ಕನೌಜ್: 17 ವರ್ಷದ ಅತ್ಯಾಚಾರ ಸಂತ್ರಸ್ತೆಯ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸ್ ಇನ್ಸ್ಪೆಕ್ಟರ್ ಆಕೆಯ ತಾಯಿಯನ್ನು ರೇಪ್ ಮಾಡಿ, ಅಮಾನತು ಆಗುವ ಜತೆ ಬಂಧಿತನೂ ಆಗಿದ್ದಾನೆ. ಕನ್ನೌಜ್ ಜಿಲ್ಲೆಯ ಸದರ್ ಪ್ರದೇಶದಲ್ಲಿರುವ ಆತನ ಅಧಿಕೃತ ವಸತಿ ಕ್ವಾರ್ಟರ್ಸ್ನಲ್ಲಿಯೇ ಮಹಿಳೆ ಮೇಲೆ ರೇಪ್ ಮಾಡಿದ್ದಾನೆ.
ಅಂದಹಾಗೇ, ಆರೋಪಿ ಹೆಸರು ಅನೂಪ್ ಮೌರ್ಯ. ಮಹಿಳೆಯ 17ವರ್ಷದ ಮಗಳ ಮೇಲೆ ನಡೆದ ಅತ್ಯಾಚಾರದ ಕೇಸ್ನ್ನು ಅನೂಪ್ ಮೌರ್ಯ ಮತ್ತವರ ಟೀಂ ನಡೆಸುತ್ತಿತ್ತು. ಅದಕ್ಕೆ ಸಂಬಂಧಪಟ್ಟಂತೆ ಒಂದಷ್ಟು ದಾಖಲೆಗಳಿಗೆ ಸಹಿ ಹಾಕಲು ಆ ಮಹಿಳೆಯನ್ನು ಪೊಲೀಸ್ ಅಧಿಕಾರಿ ಕರೆದಿದ್ದರು. ತಮ್ಮ ಮನೆಯ ಸಮೀಪ ಇರುವ ಪೆಟ್ರೋಲ್ ಪಂಪ್ ಬಳಿ ಬರುವಂತೆ ಹೇಳಿದ್ದರು. ಅಂತೆಯೇ ಆಗಸ್ಟ್ 28ರಂದು ಮಹಿಳೆ ಅಲ್ಲಿಗೆ ಹೋಗಿದ್ದಾರೆ. ಆದರೆ ಆ ಪೊಲೀಸ್ ಅಧಿಕಾರಿ ಅಲ್ಲಿ ಯಾವುದೇ ಕಾಗದಪತ್ರಕ್ಕೆ ಸಹಿ ಹಾಕಿಸಿಕೊಳ್ಳದೆ, ತನ್ನ ಹಿಂದೆಯೇ ಮನೆಗೆ ಬರುವಂತೆ ಕರೆದಿದ್ದಾನೆ. ಅವನು ಪೊಲೀಸ್ ಅಲ್ಲವಾ? ಅಪಾಯವೇನು? ಎಂಬ ಭಾವದಲ್ಲಿ ಹಿಂದೆ ಹೋದ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಎಲ್ಲ ವಿಚಾರಗಳನ್ನೂ ಮಹಿಳೆ ದೂರಿನಲ್ಲಿ ವಿವರಿಸಿದ್ದಾಳೆ.
ಈ ಬಗ್ಗೆ ಕನೌಜ್ ಎಸ್ಪಿ ಕನ್ವರ್ ಅನುಪಮ್ ಸಿಂಗ್ ಮಾಹಿತಿ ನೀಡಿದ್ದು, ‘ಮಹಿಳೆ ನೀಡಿದ ದೂರು ಸತ್ಯ ಎಂಬುದು ಪ್ರಾಥಮಿಕ ತನಿಖೆಯಲ್ಲೇ ದೃಢಪಟ್ಟಿದೆ. ಸದ್ಯ ಅಧಿಕಾರಿಯನ್ನು ಬಂಧಿಸಿ ಜೈಲಿಗೆ ಹಾಕಿದ್ದೇವೆ. ನಂತರ ಕೋರ್ಟ್ಗೆ ಹಾಜರುಪಡಿಸಲಾಗುವುದು‘ ಎಂದು ತಿಳಿಸಿದ್ದಾರೆ. ಹಾಗೇ, ಅನೂಪ್ ಮೌರ್ಯ ವಿರುದ್ಧ ತನಿಖೆಯ ನೇತೃತ್ವವನ್ನು ಸಾದರ್ ಸರ್ಕಲ್ ಇನ್ಸ್ಪೆಕ್ಟರ್ ಪ್ರತಾಪ್ ಸಿಂಗ್ ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ: Chinese Nationals | ಉತ್ತರ ಪ್ರದೇಶದಲ್ಲಿ ಚೀನಾದ 15 ನಾಗರಿಕರ ಬಂಧನ, ಕಾರಣ ಏನು?