ಮಾಡಿಕೊಂಡು ಹೊರ ಬಂದಿದ್ದರು. ಪವಿತ್ರಾಗೌಡಗೆ ಲಿಪ್ ಸ್ಟಿಕ್ ನೀಡಿದ್ದ ವಿಜಯನಗರ ಠಾಣೆ ಮಹಿಳಾ ಪಿಎಸ್ ಐಗೆ ಇದೀಗ ಕರ್ತವ್ಯ ಲೋಪ ಆರೋಪದಲ್ಲಿ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್, ನೋಟಿಸ್ ನೀಡಿದ್ದಾರೆ.
ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ಪವಿತ್ರಾ ಕುಗ್ಗಿ ಹೋಗಿದ್ದರು. ನಿನ್ನೇ ಪವಿತ್ರಾ ಗೌಡ ಭೇಟಿಗೆ ಮಗಳು ಖುಷಿ ತಾಯಿ, ತಂದೆ,ತಮ್ಮ ಆಗಮಿಸಿದ್ದರು. ಇದಕ್ಕೂ ಮುಂಚೆ ʻʻನನ್ನನ್ನು ನೋಡಲು ಯಾರೂ ಬರುವುದಿಲ್ಲ. ನನ್ನನ್ನು ಯಾರೂ ಮಾತನಾಡಿಸುವುದಿಲ್ಲ’ ಎಂದು ಪವಿತ್ರಾ ಬೇಸರ ಮಾಡಿಕೊಂಡಿದ್ದರುʼʼಎನ್ನಲಾಗಿದೆ.ಕೊನೆಗೂ ಪವಿತ್ರಾ ಮಗಳು ಹಾಗೂ ಪವಿತ್ರಾ ತಾಯಿ ಜೈಲಿಗೆ ಬಂದು ಅವರನ್ನು ನೋಡಿ ಹೋಗಿದ್ದಾರೆ.
ಇದನ್ನೂ ಓದಿ: Pavithra Gowda: ನನ್ನನ್ನು ನೋಡಲು ಯಾರೂ ಬರೋದಿಲ್ಲ ಎಂದು ಪವಿತ್ರಾ ಕಣ್ಣೀರು; ʻದಚ್ಚುʼ ನಿರಾಳ!
ಪರಪ್ಪನ ಅಗ್ರಹಾರ ಜೈಲಿನ ಮಹಿಳಾ ಬ್ಯಾರಕ್‌ನಲ್ಲಿ ಪವಿತ್ರಾ ಸೆರೆವಾಸ ಅನುಭವಿಸುತ್ತಿದ್ದಾರೆ. ಸರಿಯಾಗಿ ಊಟ, ನಿದ್ರೆ ಮಾಡದೆ ಚಡಪಡಿಸುತ್ತಿದ್ದಾರೆ ಎನ್ನಲಾಗಿದೆ. ಮಗಳು ಖುಷಿ ಭೇಟಿ ಬಳಿಕ ರಾತ್ರಿ ಬೇಗನೆ ಪವಿತ್ರಾ ಗೌಡ ನಿದ್ದೆಗೆ ಜಾರಿದ್ದರು ಎನ್ನಲಾಗಿದೆ. ಜೈಲು ಸಿಬ್ಬಂದಿ ನೀಡಿದ್ದ ಮುದ್ದೆ, ಅನ್ನ, ಚಪಾತಿ, ಸಾಂಬರ್, ಮಜ್ಜಿಗೆ ಊಟ ಮಾಡಿ ಮಲಗಿದ್ದರು. ಬೆಳಗ್ಗೆ 6 ಗಂಟೆಯ ಸುಮಾರಿಗೆ ನಿದ್ರೆಯಿಂದ ಪವಿತ್ರಾ ಎದ್ದಿದ್ದರು. ಬ್ಯಾರಕ್‌ನಲ್ಲಿಯೇ ಕೆಲಹೊತ್ತು ವಾಕಿಂಗ್ ಮಾಡಿದ್ದಾರೆ. ಜೈಲು ಸಿಬ್ಬಂದಿ ನೀಡಿದ್ದ ಕಾಫಿ ಕುಡಿದು ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ. ನಿತ್ಯ ಪೌಷ್ಟಿಕ ಆಹಾರ ತಿನ್ನುತ್ತಿದ್ದ ಪವಿತ್ರಾ ಜೈಲೂಟ ಒಗ್ಗದೆ ಇದ್ದರೂ ತಿನ್ನಲೇ ಬೇಕಾದ ಪರಿಸ್ಥಿತಿ ಎದುರಾಗಿದೆ.