Site icon Vistara News

Physical Abuse: ಮಧ್ಯಪ್ರದೇಶದಲ್ಲೂ ಬುಲ್ಡೋಜರ್‌ ಅಸ್ತ್ರ; ವಿದ್ಯಾರ್ಥಿನಿ ಅತ್ಯಾಚಾರ ಆರೋಪಿಯ ಮನೆ ನೆಲಸಮ

physical abuse

ಮಧ್ಯಪ್ರದೇಶ: ವಾಯ್ಸ್ ಮಾಡ್ಯುಲೇಷನ್ ಆ್ಯಪ್ (voice modulation app) ಬಳಸಿ ಮಧ್ಯಪ್ರದೇಶದ (madhyapradesh) ಭೋಪಾಲ್ ನ (bhopal) ಸಿಧಿಯಲ್ಲಿ ನಾಲ್ವರು ಅಪ್ರಾಪ್ತ ಬಾಲಕಿಯರು ಸೇರಿದಂತೆ ಏಳು ಕಾಲೇಜು ವಿದ್ಯಾರ್ಥಿನಿಯರ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ (Physical Abuse) ಸಂಬಂಧಿಸಿ ವಿಶೇಷ ತನಿಖಾ ತಂಡ (Special Investigation Team- SIT)) ರಚನೆಗೆ ಮುಖ್ಯಮಂತ್ರಿ (Chief Minister) ಮೋಹನ್ ಯಾದವ್ (Mohan Yadav ) ಆದೇಶಿಸಿದ್ದಾರೆ.

ಈ ಬಳಿಕ ಸಿಧಿ ಜಿಲ್ಲಾಡಳಿತವು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳಲ್ಲಿ ಒಬ್ಬನಾದ ಬ್ರಿಜೇಶ್ ಪ್ರಜಾಪತಿಯ ಮನೆಯನ್ನು ನೆಲಸಮಗೊಳಿಸಿದೆ. ರೇವಾ ವ್ಯಾಪ್ತಿಯ ಐಜಿ ಮಹೇಂದ್ರ ಸಿಕರ್ವಾರ್ ಅವರು ಎಲ್ಲಾ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ಘೋಷಿಸಿದರು. ತನಿಖೆಗಾಗಿ ಒಂಬತ್ತು ಸದಸ್ಯರ ಎಸ್‌ಐಟಿಯನ್ನು ರಚಿಸಲಾಗಿದೆ. ಸಿಧಿಯ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (SDOP) ರೋಶ್ನಿ ಸಿಂಗ್ ಠಾಕೂರ್ ಅವರು ಇದರ ಮುಖ್ಯಸ್ಥರಾಗಿದ್ದಾರೆ ಎಂದು ತಿಳಿಸಿದರು.

ಪ್ರಮುಖ ಆರೋಪಿಗಳು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಯೋಜನೆ ರೂಪಿಸಿದ್ದು, ವಿದ್ಯಾರ್ಥಿ ವೇತನ ನೀಡುವ ನೆಪದಲ್ಲಿ ಈ ದುಷ್ಕೃತ್ಯ ಎಸಗುತ್ತಿದ್ದರು ಎಂದು ಮಹೇಂದ್ರ ಸಿಕರ್ವಾರ್ ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯನ್ನು ಬ್ರಿಜೇಶ್ ಪ್ರಜಾಪತಿ (30) ಎಂದು ಗುರುತಿಸಲಾಗಿದೆ. ಆತನ ಇಬ್ಬರು ಸಹಚರರನ್ನು ಸಿಧಿ ನಿವಾಸಿಗಳಾದ ರಾಹುಲ್ ಪ್ರಜಾಪತಿ ಮತ್ತು ಸಂದೀಪ್ ಪ್ರಜಾಪತಿ ಎಂದು ಗುರುತಿಸಲಾಗಿದೆ.


ಘಟನೆಯ ಹಿನ್ನೆಲೆ ಏನು?

ಘಟನೆಯ ಕುರಿತು ವಿವರಿಸಿದ ಐಜಿ ಮಹೇಂದ್ರ ಸಿಕರ್ವಾರ್, ಬ್ರಿಜೇಶ್ ಪ್ರಜಾಪತಿ ಮೂರು ವರ್ಷಗಳ ಹಿಂದೆ ಜಬಲ್‌ಪುರದ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಆತನ ಕೈ ಮತ್ತು ಕಾಲುಗಳು ಸುಟ್ಟುಹೋಗಿವೆ ಎಂದು ಪ್ರಜಾಪತಿ ತನಿಖೆ ವೇಳೆ ಹೇಳಿಕೊಂಡಿದ್ದಾನೆ. ಸ್ವಲ್ಪ ಸಮಯದ ಅನಂತರ ಆತ ಗುಜರಾತ್‌ಗೆ ಹೋಗಿದ್ದು, ಅಲ್ಲಿಂದ ಹಿಂದಿರುಗಿದ ಬಳಿಕ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಎಂದು ತಿಳಿಸಿದರು.

ಮಹಿಳಾ ಕಾಲೇಜು ಉದ್ಯೋಗಿಯ ಧ್ವನಿಯನ್ನು ಅನುಕರಿಸಲು ವಾಯ್ಸ್ ಮಾಡ್ಯುಲೇಶನ್ ಅಪ್ಲಿಕೇಶನ್ ಅನ್ನು ಬಳಸಿರಿವ ಪ್ರಜಾಪತಿ ಉದ್ದೇಶಿತ ಮಹಿಳೆಯರನ್ನು ನಿರ್ಜನ ಪ್ರದೇಶಕ್ಕೆ ಕರೆದು ಹೇಯ ಕೃತ್ಯ ಎಸಗುತ್ತಿದ್ದ. ಪೊಲೀಸರಿಂದ ತಪ್ಪಿಸಿಕೊಳ್ಳಲು ಸಂತ್ರಸ್ತರ ಮೊಬೈಲ್ ಫೋನ್ ಗಳನ್ನು ಕಸಿದುಕೊಳ್ಳುತ್ತಿದ್ದರು ಎಂದು ಐಜಿ ತಿಳಿಸಿದರು.

ಇದನ್ನೂ ಓದಿ: Swati Maliwal case: ಕೋರ್ಟ್‌ ವಿಚಾರಣೆ ವೇಳೆ ಕಣ್ಣೀರಿಟ್ಟ ಸ್ವಾತಿ ಮಲಿವಾಲ್‌!

ಪ್ರಜಾಪತಿ ಕತ್ತಲೆಯ ಸಮಯದಲ್ಲಿ ಅಪರಾಧ ಎಸಗುತ್ತಿದ್ದ. ಆತ ಗುರಿಯಾಗಿಸಿದ ಮಹಿಳೆಯನ್ನು ಬೈಕ್‌ನಲ್ಲಿ ಎತ್ತಿಕೊಂಡು ಹೋಗುತ್ತಿದ್ದರು ಮತ್ತು ತಮ್ಮ ಗುರುತನ್ನು ಮರೆಮಾಚಲು ಹೆಲ್ಮೆಟ್ ಮತ್ತು ಕೈಗವಸುಗಳನ್ನು ಧರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆತನ ಸಹಚರರಾದ ರಾಹುಲ್ ಮತ್ತು ಸಂದೀಪ್ ಅವರ ಸಹಾಯದಿಂದ ಸಂತ್ರಸ್ತರ ಮೊಬೈಲ್ ಮಾರಾಟ ಮಾಡುತ್ತಿದ್ದ. ಬಂಧಿತ ಆರೋಪಿಯಿಂದ ಒಟ್ಟು 16 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version