Site icon Vistara News

Actor Darshan: ಪವಿತ್ರಾಗೌಡ ಮುನಿಸು ಶಮನ‌‌ ಮಾಡೋದೇ ಚಾಲೆಂಜ್‌ ಆಗಿತ್ತು ದರ್ಶನ್‌ಗೆ!

Pavithra Gowda was a challenge for Darshan

ಬೆಂಗಳೂರು: ದರ್ಶನ್‌ (Actor Darshan) ಹಾಗೂ ಪವಿತ್ರಾ (Pavithra Gowda) ನ್ಯಾಯಾಂಗ ಬಂಧನಲ್ಲಿದ್ದಾರೆ. ಈ ಕೊಲೆ ಪ್ರಕರಣಕ್ಕೂ ಮುಂಚೆ ದರ್ಶನ್‌ಗೆ ಪವಿತ್ರಾ ಗೌಡಳ ಮುನಿಸು ಹಲವು ಬಾರಿ ಆಪತ್ತು ತಂದು ಒಡ್ಡಿದೆ. ಪವಿತ್ರಾಗೌಡ ಮುನಿಸು ಶಮನ‌‌ ಮಾಡೋದೇ ಒಂದು ಚಾಲೇಂಜ್‌ ಆಗಿತ್ತು ದರ್ಶನ್‌ಗೆ. ಒಂದೊಂದು ಬಾರಿ ಕೋಪಿಸಿಕೊಂಡಾಗಲೂ ಒಂದೊಂದು ರೀತಿಯ ಪರಿಹಾರ ಕೊಡಬೇಕಿತ್ತು. ಲಕ್ಷ ,ಕೋಟಿ ಬೆಲೆ ಬಾಳುವ ವಸ್ತುಗಳೇ ಪವಿತ್ರಗೌಡ ಕೋಪ ಕಡಿಮೆಯಾಗಲು ಬೇಕಿತ್ತು.

ಕೆಲವೇ ದಿನಗಳ ಹಿಂದೆ ಒಂದು ಕಾರ್ ಕೂಡ ದರ್ಶನ್‌ ಅವರು ಪವಿತ್ರಾಗೆ ಗಿಫ್ಟ್‌ ಕೊಟ್ಟಿದ್ದರು ಎನ್ನಲಾಗಿದೆ. ಅನಂತರ‌ ಮತ್ತೊಂದು ಕಾರ್ ಗಿಫ್ಟ್ ಕೂಡ ಪವಿತ್ರಾ ಕೇಳಿದ್ದರಂತೆ. ದರ್ಶನ್ ದುಬೈ ಟ್ರಿಪ್ ಮುಗಿಸಿ ಬರುತ್ತಿದ್ದಂತೆ ಕೋಟಿ ಬೆಲೆಯ ಕಾರಿಗೆ ತೀವ್ರವಾದ ಬೇಡಿಕೆ ಇಟ್ಟಿದ್ದರು. ಕಾರು ಕೊಟ್ಟ ಬಳಿಕ ಇದೀಗ ಒಂದು ಪ್ರಾಣವೇ ಗಿಫ್ಟ್ ಕೊಟ್ಟಂತಾಗಿದೆ.

ದರ್ಶನ್‌ ಪವಿತ್ರಾ ಮುನಿಸು ಶಮನಕ್ಕೆ‌ ರೇಣುಕಾಸ್ವಾಮಿ ಕಿಡ್ನಾಪ್ ಅಸ್ತ್ರವಾಗಿತ್ತು ಎನ್ನಲಾಗಿದೆ. ಆರಂಭದಲ್ಲಿ‌ ಕಾರು ಕೊಡಿಸೋದಕ್ಕೆ ನಟ‌ ದರ್ಶನ್ ನಿರಾಕರಿಸಿದ್ದರು ಎಂಬ ಮಾಹಿಯೂ ಇದೆ. ಅಷ್ಟು ದೊಡ್ಡ ಮಟ್ಟದ ಹಣ ಸದ್ಯ ಇಲ್ಲವೆಂಬ ಕಾರಣ‌ ನೀಡಿ ಕಾರು ಕೊಡಿಸಲು ಬ್ರೇಕ್ ಕೂಡ ಹಾಕಕಿದ್ದರು. ಇದರಿಂದಾಗಿ ಕೋಪಗೊಂಡ ಪವಿತ್ರಾ ಬಹುತೇಕ ಒಂದು ತಿಂಗಳ ಕಾಲ ದರ್ಶನ್ ಬಳಿ ಮಾತು ಬಿಟ್ಟಿದ್ದಳು.

ಈ ಸಮಯದಲ್ಲಿಯೇ ರೇಣುಕಾಸ್ವಾಮಿ‌‌ ಮೆಸೇಜ್ ಅತಿರೇಕವಾಗಿತ್ತು. ಮಾತು ಬಿಟ್ಟಿದ್ದ ಕಾರಣ ದರ್ಶನ್‌‌ಗೆ ವಿಷಯ ತಿಳಿಸದ ಪವಿತ್ರಾ ಗೌಡ, ಈ ವಿಚಾರವನ್ನು ಪವನ್ ಬಳಿ ತಿಳಿಸಿದ್ದಳು. ಆದರೆ ಪವನ್‌ ಈ ವಿಚಾರವನ್ನು ದರ್ಶನ್‌ ಬಳಿ ನೇರವಾಗಿ ಹೇಳಿದ್ದ. ಆ ನಂತರ ನಡೆದದ್ದೇ ರೇಣುಕಾಸ್ವಾಮಿ ಕಿಡ್ನಾಪ್ ಮತ್ತು ಕೊಲೆ‌ ಪ್ರಕರಣ.

ಇದನ್ನೂ ಓದಿ: Actor Darshan: ದರ್ಶನ್‌ಗಾಗಿ ವಿಶೇಷ ಪೂಜೆ ಮಾಡಿಸಿದ್ರಾ ವಿಜಯಲಕ್ಷ್ಮಿ? ಅಸಲಿ ಕಥೆ ಬೇರೆಯೇ ಇದೆ!

ಇದನ್ನೂ ಓದಿ: Dolly Dhananjay: ಐತಿಹಾಸಿಕ ‘ಹಲಗಲಿ’ ಸಿನಿಮಾದಲ್ಲಿ ‘ಡಾಲಿ’ ಧನಂಜಯ ಹೀರೊ!

ದರ್ಶನ್ ಬಳಸುತ್ತಿದ್ದ ಸಿಮ್ ಸೀಕ್ರೆಟ್‌ ರಿವೀಲ್

ಪೊಲೀಸ್‌ ತನಿಖೆ ವೇಳೆ ಆರೋಪಿಗಳು ಬೇರೊಬ್ಬರ ಸಿಮ್ ಕಾರ್ಡ್ ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ. ಮಾಹಿತಿ ಸಂಗ್ರಹಿಸಿ ಪರಿಶೀಲನೆ ವೇಳೆ ಸಿಮ್ ಕಾರ್ಡ್ ರಹಸ್ಯ ಬಯಲಾಗಿದೆ. ಹೇಮಂತ್ ಹೆಸರಿನಲ್ಲಿರುವ ಸಿಮ್‌ವನ್ನು ದರ್ಶನ್‌ ಬಳಸುತ್ತಿದ್ದರೆ, ಪವಿತ್ರಗೌಡ ಅವರು ಮನೋಜ್ ಹೆಸರಿನಲ್ಲಿದ್ದ ಸಿಮ್ ಬಳಸುತ್ತಿದ್ದರು. ಆರೋಪಿ ನಂದೀಶ್ ಅವರು ಹೇಮಂತ್ ಹೆಸರಿನಲ್ಲಿ, ಆರೋಪಿ ಪ್ರದ್ಯೂಷ್ ಖಾಸಗಿ ಕಂಪನಿ ಸೀನಿಯರ್ ಮ್ಯಾನೇಜರ್ ಹೆಸರಿನಲ್ಲಿ, ಆರೋಪಿ ಕಾರ್ತಿಕ್ ಅವರು ವೇಲು ಎಂಬಾತನ ಹೆಸರಲ್ಲಿ, ಕೇಶವಮೂರ್ತಿ ಅರು ಪ್ರಜ್ಞಾ ಎಂ ಹೆಸರಲ್ಲಿ, ನಿಖಿಲ್ ನಾಯಕ್ ಅವರು ಗೀತಾ ಹೆಸರಲ್ಲಿ ಸಿಮ್‌ ಬಳಕೆ ಮಾಡುತ್ತಿರುವುದಾಗಿ ತನಿಖೆ ವೇಳೆ ತಿಳಿದು ಬಂದಿದೆ.

Exit mobile version