ಧಾರವಾಡ: ಲವ್ ಜಿಹಾದ್ (love jihad) ನಡೆದಿದೆ ಎಂದು ಆರೋಪಿಸಿ ಧಾರವಾಡ (Dharwad) ಉಪನಗರ ಠಾಣೆ ಎದುರು ಶ್ರೀರಾಮ ಸೇನೆ (sriram sene) ಸಂಘಟನೆಯ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ (Protest) ನಡೆಸಿದರು. ಜುಲೈ 11 ರಂದು ಆಂಜನೇಯ ನಗರದ ವಿವಾಹಿತ ಮಹಿಳೆಯು ಬೆಳಗಾವಿ ಜಿಲ್ಲೆಯ ರಾಮದುರ್ಗದವನಾಗಿರುವ ಮುನ್ನಾ ಎಂಬಾತನ ಜೊತೆ ಹೋಗಿದ್ದು ಇದನ್ನು ಲವ್ ಜಿಹಾದ್ ಎನ್ನಲಾಗಿದೆ.
ವಿವಾಹಿತ ಮಹಿಳೆ ತಂಗೆಮ್ಮಾ (20) ಬೆಳಗಾವಿ ಜಿಲ್ಲೆಯ ರಾಮದುರ್ಗದವನಾಗಿರುವ ಮುನ್ನಾ ಎಂಬಾತನೊಂದಿಗೆ ಹೋಗಿದ್ದಾಳೆ. ಮೂರು ತಿಂಗಳ ಹಿಂದೆ ಧಾರವಾಡ ಆಂಜನೇಯನಗರದ ತಂಗೆಮ್ಮ ತವರು ಮನೆಯ ಎದುರು ಮನೆಗೆ ಮುನ್ನಾ ಬಾಡಿಗೆಗೆ ಬಂದಿದ್ದ ಎನ್ನಲಾಗಿದೆ.
ಈ ವೇಳೆ ತಂಗೆಮ್ಮಳ ಜೊತೆ ಪರಿಚಯ ಮಾಡಿಕೊಂಡಿದ್ದ ಮುನ್ನಾ ತಂಗೆಮ್ಮಳ ಜೊತೆ ಒಡಿಹೋಗಿದ್ದಾನೆ. ಆತನಿಗೆ ಈಗಾಗಲೇ ಮದುವೆ ಆಗಿದೆ. ಆದರೂ ತಂಗೆಮ್ಮ ಗಂಡ, ಮುನ್ನಾ ಪತ್ನಿ ಮತ್ತು ಮಕ್ಕಳನ್ನ ಬಿಟ್ಟು ಓಡಿ ಹೋಗಿದ್ದಾರೆ.
ಸದ್ಯ ಉಪನಗರ ಪೊಲೀಸರು ತಂಗೆಮ್ಮ ಕಾಣೆಯಾದ ದೂರನ್ನು ದಾಖಲಿಸಿಕೊಂಡಿದ್ದಾರೆ. ಇದು ಅಪಹರಣವಲ್ಲ. ಲವ್ ಜಿಹಾದ್ ಎಂದು ಆರೋಪಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ತಂಗೆಮ್ಮ ಪೋಷಕರನ್ನು ಕರೆ ತಂದು ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಮುನ್ನಾ ಮೇಲೆ ಕಿಡ್ನಾಪ್ ಕೇಸ್ ಹಾಕಬೇಕು, ಒಂದು ವಾರದಲ್ಲಿ ತಂಗೆಮ್ಮ ಹಾಗೂ ಮುನ್ನಾರನ್ನು ಕರೆ ತರುವಂತೆ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ 44 ಸಾವಿರ ಹಿಂದೂ ಯುವತಿಯರು ಕಾಣೆಯಾಗಿದ್ದಾರೆ. ಆದರೆ ಪೊಲೀಸರು ಕೆಲವು ಕಾಣೆಯಾದ ಪ್ರಕರಣ ಮಾತ್ರ ತೆಗೆದುಕೊಂಡಿದ್ದಾರೆ ಎಂದು ಶ್ರೀರಾಮ ಸೇನೆ ಆರೋಪಿಸಿದೆ.
ಇದನ್ನೂ ಓದಿ: Assault Case : ನಡುರಸ್ತೆಯಲ್ಲೇ ಜಾಡಿಸಿ ಒದ್ದು, ಥೂ ಎಂದು ಉಗಿದಾಡಿಕೊಂಡ ಖಾಸಗಿ ಬಸ್‌ಗಳ ಸಿಬ್ಬಂದಿ
ಕಾಣೆಯಾಗಿದ್ದ ನವ ವಿವಾಹಿತೆ ಬಾವಿಯಲ್ಲಿ ಜೀವಂತವಾಗಿ ಪತ್ತೆ!
ಕಾಣೆಯಾಗಿದ್ದ ಮಹಿಳೆ ಬಾವಿಯಲ್ಲಿ ಜೀವಂತವಾಗಿ ಪತ್ತೆಯಾಗಿರುವ ವಿಚಿತ್ರ ಘಟನೆ ಗದಗ ಜಿಲ್ಲೆ ತೋಟಗಂಟಿ ಗ್ರಾಮದಲ್ಲಿ ನಡೆದಿದೆ. ಮೂರು ದಿನ ಬಾವಿಯಲ್ಲಿದ್ದ ಮಹಿಳೆ ಬದುಕಿದ್ದೇ ಪವಾಡ. ಅಸ್ವಸ್ಥಳಾಗಿದ್ದ ಮಹಿಳೆಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಮಹಿಳೆ ಬಾವಿಗೆ ಬಿದ್ದಿದ್ದು ಹೇಗೆ ಎಂಬ ಮಾಹಿತಿ ಕೇಳಿ ಗ್ರಾಮದ ಜನರು ಶಾಕ್ ಆಗಿದ್ದಾರೆ.
ಮಹಿಳೆ ಹೇಳುವ ಪ್ರಕಾರ ಯಾರೋ ನನ್ನ ಎಳೆದುಕೊಂಡು ಹೋದರು ಎನ್ನುತ್ತಿದ್ದಾಳೆ.
ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತೆ ಆಗಸ್ಟ್ 20 ರಂದು ನಸುಕಿನ ಜಾವ ಮನೆಯ ಅಂಗಳದಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿಗೆ ಬಂದ ಅಪರಿಚಿತ ಮಹಿಳೆಯೊಬ್ಬಳು ಆಕೆಯನ್ನು ಎಳೆದುಕೊಂಡು ಹೋಗಿದ್ದಾಳೆ ಎನ್ನುತ್ತಿದ್ದಾಳೆ.
ನವವಿವಾಹಿತೆಯ ಕುತ್ತಿಗೆ ಭಾಗ ಹಿಡಿದು ಮನೆ ಬಿಟ್ಟು ಬರುವಂತೆ ಬಲವಂತ ಮಾಡಿದ್ದಾಳೆ. ಮಾತ್ರವಲ್ಲದೇ ನನ್ನ ಕೈಬಳೆ, ಕಾಲುಂಗರ ನೀಡುವಂತೆ ಅಪರಿಚಿತ ಮಹಿಳೆ ಒತ್ತಾಯ ಮಾಡಿದ್ದಳು. ಇನ್ನು ನನ್ನ ಕಣ್ಣಿಗೆ ಕಾಣದಂತೆ ಮರೆಯಾಗಿ ಕುತ್ತಿಗೆ ಹಿಡಿದು ಭಯಪಡಿಸಿದ್ದಳಂತೆ.
ಗೋವಿನ ಜೋಳ ಹೊಲದ ಮೂಲಕ ನನ್ನನ್ನು ಎಳೆದುಕೊಂಡು ಹೋಗಿ ಅನಂತರ ತಾಳಿ ಕೇಳಿ ನನ್ನನ್ನು ಬಾವಿಗೆ ತಳ್ಳಿದ್ದಳು. ಬಾವಿಗೆ ಬಿದ್ದ ಮಾರನೇ ದಿನ ನನಗೆ ಪ್ರಜ್ಞೆ ಬಂದಿತ್ತು. ಆಗ ಎಷ್ಟೇ ಕಿರುಚಿದರೂ ಸಹಾಯಕ್ಕೆ ಯಾರು ಬರಲಿಲ್ಲ.
ಆ. 22 ರಂದು ಧ್ವನಿ ಕೇಳಿದ ಜನರು ನನ್ನ ಕಾಪಾಡಿದ್ದಾರೆ. ಆದರೆ ಯಾರು ನನ್ನ ಹೀಗೆ ಎಳೆದುಕೊಂಡು ಹೋದರು ಎನ್ನುವ ನಿಖರ ಮಾಹಿತಿ ಇಲ್ಲ ಎಂದಿದ್ದಾಳೆ.
ಈ ವಿಚಿತ್ರ ರೀತಿಯ ಘಟನೆಗೆ ಗ್ರಾಮದ ಇತರೆ ಮಹಿಳೆಯರು ಆತಂಕಗೊಂಡಿದ್ದಾರೆ. ನಸುಕಿನ ಜಾವ ಓಡಾಡಲು ಹೆದರುವಂತಾಗಿದೆ. ಸದ್ಯ ಈ ಸಂಬಂಧ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಪೊಲೀಸರನ್ನು ಸಂಪರ್ಕಿಸಿದ್ದರೋ ಇಲ್ಲವೋ ಎನ್ನುವ ಕುರಿತು ಯಾವುದೇ ಮಾಹಿತಿ ಇಲ್ಲ.