Site icon Vistara News

Psycho Killer: ಕುಡಿದು ಬರ್ತಾನೆ, ಮಲಗಿದ್ದವರ ತಲೆ ಮೇಲೆ ಕಲ್ಲು ಎಸೆದು ಸಾಯಿಸ್ತಾನೆ! ಕಿಲ್ಲರ್‌ ಅಂದರ್‌!

Psycho Killer Girish throws a stone on the head of the sleeping person and kills

ಬೆಂಗಳೂರು: ಒಂದೇ ವಾರದಲ್ಲಿ ಎರಡು ಕೊಲೆ ಮಾಡಿದ್ದ (Psycho Killer)ನಟೋರಿಯಸ್ ಕೊಲೆಗಾರನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಬನಶಂಕರಿ ನಿವಾಸಿ ಗಿರೀಶ್ (Psycho Killer Girish) ಬಂಧಿತ‌ ಆರೋಪಿ. ಈ ಕೊಲೆಗಾರನ ಕೃತ್ಯ ಕೇಳಿದರೆ ಗಾಬರಿ ಆಗೋದು ಗ್ಯಾರಂಟಿ. ಈತ ಕುಡಿದು ಬರ್ತಾನೆ, ಬೀದಿ ಬದಿ ಮಲಗಿದ್ದವರ ತಲೆ ಮೇಲೆ ಕಲ್ಲು ಎಸೆದು ಸಾಯಿಸುತ್ತಾನೆ. ಅಲ್ಲಿಂದ ಪರಾರಿಯಾಗ್ತಾನೆ! ಒಂದೇ ವಾರದಲ್ಲಿ ಆರೋಪಿ ಗಿರೀಶ್ ಎರಡು ಕೊಲೆ ಮಾಡಿದ್ದಾನೆ.

ಏನಿದು ಪ್ರಕರಣ?

ಮೇ.12 ರಂದು ಜಯನಗರ 7ನೇ ಬಡಾವಣೆಯಲ್ಲಿ ವ್ಯಕ್ತಿಯೊಬ್ಬರ ಕೊಲೆಯಾಗಿತ್ತು. ಶವ ನೋಡಿದಾಗ ಯಾರೋ ಎಳೆದು ತಂದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದಂತೆ ಕಂಡಿತ್ತು. ಘಟನೆ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ಮೇ.18 ರಂದು ಸಿಟಿ ಮಾರ್ಕೆಟ್ ಹಿಂಭಾಗದ ಕಾಂಪ್ಲೆಕ್ಸ್‌ನಲ್ಲಿ ಇದೇ ರೀತಿಯೇ ಮತ್ತೊಂದು ಕೊಲೆ ಆಗಿತ್ತು. ವ್ಯಕ್ತಿಯೋರ್ವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು.

ಈ ಘಟನೆ ಸಂಬಂಧ ಕೊಲೆ ಪ್ರಕರಣವನ್ನು ಮಾರ್ಕೆಟ್ ಪೊಲೀಸರು ದಾಖಲಿಸಿಕೊಂಡಿದ್ದರು. ಈ ರೀತಿ ಎರಡು ಪ್ರಕರಣ ಆದ ಬೆನ್ನಲ್ಲೇ ಬನಶಂಕರಿ ಹಾಗೂ ಕೆ.ಆರ್.ಮಾರ್ಕೆಟ್ ಪೊಲೀಸರು ಎಚ್ಚೆತ್ತುಕೊಂಡು ಆರೋಪಿಯ ಹುಡುಕಾಟ ನಡೆಸಿದ್ದರು. ಈಗ ಸೈಕೋ ಕಿಲ್ಲರ್‌ನಂತೆ ವರ್ತನೆ ಮಾಡಿದ್ದ ಆರೋಪಿ ಗಿರೀಶ್‌ ಅರೆಸ್ಟ್‌ ಆಗಿದ್ದಾನೆ.

ಇದನ್ನೂ ಓದಿ: Hassan Accident: ಹಾಸನದಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಐವರ ದುರ್ಮರಣ

ಗಿರೀಶ್ ಬನಶಂಕರಿ ನಿವಾಸಿ. ಕುಡಿದು ಬಂದು , ಬೀದಿ ಬದಿ ಮಲಗಿದ್ದವರ ತಲೆಮೇಲೆ ಕಲ್ಲೆಸೆದು ಸಾಯಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಒಂದೇ ವಾರದಲ್ಲಿ ಎರಡೆರಡು ಕೊಲೆ ಮಾಡಿದ್ದ ಆಸಾಮಿ ಕೊನೆಗೂ ಅಂದರ್ ಆಗಿದ್ದಾನೆ.

ಹಾಸನದಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಐವರ ದುರ್ಮರಣ

ಹಾಸನ ಹೊರವಲಯದ ಈಚನಹಳ್ಳಿ (Ichanahalli Village) ಬಳಿ ಕಾರು ಹಾಗೂ ಟ್ರಕ್ ನಡುವೆ ಭೀಕರ ಅಪಘಾತ (ಮೇ.26) ಸಂಭವಿಸಿದೆ. ಸ್ಥಳದಲ್ಲೇ ಐವರು ಮೃತಪಟ್ಟಿದ್ದಾರೆ. ಡಿಕ್ಕಿ ರಭಸಕ್ಕೆ ಕಾರು ನಜ್ಜುಗುಜ್ಜು (Five died on the spot) ಆಗಿದೆ. ಮೃತದೇಹಗಳನ್ನು ಹೊರಗೆ ತೆಗೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ (Hassan Accident Terrible accident) ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಕಾರಿನಲ್ಲಿದ್ದ ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಮೃತಪಟ್ಟಿರುವುದಾಗಿ ತಿಳುದು ಬಂದಿದೆ. ಸ್ಥಳಕ್ಕೆ ಎಸ್ಪಿ ಮಹಮದ್ ಸುಜೇತಾ ಭೇಟಿ ನೀಡಿದ್ದಾರೆ. ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Exit mobile version