ಬೆಂಗಳೂರು: ಹಾಸನ ಸಂಸದ (Hassan MP), ಜೆಡಿಎಸ್ ಮುಖಂಡ (JDS Leader), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್ ಪ್ರಕರಣ (Hassan Pen Drive Case) ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ನಟಿ ಪೂನಂ ಕೌರ್ (Poonam Kaur) ,ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ನಿರೂಪಕಿ, ನಟಿ ರಶ್ಮಿ ಗೌತಮ್ ಇನ್‌ಸ್ಟಾ ಸ್ಟೋರಿ ವೈರಲ್ ಆಗಿದೆ.
ರಶ್ಮಿ ಗೌತಮ್ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ, ಖ್ಯಾತ ಲೇಖಕಿ ರಾಚೆಲ್ ಮೋರನ್ ಅವರ ಸಾಲುಗಳನ್ನ ಹಂಚಿಕೊಂಡಿದ್ದಾರೆ. ʻʻಮಹಿಳೆ ಬಡತನದಲ್ಲಿರುವಾಗ ಮತ್ತು ಹಸಿವಿನಿಂದ ಬಳಲುತ್ತಿರುವಾಗ ನಾವು ಮನುಷ್ಯರಾಗಿ ಅವರ ಬಾಯಿಗೆ ಆಹಾರ ಇಡಬೇಕೇ ಹೊರತು ಖಾಸಗಿ ಅಂಗವಲ್ಲʼʼ ಎಂಬ ಸಾಲುಗಳು ಅವು. ರಶ್ಮಿ ಗೌತಮ್ ಹಂಚಿಕೊಂಡ ಈ ವಿಚಾರಕ್ಕೂ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್‌ಗೂ ಏನಾದರೂ ಸಂಬಂಧ ಇದೆಯಾ ಅನ್ನುವ ಅನುಮಾನ ಅನೇಕರನ್ನ ಕಾಡುತ್ತಿದೆ.
ಇದೀಗ ಕೆಲವರು ಈ ಬಗ್ಗೆ ರಶ್ನಿ ಗೌತಮ್ ಅವರು ಪ್ರಜ್ವಲ್ ರೇವಣ್ಣ ಅವರನ್ನು ಗುರಿಯಾಗಿಸಿಕೊಂಡೇ ಪೋಸ್ಟ್ ಹಂಚಿಕೊಂಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇರುವುದನ್ನು ನೇರವಾಗಿ ಹೇಳಿ ಹೆಸರನ್ನು ಉಲ್ಲೇಖಿಸಿಬೇಕಿತ್ತು ಎಂದು ಕಮೆಂಟ್ ಮಾಡಿದ್ದಾರೆ. ರಶ್ಮಿ ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ತೆಲುಗಿಗೆ ಡಬ್ ಆದ ನಂತರ, ರಮ್ಯಾ ಮಾಡಿದ್ದ ಪಾತ್ರವನ್ನ ನಿರ್ವಹಿಸಿದ್ದರು.
ಇದನ್ನೂ ಓದಿ: Prajwal Revanna: ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ; ಮೋದಿ ವಿರುದ್ಧ ನಟಿಯ ಆಕ್ರೋಶ!
ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಈಗಾಗಲೇ 24 ಗಂಟೆಯೊಳಗೆ ವಿಚಾರಣೆಗೆ ಹಾಜಾರಾಗುವಂತೆ ಎಸ್‌ಐಟಿ ನೋಟಿಸ್ ನೀಡಿದೆ. ಒಂದು ವೇಳೆ ಗಡುವಿನೊಳಗೆ ವಿಚಾರಣೆಗೆ ಹಾಜರಾಗದೇ ಇದ್ದರೆ ಬಂಧಿಸುವ ಅಧಿಕಾರ ಎಸ್‌ಐಟಿಗೆ ಇದೆ. ಇಲ್ಲವೇ ಇನ್ನೂ ಎರಡು ಬಾರಿ ನೋಟಿಸ್ ನೀಡಿ ಕಾಯಬಹುದಾಗಿದೆ. ಈ ಎಲ್ಲವೂ ತನಿಖಾಧಿಕಾರಿಯ ವಿವೇಚನೆಗೆ ಬಿಟ್ಟ ವಿಷಯವಾಗಿದೆ.
ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು (ಬುಧವಾರ – ಮೇ 1) ವಿಚಾರಣೆಗೆ ಹಾಜರಾಗಬೇಕು. ಕಾರಣ, ಸಿಆರ್‌ಪಿಸಿ 41ಎ ಅಡಿಯಲ್ಲಿ ಎಸ್‌ಐಟಿ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ 24 ಗಂಟೆ ಒಳಗೆ ವಿಚಾರಣೆಗೆ ಹಾಜರಾಗದೆ ಹೋದಲ್ಲಿ ಮತ್ತೊಂದು ನೋಟಿಸ್ ಅನ್ನು ಎಸ್‌ಐಟಿ ನೀಡಲಿದೆ. ಇಲ್ಲವೇ ನೋಟಿಸ್ ನೀಡದೆಯೂ ಬಂಧಿಸುವ ಅಧಿಕಾರವಿದೆ.
ಸದ್ಯ ಆರೋಪಿಗಳು ವಿಚಾರಣೆಗೆ ಬರುವ ನಿರೀಕ್ಷೆಯಲ್ಲಿ ಎಸ್ಐಟಿ ಇದೆ. ಇನ್ನು ಪ್ರಜ್ವಲ್ ರೇವಣ್ಣ ವಿದೇಶದಲ್ಲಿರುವ ಕಾರಣ ನೋಟಿಸ್‌ನಲ್ಲಿ ಸಮಯ ನಿಗದಿ ಮಾಡಲಾಗಿಲ್ಲ.